ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಅಮಿತ್ ಶಾ ರಣತಂತ್ರ

ಹುಬ್ಬಳ್ಳಿ, ಏ 16: ಲೋಕಸಭಾ ಚುನಾವಣಾರ್ಥವಾಗಿ ಇಂದು ನಗರಕ್ಕೆ ರಾಷ್ಟ್ರೀಯ ಬಿಜೆಪಿ ನಾಯಕ ಅಮೀತ್ ಶಾ ಭೇಟಿ ನೀಡಿ ಪಕ್ಷದ ಮುಖಂಡರೊಂದಿಗೆ ಮಹತ್ವದ ಚರ್ಚೆ ನಡೆಸಿದರು.
ನಗರದ ಖಾಸಗಿ ಹೋಟೆಲ್‍ವೊಂದಕ್ಕೆ ಭೇಟಿ ನೀಡಿದ ಅವರು ರಾಜ್ಯದಲ್ಲಿ ಅದರಲ್ಲೂ ಉತ್ತರ ಕರ್ನಾಟಕದ ಲೋಕಸಭಾ ಕ್ಷೇತ್ರಗಳ ಚುನಾವಣೆಯ ಬಗ್ಗೆ ಚರ್ಚೆ ನಡೆಸಿದರು.
ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ ಶೆಟ್ಟರ್, ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ಸಂಸದ ಪ್ರಲ್ಹಾದ್ ಜೋಶಿ, ವಿಧಾನ ಸಭಾ ಸದಸ್ಯ ಅರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಸೇರಿದಂತೆ ಇನ್ನಿತರ ನಾಯಕರು ಸಭೆಯಲ್ಲಿ ಉಪಸ್ಥಿತರಿದ್ದರು.
ಉತ್ತರ ಕರ್ನಾಟಕದ ಲೋಕಸಭಾ ಕ್ಷೇತ್ರಗಳಾದ ಧಾರವಾಡ, ಹಾವೇರಿ, ಬಾಗಲಕೋಟ, ಕಾರವಾರ ಹಾಗೂ ಚಿಕ್ಕೊಡಿ ಕ್ಷೇತ್ರಗಳಲ್ಲದೆ ಇನ್ನಿತರ ಕ್ಷೇತ್ರಗಳ ಬಗ್ಗೆಯೂ ಪಕ್ಷದ ಸ್ಥಳಿಯ ನಾಯಕರೊಂದಿಗೆ ಅಮಿತ್ ಶಾ ಮಹತ್ವದ ಮಾಹಿತಿಯನ್ನು ಕಲೆಹಾಕಿದರೆನ್ನಲಾಗಿದೆ.
ಈ ಬಾರಿ ಲೋಸ ಸಮರದಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಬಿಜೆಪಿ ತಮ್ಮ ತೆಕ್ಕೆಗೆ ಹಾಕಿಕೊಳ್ಳುವ ಉದ್ದೇಶದಿಂದ ಸ್ಥಳಿಯನಾಯಕರೊಂದಿಗೆ ಚರ್ಚೆ ಮಾಡಲಾಗಿದ್ದು, ಈಗಾಗಲೇ ಬಿಜೆಪಿ ಗಟ್ಟಿಗೊಂಡಿದ್ದ ಕ್ಷೇತ್ರಗಳಲ್ಲದೆ ಇತರ ಪಕ್ಷದ ಪ್ರಭಾವವಿರುವ ಕ್ಷೇತ್ರಗಳಲ್ಲಿ ತನ್ನ ಬಲಾಬಲವನ್ನು ಹೇಗೆ ಸಾಧಿಸಬೇಕೆಂಬುದರ ಸುಧೀರ್ಘ ಚರ್ಚೆಯನ್ನು ಮಾಡಿದರೆನ್ನಲಾಗಿದೆ.
ಎರೆಡು ಹಂತಗಳಲ್ಲಿ ನಡೆಯುವ ಚುನಾವಣೆಗೆ ಸಂಬಂಧಿಸಿದಂತೆ ದಕ್ಷಣ ಕರ್ನಾಟಕ ಚುನಾವಣಾ ದಿನಾಂಕ ಇದೆ 18 ನಿಗದಿಯಾಗಿದ್ದು, ಈ ಕ್ಷೇತ್ರಗಳ ಪ್ರಚಾರ ಇಂದು ಸಂಜೆ ಅಂತ್ಯಗೊಳ್ಳುತ್ತಿದೆ. ಉತ್ತರ ಕರ್ನಾಟಕದ ಲೋಕಸಭಾ ಕ್ಷೇತ್ರಗಳ ಚುನಾವಣಾ ದಿನಾಂಕ ಈಗಾಗಲೇ ನಿಗದಿಪಡಿಸಿದಂತೆ ಇದೆ. 23 ರಂದು ನಡೆಯಲಿದ್ದು, ಈ ಕ್ಷೇತ್ರಗಳ ಪ್ರಚಾರ ರಣತಂತ್ರಗಳನ್ನು ಹೆಣೆಯಲು ಅಮೀತತ್ ಶಾ ಸ್ಥಳಿಯ ನಾಯಕರೊಂದಿಗೆ ಮಹತ್ವದ ಚರ್ಚೆ ನಡೆಸಿದರೆನ್ನಲಾಗಿದೆ.
ಈಗಾಗಲೇ ಬಿಜೆಪಿ ಯಾವ ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂಬುದನ್ನು ಕಲೆ ಹಾಕಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಪ್ರಭಾವವಿರುವ ಕ್ಷೇತ್ರಗಳ ಮಾಹಿತಿಯನ್ನು ಸ್ಥಳಿಯ ನಾಯಕರೊಂದಿಗೆ ಸುಧೀಘವಾಗಿ ಚರ್ಚಿಸಿದ ಅಮೀತ್ ಶಾ ಬಿಜೆಪಿ ಪ್ರಭಾವವಿರದೇ ಇರುವ ಕ್ಷೇತ್ರಗಳಲ್ಲಿ ಹೇಗೆ ಗೆಲುವಿನ ಚುಕ್ಕಾಣಿ ಹಿಡಿಯಬೇಕೆಂಬುದನ್ನು ಕಲೆಹಾಕಿದರ ಎನ್ನಲಾಗಿದೆ.

Leave a Comment