ಬಿಜೆಪಿ ಜಿಲ್ಲಾಧ್ಯಕ್ಷರ ಪದಗ್ರಹಣ 19 ರಂದು

ಕಲಬುರಗಿ ಫೆ 17: ಭಾರತೀಯ ಜನತಾ ಪಕ್ಷದ ಕಲಬುರಗಿ ಗ್ರಾಮಾಂತರ ಜಿಲ್ಲೆ ಮತ್ತು ಕಲಬುರಗಿ ಮಹಾನಗರ ಜಿಲ್ಲೆ ಅಧ್ಯಕ್ಷರ ಪದಗ್ರಹಣ  ಸಮಾರಂಭ ಫೆಬ್ರವರಿ 19 ರಂದು ಸಂಜೆ 5 ಗಂಟೆಗೆ ನಗರದ ನೂತನ ಮಹಾ ವಿದ್ಯಾಲಯ ಆವರಣದ ಸತ್ಯಪ್ರಮೋದ ತೀರ್ಥ ವೇದಿಕೆಯಲ್ಲಿ ನಡೆಯಲಿದೆ.

ಗ್ರಾಮಾಂತರ ಜಿಲ್ಲೆ ಅಧ್ಯಕ್ಷರಾಗಿ ಶಿವರಾಜ ಪಾಟೀಲ ರದ್ದೇವಾಡಗಿ ,ಮಹಾನಗರ ಜಿಲ್ಲೆ ಅಧ್ಯಕ್ಷರಾಗಿ ಸಿದ್ಧಾಜಿ ಪಾಟೀಲ ಅವರು ಅಂದು ಅಧಿಕಾರ ವಹಿಸುವರು ಎಂದು ಬಿಜೆಪಿ ಹಿರಿಯ ಮುಖಂಡ, ಮಾಜಿ ಎಂಎಲ್ಸಿ ಅಮರನಾಥ ಪಾಟೀಲ ಅವರು  ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ ಅವರು ಆಗಮಿಸುವರು. ಜಿಲ್ಲೆಯ ಪಕ್ಷದ ಎಲ್ಲ ಮುಖಂಡರು  8 ಮಂಡಲಗಳ ಮತ್ತು ಎಲ್ಲ ಬೂತ್ ಮಟ್ಟದ ಪದಾಧಿಕಾರಿಗಳು ಸೇರಿದಂತೆ  ಸುಮಾರು 6 ಸಾವಿರ ಜನ ಕಾರ್ಯಕರ್ತರು ಭಾಗವಹಿಸುವರು.ಮಧ್ಯಾಹ್ನ 3 ಗಂಟೆಗೆ ಶರಣಬಸವೇಶ್ವರ ದೇವಸ್ಥಾನದಿಂದ ವೇದಿಕೆಯವರೆಗೆ ಮೆರವಣಿಗೆ ಮತ್ತು . ಯುವ ಕಾರ್ಯಕರ್ತರ ಬೈಕ್ ರ್ಯಾಲಿ ನಡೆಯಲಿದೆ ಎಂದರು.

ನಗರದ ಕೋರಂಟಿ ಹನುಮಾನ ದೇವಸ್ಥಾನದ ಹತ್ತಿರ 1 ಎಕರೆ ವಿಸ್ತೀರ್ಣದ ಜಮೀನಿನಲ್ಲಿ ಪಕ್ಷದ ಸ್ವಂತ ಕಟ್ಟಡ ತಲೆ ಎತ್ತಲಿದೆ.ಕಲ್ಯಾಣ ಕರ್ನಾಟಕದ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕøತಿಕ ಸಂಘದ ರಚಿಸಿದ್ದು ಇದು  ಕೆಕೆಆರ್‍ಡಿಬಿಯನ್ನು  ದುರ್ಬಲಗೊಳಿಸುವದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸುದ್ದಿಗೋಷ್ಠಿಯಲ್ಲಿ ಶಿವರಾಜ ಪಾಟೀಲ ರದ್ದೇವಾಡಗಿ ,ಸಿದ್ಧಾಜಿ ಪಾಟೀಲ, ವಿದ್ಯಾಸಾಗರ ಕುಲಕರ್ಣಿ, ಚಂದು ಪಾಟೀಲ, ಹರ್ಷವರ್ಧನ ಗುತ್ತೇದಾರ, ಗುರುಶಾಂತ ಪಾಟೀಲ ಉಪಸ್ಥಿತರಿದ್ದರು..

Leave a Comment