ಬಿಜೆಪಿ ನಾಯಕರದ್ದು ನಾಟಕ : ತನ್ವೀರ್ ಸೇಠ್

ಬೆಂಗಳೂರು, ಜು 16 – ಮೈತ್ರಿ ಶಾಸಕರ ರಾಜೀನಾಮೆ ಹಿಂದೆ ತಮ್ಮ ಕೈವಾಡ ಇಲ್ಲ ಎಂದು ಹೇಳುವ ಬಿಜೆಪಿ ನಾಯಕರು ಸಚಿವ ಎಂಟಿಬಿಯನ್ನು ಕರೆದುಕೊಂಡು ಹೋಗಿದ್ದು , ಶಾಸಕ ರೋಷನ್ ಬೇಗ್ ಅವರನ್ನು ಕರೆದುಕೊಂಡು ಹೋಗಲು ಬಂದವರು ಯಾರು ಎಂದು ಮಾಜಿ ಸಚಿವ ತನ್ವೀರ್ ಸೇಠ್ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರ ನಾಟಕ ಎಲ್ಲರಿಗೂ ಗೊತ್ತಿದ್ದು,

ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಗೊತ್ತಾಗುವುದಿಲ್ಲವೇ ಎಂದು ಮಾರ್ಮಿಕವಾಗಿ ನುಡಿದರು.
ಗುರುವಾರ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಹುಮತ ಸಾಬೀತು ಪಡಿಸುವಲ್ಲಿ ಯಶಸ್ವಿಯಾಗುತ್ತಾರೆ ಎಂದರು.

Leave a Comment