ಬಿಜೆಪಿಯ ಆಪರೇಷನ್ ಕಮಲಕ್ಕೆ ಖಂಡನೆ; ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ

ದಾವಣಗೆರೆ.ಫೆ.9; ಬಿಜೆಪಿ ಪಕ್ಷದ ಸಂವಿಧಾನ ವಿರೋಧಿ ನೀತಿ ಹಾಗೂ ಆಪರೇಷನ್ ಕಮಲ ಖಂಡಿಸಿ ನಗರದ ಜಯದೇವವೃತ್ತದಲ್ಲಿಂದು ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಂತರ ಮೆರವಣಿಗೆ ಮೂಲಕ ಮಹಾನಗರ ಪಾಲಿಕೆಗೆ ತೆರಳಿ ಮಹಾತ್ಮಾಗಾಂಧಿ ಪ್ರತಿಮೆ ಮುಂಭಾಗ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ದ ಘೋಷಣೆಗಳನ್ನು ಕೂಗಿದರು.
ಈ ವೇಳೆ ಕೆಪಿಸಿಸಿ ಕಾರ್ಯದರ್ಶಿ ಡಿ ಬಸವರಾಜ್ ಮಾತನಾಡಿ ಆಪರೇಷನ್ ಕಮಲ ನಡೆಸಲು ಹೊರಟಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಮಾತನಾಡಿರುವ ಆಡಿಯೋ ಟೇಪನ್ನು ಮುಖ್ಯಮಂತ್ರಿ ಹೆಚ್.ಡಿ ಕುಮಾರ ಸ್ವಾಮಿ ಬಿಡುಗಡೆಗೊಳಿಸಿದ್ದಾರೆ. ಟೇಪ್ ನಲ್ಲಿರುವ ಧ್ವನಿ ಬಿಎಸ್ ವೈ ಅವರದು ಎಂದು ಸ್ಪಷ್ಟವಾಗಿ ತಿಳಿಯುತ್ತದೆ. ಬಿಎಸ್ ವೈ ಅವರು ಸ್ವೀಕರ್, ಕಾಂಗ್ರೆಸ್ ಶಾಸಕರು,ಪ್ರಧಾನಿಯವರು ಹಾಗೂ ನ್ಯಾಯಾಧೀಶರ ಬಗ್ಗೆ ಉಲ್ಲೇಖಮಾಡಿದ್ದಾರೆ.ನೂರಾರು ಕೋಟಿ ರೂಗಳ ಡೀಲ್ ಬಗ್ಗೆ ಮಾತನಾಡಿರುವುದು ಇದೀಗ ಹೊರಬಂದಿದೆ.ಈಬಗ್ಗೆ ಐಟಿ,ಇಡಿ ತನಿಖೆ ನಡೆಸಬೇಕು.ನ್ಯಾಯಾಲಯ ಸುಮೊಟೋ ಪ್ರಕರಣ ದಾಖಲಿಸಬೇಕು. ಬಿಎಸ್ ವೈ ಅವರು ಟೇಪ್ ನಲ್ಲಿರುವ ಧ್ವನಿ ನನ್ನದಲ್ಲ ಎಂದಿದ್ದಾರೆ. ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿದರೆ ಸತ್ಯಾಂಶ ಹೊರಬರಲಿದೆ.ಅವರು ತಪ್ಪಿತಸ್ಥರಲ್ಲ ಎಂಬುಂದು ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ ಮಂಜಪ್ಪ ಮಾತನಾಡಿ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ ಅದನ್ನು ಅಭದ್ರಗೊಳಿಸಲು ಬಿಎಸ್‍ವೈ ಹೊರಟಿದ್ದಾರೆ. ಶಾಸಕರನ್ನು ಖರೀದಿಸಲು ಮುಂದಾಗಿರುವುದು ಖಂಡನೀಯ. ರೈತರು, ಮಹಿಳೆಯರು,ದೀನದಲಿತರ ಪರವಾಗಿ ಕೆಲಸಮಾಡುತ್ತಿರುವ ಸರ್ಕಾರವನ್ನು ಅಸ್ಥಿತರಗೊಳಿಸಲು ಮುಂದಾಗಿರುವುದು ಸರಿಯಲ್ಲ. ಸಮ್ಮಿಶ್ರ ಸರ್ಕಾರದ ಬಗ್ಗೆ ಸಾರ್ವಜನಿಕರಲ್ಲಿ ಅವಿಶ್ವಾಸ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ವಾಮಮಾರ್ಗದಿಂದ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಮೇಯರ್ ಶೋಭಾ ಪಲ್ಲಾಗಟ್ಟೆ, ಉಪಮೇಯರ್ ಚಮನ್ ಸಾಬ್,ಪಾಲಿಕೆ ಸದಸ್ಯ ದಿನೇಶ್ ಕೆ ಶೆಟ್ಟಿ,ಎ ನಾಗರಾಜ್, ಬಿಹೆಚ್ ವೀರಭದ್ರಪ್ಪ,ಅಲ್ಲಾವುಲ್ಲಿ ಘಾಜಿಖಾನ್,ಕೇರಂ ಗಣೇಶ್, ಅಶ್ರಫ್ ಅಲಿ,ಖಾಜಿ ಖಲೀಲ್, ಡಿ ಶಿವಕುಮಾರ್,ರಹಮತ್ ವುಲ್ಲಾ ಮತ್ತಿತರರಿದ್ದರು.

Leave a Comment