ಬಿಜೆಪಿ:ಬಳ್ಳಾರಿ ಗ್ರಾಮಾಂತರ ಮಂಡಲದ ಪದಾಧಿಕಾರಿಗಳ ನೇಮಕ

ಬಳ್ಳಾರಿ, ಮೇ.26: ಭಾರತೀಯ ಜನತಾ ಪಕ್ಷದ ಬಳ್ಳಾರಿ ಗ್ರಾಮಾಂತರ ಮಂಡಲದ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಅಧ್ಯಕ್ಷ ಹಲಕುಂದಿ ಹೆಚ್.ಆರ್.ಮಲ್ಲಿಕಾರ್ಜುನ ಗೌಡ ತಿಳಿಸಿದ್ದಾರೆ. ಉಪಾಧ್ಯಕ್ಷರುಗಳಾಗಿ ಡಿ.ಪ್ರತಾಪ್ ರೆಡ್ಡಿ, ಎಂ.ಶ್ರೀನಿವಾಸ್, ಬೋಗರಾಜ್, ವೈ.ಲೋಕನಗೌಡ, ರಾಮಕ್ಕ ಶೇಖರಪ್ಪ ಮತ್ತು ಚೇಳ್ಳಗುರ್ಕಿಯ ದ್ರಾಕ್ಷಾಯಿಣಿ, ಪ್ರಧಾನ ಕಾರ್ಯದರ್ಶಿಗಳಾಗಿ, ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಲಾಗಿದೆ.
ಪ್ರಧಾನ ಕಾರ್ಯದರ್ಶಿಗಳಾಗಿ ಜಿ.ಶ್ರೀನಿವಾಸ್, ಸಿ.ಲೋಕೇಶ್ ರೆಡ್ಡಿ, ಕಾರ್ಯದರ್ಶಿಗಳಾಗಿ ವಿ.ಮಲ್ಲಿಕಾರ್ಜುನ, ಹನುಮಕ್ಕ, ಹನುಮನಗೌಡ, ರಮೇಶ್ ನಾಯ್ಕ್, ಶಾಂತಿಬಾಯಿ, ಹಗರಿ ಈರಮ್ಮ ತಿಮ್ಮಪ್ಪ, ಖಜಾಂಚಿಯಾಗಿ ಬಸವನಗೌಡ ಹಾಗೂ ಕಾರ್ಯಾಲಯದ ಕಾರ್ಯದರ್ಶಿಯಾಗಿ ಯರಗುಡಿ ಈರಣ್ಣ, ಸಾಮಾಜಿಕ ಜಾಲತಾಣಕ್ಕೆ ಯಾಳ್ಪಿ ಚಂದ್ರ ಹಾಗೂ ವಕ್ತಾರರಾಗಿ ಬಿ.ಗೋವಿಂದನಾಯ್ಕ್ ಅವರನ್ನು ನೇಮಕ ಮಾಡಲಾಗಿದೆ.

ಅಲ್ಲದೆ, ಗ್ರಾಮಾಂತರ ಮಂಡಲದ ವಿವಿಧ ಮೋರ್ಚಾಗಳ ಪದಾಧಿಕಾರಿಗಳನ್ನೂ ಸಹ ನೇಮಕ ಮಾಡಲಾಗಿದೆ.
