ಬಿಜೆಪಿ ಅಭ್ಯರ್ಥಿ ಆನಂದ್​ಸಿಂಗ್​ ಮಗನ ಮದುವೆ ‘ಆಮಂತ್ರಣ ಪತ್ರಿಕೆ’ ವೈರಲ್

ಬಳ್ಳಾರಿ : ವಿಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದಸಿಂಗ್ ಅವರ ಮಗನ ಮದುವೆ ಮಹೋತ್ಸವಕ್ಕೆ ಎಲ್ಲಾ ರೀತಿಯ ಸಿದ್ದತೆಗಳು ನಡೆಯುತ್ತಿದ್ದಾವೆ. ಈ ನಡುವೆ ಗಣ್ಯರಿಗಾಗಿ ಮಾಡಿಸಿರುವ ಮದುವೆಯ ಆಮಂತ್ರಣ ಪತ್ರಿಕೆ ನೋಡಿದರೆ ನೀವು ಶಾಕ್‌ ಆಗೋದು ಫಿಕ್ಸ್, ಹೌದು, ಆಮಂತ್ರಣ ಪತ್ರಿಕೆಯ ತೂಕವೇ ಬರೋಬ್ಬರಿ 2 ಕೆ.ಜಿ ಇದೆ.ಆಮಂತ್ರಣ ಪತ್ರಿಕೆಯ ಐದು ಪುಟಗಳನ್ನೂ ವಿಶೇಷವಾಗಿ ವಿನ್ಯಾಸ ಮಾಡಿದ್ದು, . ಆರಂಭದಲ್ಲಿ ತಿರುಪತಿ ವೆಂಕಟೇಶ್ವರ ದೇವರ ಚಿತ್ರ ಇದೆ. ಒಂದು ಆಮಂತ್ರಣ ಪತ್ರಿಕೆಗೆ ₹ 4 ಸಾವಿರ ಖರ್ಚು ಮಾಡಲಾಗಿದೆ ಎನ್ನಲಾಗಿದೆ.

ಇನ್ನು ನಂದಗೋಕುಲದ ಹತ್ತು ಎಕರೆ ಬಯಲಿನಲ್ಲಿ ಮದುವೆಗೆ ತಿರುಪತಿ ದೇವಾಲಯ ಹೋಲುವ ಸೆಟ್‌ ಹಾಕಲಾಗಿದೆ. ಮದುವೆ ಕಾರ್ಯ ಮತ್ತು ಆರತಕ್ಷತೆಗೆ ಪ್ರತ್ಯೇಕ ಶಾಮಿಯಾನ ಹಾಕಲಾಗಿದೆ. ಭವ್ಯವಾದ ಸ್ವಾಗತ ಕಮಾನು ನಿರ್ಮಿಸಲಾಗಿದೆ. ರಜಪೂತ ಶೈಲಿಯ ಊಟದ ವ್ಯವಸ್ಥೆ ಮಾಡಲಾಗಿದೆ. 100ಕ್ಕೂ ಹೆಚ್ಚು ಬಗೆಯ ಖಾದ್ಯಗಳನ್ನು ತಯಾರಿಸಲಾಗುತ್ತಿದೆ. ಶಾಮಿಯಾನ, ಶೆಡ್‌ ನಿರ್ಮಿಸಲು ತಿಂಗಳ ಹಿಂದೆಯೇ ನವದೆಹಲಿ, ಮುಂಬೈನಿಂದ ಬಂದಿರುವ ಕಾರ್ಮಿಕರು ಹಗಲಿರುಳು ದುಡಿಯುತ್ತಿದ್ದಾರೆ ಎನ್ನಲಾಗಿದೆ.

Leave a Comment