ಬಿಜೆಪಿ ಸರ್ಕಾರ ಬಂದ್ರೆ ಬಿ.ಎಸ್.ವೈ ಮನೆ ವಾಚ್ ಮನ್ ಆಗ್ತೇನೆ- ಜಮೀರ ಅಹ್ಮದ್

ಹುಬ್ಬಳ್ಳಿ,ಮೇ.15- ಚುನಾವಣೆ ಫಲಿತಾಂಶದ ನಂತರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿದರೆ ತಾವು ಬಿ.ಎಸ್.ಯಡಿಯೂರಪ್ಪನವರ ಮನೆಯ ಮುಂದೆ ವಾಚಮನ್ ಕೆಲಸ ಮಾಡಲು ಸಿದ್ಧವಿರುವುದಾಗಿ ಸಚಿವ ಜಮೀರ ಅಹ್ಮದಖಾನ್ ಘೋಷಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಗೆ ಮಾತಾಡಿದ ಅವರು ಚುನಾವಣೆ ನಂತರ ಯಾವುದೇ ಬದಲಾವಣೆ ಆಗುವುದಿಲ್ಲ, ಅದೆಲ್ಲ ಕನಸಿನ ಮಾತು ಎಂದು ನುಡಿದರು.
ಮಾಜಿ ಡಿ.ಸಿ.ಎಂ. ಕೆ.ಎಸ್. ಈಶ್ವರಪ್ಪ ಮಾತಿಗೆ ಬೆಲೆ ಕೊಡುವ ಅಗತ್ಯವಿಲ್ಲ, ಕೊಚ್ಚೆ ಮೇಲೆ ಕಲ್ಲು ಎಸೆದರೆ ಅದು ನಮಗೇ ಸಿಡಿಯುತ್ತದೆ ಎಂದವರು ಚಾಟಿ ಬೀಸಿದರು.
ಕಳ್ಳ, ಸುಳ್ಳ ಎಂದು ಹೇಳಲು ಅವನ್ಯಾರು? ಅವನಿಗೆ ಕಳ್ಳತನ ಮಾಡಿ ಅಭ್ಯಾಸವಿರಬೇಕು ಅದಕ್ಕೇ ಎಲ್ಲರಿಗೂ ಕಳ್ಳರು ಎನ್ನುತ್ತಿರುವುದು ಈಶ್ವರಪ್ಪ ಒಬ್ಬ ಮನುಷ್ಯನಾ? ಎಂದವರು ಪಶ್ನಿಸಿದರು.
ನಾನು ಜೆಡಿ.ಎಸ್. ನಲ್ಲಿ ಇದ್ದಾಗ ಪಕ್ಷಕ್ಕೆ ನಿಷ್ಠನಾಗಿದ್ದೆ, ಈಗ ಕಾಂಗ್ರೆಸ್ ನಲ್ಲಿ ಇದ್ದೇನೆ ಸಿದ್ಧರಾಮಯ್ಯ ನಮ್ಮ ನಾಯಕರು ಎಂದು ಜಮೀರ ಅಹ್ಮದಖಾನ್ ಹೇಳಿದರು.

Leave a Comment