ಬಿಜೆಪಿ ಪಕ್ಷದ ಅಭ್ಯರ್ಥಿ ಪರ ಮತಯಾಚನೆ

ಹನೂರು: ಏ.16- ಚುನಾವಣೆ ಬಹಿರಂಗ ಪ್ರಚಾರದಕೊನೆಯ ದಿನವಾದಇಂದು ಬೆಳಿಗ್ಗೆ ಹನೂರು ಪಟ್ಟಣದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ವಿ.ಶ್ರೀನಿವಾಸ ಪ್ರಸಾದ್ ಪರ ಮುಖಂಡರಾದ ದತ್ತೇಶ್‍ಕುಮಾರ್ ನೇತೃತ್ವದಲ್ಲಿ ಬಿರುಸಿನ ಮತ ಪ್ರಚಾರವನ್ನು ಕೈಗೊಳ್ಳಲಾಯಿತು.
ಅಪಾರ ಸಂಖ್ಯೆಯಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರು ಹನೂರು ಪಟ್ಟಣದ ಬೀದಿ ಬೀದಿಗಳಲ್ಲಿ ಸಂಚರಿಸಿ ವಿ.ಶ್ರೀನಿವಾಸ ಪ್ರಸಾದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಪರ ಘೋಷಣೆಗಳನ್ನು ಕೂಗುತ್ತಾ ಮತದಾರರಿಗೆ ಮತಕರ ಪತ್ರಗಳನ್ನು ಹಂಚಿ ಬಿಜೆಪಿ ಪಕ್ಷದ ಕಮಲದ ಗುರುತಿಗೆ ಮತವನ್ನು ನೀಡಿಎಂದು ಮನವಿ ಮಾಡಿದರು.
ಈ ವೇಳೆ ಬಿಜೆಪಿ ಮುಖಂಡದ ದತ್ತೇಶ್‍ಕುಮಾರ್ ಮತದಾರರನ್ನುದ್ದೇಶಿ ಮಾತನಾಡಿ, ಹಿರಿಯರಾಜಕೀಯ ಮುತ್ಸದ್ಧಿ ಹಾಗೂ ಸ್ವಾಭಿಮಾನಿ ವಿ.ಶ್ರೀನಿವಾಸ ಪ್ರಸಾದ್‍ರವರು ಅಪಾರ ರಾಜಕೀಯ ಅನುಭವವನ್ನು ಹೊಂದಿರುವಂತವರು ಅವರು ಜಯಶೀಲರಾದರೆ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡುತ್ತಾರೆ. ಚಾಮರಾಜನಗರ ಮೀಸಲು ಲೋಕಸಭಾಕ್ಷೇತ್ರದಿಂದ ವಿ.ಶ್ರೀನಿವಾಸ ಪ್ರಸಾದ್‍ರವರನ್ನುಗೆಲ್ಲಿಸುವ ಮೂಲಕ ಚೌಕಿದಾರ ನರೇಂದ್ರ ಮೋದಿಯವರ ಕೈ ಬಲಪಡಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಪ್ರೀತನ್‍ನಾಗಪ್ಪ, ಹನೂರು ಬಿಜೆಪಿ ಮಂಡಲ ಅಧ್ಯಕ್ಷ ಬೂದುಬಾಳು ವೆಂಕಟಸ್ವಾಮಿ, ಬಿ.ಕೆ.ಶಿವಕುಮಾರ್, ವೆಂಕಟೇಗೌಡ, ನಾಗರಾಜು, ರವೀಂದ್ರಚಿಕ್ಕಮರಿಗೌಡ, ವೆಂಕಟರಾಜು ಹಾಗೂ ಅಪಾರ ಸಂಖ್ಯೆಯ ಬಿಜೆಪಿ ಕಾರ್ಯಕರ್ತರುಇದ್ದರು.

Leave a Comment