ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ತಿ.ನರಸೀಪುರ ಜು.11: ಪಟ್ಟಣದ ಚನ್ನಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷರು ಹಾಗೂ ವಿದ್ಯಾರ್ಥಿಗಳನ್ನು ಬಿ.ಜೆ.ಪಿ.ಪಕ್ಷದ ಸದಸ್ಯತ್ವ ಪಡೆಯುವಂತ್ತೆ ಬಿಜೆಪಿ ಕ್ಷೇತ್ರಾಧ್ಯಕ್ಷ ಹೆಚ್.ಎಂ.ಪರಶಿವಮೂರ್ತಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಭಾರತ ದೇಶಾದ್ಯಂತ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಈ ಬಾರಿಯೂ ಕೂಡ 20 ಕೋಟಿಗೂ ಅಧಿಕ ಸದಸ್ಯತ್ವವನ್ನು ಬಿಜೆಪಿ ಪಕ್ಷ ಪಡೆಯಲಿದೆ. ಪಕ್ಷ ಸಂಘಟನೆಯ ಉದ್ದೇಶದಿಂದ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಶಿಕ್ಷಕರನ್ನು ನೋಂದಣಿ ಮಾಡಲಾಗುತ್ತಿದೆ.
ತಾಲ್ಲೂಕಿನ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೂ ಬೇಟಿ ನೀಡಿ ಸದಸ್ಯತ್ವ ನೋಂದಣಿ ಮಾಡವುವ ಮೂಲಕ ರಾಷ್ಟ್ರೀಯ ಅಧ್ಯಕ್ಷರು ಹೇಳಿರುವ ಗುರಿ ಮುಟ್ಟಲಾಗುವುದು ಪ್ರತಿಯೊಂದು ಬೂತ್ ನಲ್ಲಿ 50 ನೂತನ ಸದಸ್ಯರನ್ನು ಭಾರತೀಯ ಜನಾತ ಪಕ್ಷದ ಸದಸ್ಯರನ್ನಾಗಿ ನೊಂದಾಯಿಸಲು ಶ್ರಮಿಸಲಾಗುವುದು ಒಂದು ಕ್ಷೇತ್ರಕ್ಕೆ ಖನಿಷ್ಠ 100ಜನರ ಸದಸ್ಯತ್ವವನ್ನು ಮಾಡಲಾಗುತ್ತಿದೆ ಎಂದುರು. ಜಿಲ್ಲಾ ಪ್ರದಾನ ಕಾರ್ಯದರ್ಶಿ ಮಾರ್ಬಳ್ಳಿ ಮೂರ್ತಿ ಮಾತಾನಾಡಿ ದೇಶದ ಪರವಾಗಿ ಇಂದು ಚಿಂತನೆ ಮಾಡುತ್ತಿರುವ ಪಕ್ಷ ಬಿ ಜೆ ಪಿ ಪಕ್ಷವಾಗಿದ್ದು ಆ ಪಕ್ಷದಲ್ಲಿ ಸದಸ್ಯತ್ವ ಹೊಂದುವುದೆ ಹೆಮ್ಮೆಯ ವಿಷಯವಾಗಿರುವುದರಿಂದ ತಾವು ಬಿ.ಜೆ.ಪಿ ಪಕ್ಷದ ಸದಸ್ಯತ್ವ ಪಡೆಯ ಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಂದೀಶ್,ಭಾಗ್ಯಶ್ರೀ ಭಟ್ , ಪುರಸಭೆ ಸದಸ್ಯರುಗಳಾದ ಎಸ್ .ಕೆ.ಕಿರಣ್ ,ರೂಪಶ್ರೀ ಪರಮೇಶ್ ,ತಾ.ಪಂ.ಸದಸ್ಯೆ ಶಿವಮ್ಮ,ಮಾಜಿ ಜಿ ಪಂ ಸದಸ್ಯ ಲೋಕೇಶ್ ನಾಯಕ ,ತಾ.ಪ್ರದಾನ ಕಾರ್ಯದರ್ಶಿ ಕರೋಹಟ್ಟಿಬಸವರಾಜು, ಕರೋಹಟ್ಟಿಮಹದೇವಯ್ಯ, ಜಿಲ್ಲಾ ವೀರಶೈವ ಮಹಾಸಭೆಯ ಉಪಾಧ್ಯಕ್ಷ ಶಂಭುದೇವನಪುರ ಸುರೇಶ್ ,ಜಯಣ್ಣ,ಶಕ್ತಿ ಕೇಂದ್ರದ ಅಧ್ಯಕ್ಷ ವಿಜಯಕುಮಾರ್ , ಮಣಿಕಂಠರಾಜ್ ಗೌಡ ,ವಾಟಾಳುಪುರ ನಾಗೇಶ ,ಕುಮಾರ್ ,ಕಾರ್ ಮಲ್ಲಪ್ಪ ,ಚೌಹಳ್ಳಿಸಿದ್ದರಾಜು,ಬನ್ನಹಳ್ಳಿಹುಂಡಿ ಪ್ರಕಾಶ್ , ಕೊತ್ತೇಗಾಲ ಕಿಟ್ಟಿ ಮತ್ತಿತರರು

Leave a Comment