ಬಿಜೆಪಿ ವಿರುದ್ಧ ಜನಾಂದೋಲನ 19 ರಂದು

ಕಲಬುರಗಿ ಆ 17: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರದ ನೀತಿಗಳ ವಿರುದ್ಧ ಸಿಪಿಐ,ಕಾಂಗ್ರೆಸ್, ಜೆಡಿಎಸ್ ಮತ್ತಿತರ ಪಕ್ಷ ಮತ್ತು ಸಂಘಟನೆಗಳು  ಸೇರಿ ಆ.19 ರಂದು ನಗರದ ಕನ್ನಡಭವನದಲ್ಲಿ ಸಂವಿಧಾನ ರಕ್ಷಿಸಿ ದೇಶ ಉಳಿಸಿ ಕೋಮುವಾದ ಅಳಿಸಿ ಜನಾಂದೋಲನ ಕಾರ್ಯಕ್ರಮ ಹಮ್ಮಿಕೊಂಡಿವೆ ಎಂದು  ಸಿಪಿಐ ಜಿಲ್ಲಾ ಕಾರ್ಯದರ್ಶಿ ಭೀಮಾಶಂಕರ ಮಾಡಿಯಾಳ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಹತ್ತಾರು ಸುಳ್ಳುಭರವಸೆಗಳನ್ನು ನೀಡಿ ಧರ್ಮಜಾತಿಭಾವನೆಗಳನ್ನು ಕೆರಳಿಸಿ ಉದ್ಯಮಿಗಳ ಹಣಬಲ ಬಳಸಿಕೊಂಡು ಅಧಿಕಾರಕ್ಕೆ ಬಂದ ನರೇಂದ್ರಮೋದಿ ನೇತೃತ್ವದ ಸರಕಾರ ಆಡಳಿತದಲ್ಲಿ ಸಂಪೂರ್ಣವಿಫಲವಾಗಿದೆ ಎಂದು ದೂರಿದರು

ಜನಾಂದೋಲನಕಾರ್ಯಕ್ರಮವನ್ನು ಸಿಪಿಐ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ವಿಜಯಭಾಸ್ಕರ ಡಿ.ಎ ಉದ್ಘಾಟಿಸುವರು.ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಲ್ಲಮಪ್ರಭು ಪಾಟೀಲ,  ಜೆಡಿಎಸ್ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ದೇವೇಗೌಡ ತೆಲ್ಲೂರ, ಆಲ್ ಇಂಡಿಯಾ ತಂಜೀಮೆ ಇನ್ಸಾಫ್ ರಾಜ್ಯ ಸಂಚಾಲಕ ಮೌಲಾಮುಲ್ಲಾ, ಕರಾದಸಂಸ  ರಾಜ್ಯ ಸಂಘಟನಾ ಸಂಚಾಲಕ ಅರ್ಜುನಭದ್ರೆ, ಕರ್ನಾಟಕ ಸಮತಾ ಸೈನಿಕ ದಳದ ವಿಭಾಗೀಯ ಅಧ್ಯಕ್ಷ ಸಂಜೀವ ಮಾಲೆ ಮತ್ತು  ದಲಿತಶೋಷಿತ ಸಮಾಜ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಧರ್ಮಣ್ಣಕೊಣೆಕರ ಭಾಗವಹಿಸುವರು ಎಂದರು.

Leave a Comment