ಬಿಜೆಪಿಯಿಂದ ವಿಸ್ತಾರಕರ ಸಭೆ

ಹೊನ್ನಾಳಿ.ಜು.17; 500 ಜನ ಬಿಜೆಪಿ ವಿಸ್ತಾರಕರು ತಾಲೂಕಿನ ಪ್ರತಿ ಗ್ರಾಮಗಳ ಬೂತ್‍ಮಟ್ಟಕ್ಕೆ ತೆರಳಿ ಪಂಡಿತ್ ದೀನದಯಾಳ ಉಪಾಧ್ಯಾಯರ ಜನ್ಮ ಶತಾಬ್ದಿ ಅಂಗವಾಗಿ ಕೇಂದ್ರ ಸರಕಾರದ ಜನಪರ ಸಾಧನೆಗಳು ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಭಿವೃದ್ಧಿ ಕಾರ್ಯಗಳ ಪ್ರಚಾರ ಮಾಡುತ್ತಿದ್ದಾರೆ. ಪ್ರಸ್ತುತ ರಾಜ್ಯ ಸರಕಾರದ ಆಡಳಿತ ವೈಫಲ್ಯಗಳ ಸಮಗ್ರ ಮಾಹಿತಿಯನ್ನು ಜನರಿಗೆ ತಲುಪಿಸುತ್ತಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು. ತಾಲೂಕಿನ ಸೊರಟೂರು ಗ್ರಾಮದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡ ವಿಸ್ತಾರಕರ ಸಭೆಯಲ್ಲಿ ಅವರು ಮಾತನಾಡಿದರು.ಕೇಂದ್ರ ಸರಕಾರ ಆಡಳಿತಕ್ಕೆ ಬಂದು 3 ವರ್ಷವಾಗಿದೆ. ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ಸರಕಾರ ಮಾಡದ ಸಾಧನೆಯನ್ನು ಇಷ್ಟು ಅಲ್ಪ ಅವಧಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಪರಿಕಲ್ಪನೆಯ ವಿಸ್ತಾರಕರ ಯೋಜನೆ ಇಂದು ದೇಶಾದ್ಯಂತ ಅಭಿಯಾನದ ರೂಪದಲ್ಲಿ ನಡೆಯುತ್ತಿದ್ದು, ಬಿಜೆಪಿ ಕಾರ್ಯಕರ್ತರು ಪಕ್ಷದ ಸಂಘಟನೆಯತ್ತ ಗಮನ ಹರಿಸಿ ಹಗಲಿರುಳೆನ್ನದೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿಯೊಬ್ಬ ಕಾರ್ಯಕರ್ತರೂ ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಪ್ರತಿ ಬೂತ್‍ನ ಕಾರ್ಯಕರ್ತರು 25 ಮನೆಗಳಿಗೆ ಭೇಟಿ ನೀಡಿ ಮೋದಿ ಅವರ ಸಾಧನೆ ಮತ್ತು ರಾಜ್ಯ ಸರಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸಬೇಕು. ಕೇಂದ್ರ ಜಾರಿಗೆ ತಂದಿರುವ ನೂತನ ಯೋಜನೆಗಳ ಮಾಹಿತಿಯನ್ನು ಬಿಜೆಪಿ ವಿಸ್ತಾರಕರು ವ್ಯವಸ್ಥಿತವಾಗಿ ಪ್ರಚಾರ ಮಾಡಬೇಕು ಎಂದರು. ತಾಲೂಕಿನಲ್ಲಿ ಕಳೆದ 4 ವರ್ಷಗಳಿಂದ ಅಭಿವೃದ್ಧಿ ಕುಂಠಿತವಾಗಿದ್ದು, ಇದಕ್ಕೆ ಸರಕಾರದ ಆಡಳಿತ ವೈಫಲ್ಯ ಕಾರಣವಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಈವರೆಗೂ ಮಳೆ ಬಾರದೇ ರೈತರು ಕಂಗಾಲಾಗಿದ್ದಾರೆ. ಇದೇ ಪರಿಸ್ಥಿತಿ ಮುಂದುವರೆದಲ್ಲಿ ಅನ್ನದಾತರು ಪುನಃ ಆತ್ಮಹತ್ಯೆ ದಾರಿ ಹಿಡಿಯುವುದರಲ್ಲಿ ಸಂದೇಹವಿಲ.್ಲ ಆದರೆ, ಬರಗಾಲದ ಛಾಯೆ ಆವರಿಸುವ ಮುನ್ಸೂಚನೆಯಿದ್ದರೂ ಬರ ಪರಿಹಾರಕ್ಕಾಗಿ ಸರಕಾರ ಯಾವುದೇ ಸಿದ್ಧತೆ ನಡೆಸದೇ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿದರು.ಸೊರಟೂರು ಗ್ರಾಮದ ಬಿಜೆಪಿ ಮುಖಂಡರು, ವಿಸ್ತಾರಕರು, ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Comment