ಬಿಜೆಪಿ ಶಾಸಕರು ರೆಸಾರ್ಟ್​ಗೆ ತೆರಳಲು ಸಿದ್ಧತೆ?

ಬೆಂಗಳೂರು: ಸಿಎಂ ಎಚ್.ಡಿ. ಕುಮಾರಸ್ವಾಮಿ ವಿಶ್ವಾಸಮತ ಯಾಚಿಸಲು ತಾವು ಸಿದ್ಧ ಎಂದು ವಿಧಾನಸಭೆ ಕಲಾಪದಲ್ಲಿ ಹೇಳಿಕೆ ನೀಡಿರುವುದು ಈಗ ಬಿಎಸ್‌ವೈಗೆ ಹೊಸ ಚಿಂತನೆಯೊಂದು ಶುರುವಾಗಲಿದ್ದು, ಈ ನಡುವೆ ತಮ್ಮ ಪಕ್ಷದ ಶಾಸಕರನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ರೆಸಾರ್ಟ್ಗೆ ಕರೆದೊಯ್ಯಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಪ್ರಾಥಮಿಕ ಮೂಲಗಳ ಪ್ರಕಾರ ಇಂದು ಸಂಜೆಯೊಳಗೆ ಬೆಂಗಳೂರಿನ ಹೊರಹೊಲಯದಲ್ಲಿರುವ ರೆಸಾರ್ಟ್ಗೆ ಕರೆದುಕೊಂಡು ಹೋಗಲಿದ್ದಾರೆ ಎನ್ನಲಾಗಿದೆ.

ಅಂದಹಾಗೇ, ಜೆಡಿಎಸ್ ನ ಕೆಲ ನಾಯಕರು ಸಂಪರ್ಕಿಸಿರುವ, ರಿವರ್ಸ್ ಆಪರೇಷನ್ ಗೆ ಒಳಗಾಗಿ, ಬಿಜೆಪಿಗೆ ಕೈ ಕೊಡಲು ಹೊರಟಿರುವ ಬಿಜೆಪಿ ಶಾಸಕರಂದರೇ, ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಡೇಸೂಗೂರು, ಹೊಸದುರ್ಗ ಕ್ಷೇತ್ರದ ಶಾಸಕ ಗೂಳಿಹಟ್ಟಿ ಶೇಖರ್ ಮತ್ತು ತುರುವೇಕೆರೆ ಶಾಸಕ ಮಸಾಲೆ ಜಯರಾಂ ಎಂದು ಹೇಳಲಾಗುತ್ತಿದೆ.

ಈ ಮೂವರು ಶಾಸಕರು ರಿವರ್ಸ್ ಆಪರೇಷನ್ ಗೆ ಒಳಗಾಗಿದ್ದಾರೆ ಎನ್ನಲಾಗಿದ್ದು, ಮೈತ್ರಿ ನಾಯಕರು ತಮ್ಮ ಪಕ್ಷಗಳತ್ತ ಸೆಳೆಯಲು ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಹೆದರಿರುವ ರಾಜ್ಯ ಬಿಜೆಪಿ, ತಮ್ಮ ಶಾಸಕರನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ರೆಸಾರ್ಟ್ ಗೆ ಕರೆದೊಯ್ದು ಇಡಲಾಗುತ್ತಿದೆ.

Leave a Comment