ಬಿಜೆಪಿ ಕಚೇರಿಯಲ್ಲಿ ವಾಜಪೇಯಿ ಗುಣಗಾನ

ಬೆಂಗಳೂರು, ಆ. ೧೭- ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಬಿಜೆಪಿ ಕಚೇರಿಯಲ್ಲಿಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ವಾಜಪೇಯಿ ಅವರೊಂದಿಗೆ ನಿಕಟ ಸಂಬಂಧವಿಟ್ಟುಕೊಂಡಿದ್ದ ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ, ರಾಮಚಂದ್ರೇಗೌಡ ಹಾಗೂ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಮತ್ತಿತರರು ವಾಜಪೇಯಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು.
ಆರ್. ಅಶೋಕ್ ಅವರು ಮಾತನಾಡಿ, ದೈನ್ಯಂ…ನ ಪಲಾಯನಂ ಎನ್ನುವ ಮಾತುಗಳನ್ನು ಸ್ಮರಿಸಿಕೊಂಡು ವಾಜಪೇಯಿ ಅವರ ಗುಣಗಾನ ಮಾಡಿದರು.
ಪಕ್ಷದಲ್ಲಿ ವಿವಿಧ ಹಂತಗಳಲ್ಲಿ ಅಧಿಕಾರವನ್ನು ಅನುಭವಿಸಿದ್ದೇವೆ. ಅದಕ್ಕೆ ಕಾರಣ ವಾಜಪೇಯಿ ಅವರೆ. ಪ್ರತಿಪಕ್ಷಗಳಲ್ಲದೆ ಪಾಕಿಸ್ತಾನದ ರಾಜಕಾರಣಿಗಳು ವಾಜಪೇಯಿ ಅವರನ್ನು ಕೊಂಡಾಡಿದ್ದಾರೆ. ಹಾಗಾಗಿ, ಅವರು ಅಜಾತಶತ್ರು ಎಂದು ಬಣ್ಣಿಸಿದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಅವರು ಮಾತನಾಡಿ, ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಅವರೇ ಸರಿಸಾಟಿ. ವಾಜಪೇಯಿ ಅವರು ಇದ್ದ ಪಕ್ಷದಲ್ಲೇ ನಾವು ಇದ್ದೇವೆ ಎಂದು ಬಣ್ಣಿಸಿದರು.
ಮಾಜಿ ಸಭಾಪತಿ ಶಂಕರಮೂರ್ತಿ ಅವರು ವಾಜಪೇಯಿ ಅವರು ಬಂದಾಗಲೆಲ್ಲ ನಮ್ಮ ಮನೆಯಲ್ಲೇ ಉಳಿದುಕೊಳ್ಳುತ್ತಿದ್ದುದನ್ನು ಸ್ಮರಿಸಿದರು.
ಪಕ್ಷದ ಮುಖಂಡರಾದ ವಿ. ಸೋಮಣ್ಣ, ಜಗ್ಗೇಶ್, ಅಬ್ದುಲ್ ಅಜೀಂ, ಭಾರತಿಶೆಟ್ಟಿ, ಪಿ.ಎನ್ ಸದಾಶಿವ, ಪದ್ಮನಾಭ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

Leave a Comment