ಒಬಿಸಿ ಮೋರ್ಚಾ ಅಧ್ಯಕ್ಷರಾಗಿ ಬೆಣಕಲ್ಲು ಬಸವರಾಜ, ಪ್ರಧಾನ ಕಾರ್ಯದರ್ಶಿಯಾಗಿ ಸಿರಿವಾರ ಶಿವರಾಮ್, ಎಸ್ಟಿ ಮೋರ್ಚಾ ಅಧ್ಯಕ್ಷರಾಗಿ ಹೊಸಯರಗುಡಿ ಚಂದ್ರ, ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಜೆ.ಕೋಟೆ ವೇಮಣ್ಣ, ರೈತ ಮೋರ್ಚಾ ಅಧ್ಯಕ್ಷರಾಗಿ ಬಿ.ಡಿ.ಹಳ್ಳಿ ಹೊನ್ನಾರೆಡ್ಡಿ, ಪ್ರಧಾನ ಕಾರ್ಯದರ್ಶಿಯಾಗಿ ಕೊಳಗಲ್ಲು ಷನ್ಮುಖ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರಾಗಿ ಕೆ.ವೀರಾಪುರ ಶರ್ಮಾಸ್, ಪ್ರಧಾನ ಕಾರ್ಯದರ್ಶಿಯಾಗಿ ಮಿಂಚೇರಿ ಜೆ.ಬಿ.ಹುಸೇನ್, ಯುವ ಮೋರ್ಚಾ ಅಧ್ಯಕ್ಷರಾಗಿ ಟಿ.ಬೂದಿಹಾಳ್ ತಿಮ್ಮಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಅಸುಂಡಿ ಹೊನ್ನೂರಸ್ವಾಮಿ, ಎಸ್.ಸಿ.ಮೋರ್ಚಾ ಅಧ್ಯಕ್ಷರಾಗಿ ಬೇವಿನಹಳ್ಳಿ ಸುಧಾಕರ್, ಪ್ರಧಾನ ಕಾರ್ಯದರ್ಶಿಯಾಗಿ ಹಲಕುಂದಿ ತಿಪ್ಪೇಸ್ವಾಮಿ, ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಚರಕುಂಟೆ ಕೆ.ಸರಸ್ವತಿ, ಪ್ರಧಾನ ಕಾರ್ಯದರ್ಶಿಯಾಗಿ ಜಿ.ವೀರಾಪುರ ಶಕುಂತಲ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ವಿವಿಧ ಮಹಾಶಕ್ತಿ ಕೇಂದ್ರಗಳ ಪದಾಧಿಕಾರಿಗಳ ಆಯ್ಕೆ
ಕೊಳಗಲ್ಲು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಬಿ.ಬೆಳಗಲ್ಲು ಅಂಬರೇಶ್, ಪ್ರಧಾನ ಕಾರ್ಯದರ್ಶಿಯಾಗಿ ಹಲಕುಂದಿ ಸುರೇಶ್, ಪ್ರಭಾರಿಯಾಗಿ ಬಿ.ಬೆಳಗಲ್ಲು ತಾಂಡದ ಸೀನಾನಾಯ್ಕ್,
ರೂಪನಗುಡಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ರೂಪನಗುಡಿ ಗೋವಿಂದ, ಪ್ರಧಾನ ಕಾರ್ಯದರ್ಶಿಯಾಗಿ ವೈ.ಬೂದಿಹಾಳ್, ಶಾಂತಮೂರ್ತಿ, ಪ್ರಭಾರಿಯಾಗಿ ಬೊಬ್ಬಕುಂಟೆ ಎಱ್ರಿಸ್ವಾಮಿ,
ಸಂಗನಕಲ್ಲು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಸಂಗನಕಲ್ಲು ಯು.ವೀರೇಶ್, ಪ್ರಧಾನ ಕಾರ್ಯದರ್ಶಿಯಾಗಿ ಚಾಗನೂರು ರಾಮುಡು, ಪ್ರಭಾರಿಯಾಗಿ ಸಂಗನಕಲ್ಲು ಸಿದ್ದನಗೌಡ,
ಮೋಕಾ ಮಹಾಶಕ್ತಿ ಕೇಂದ್ರ ಅಧ್ಯಕ್ಷರಾಗಿ ಗೋಟೂರು ಬಸವ, ಪ್ರಧಾನ ಕಾರ್ಯದರ್ಶಿಯಾಗಿ ವಣೇನೂರು ಸೋಮವಾಥ, ಪ್ರಭಾರಿಯಾಗಿ ಮೋಕಾ ರಂಗಯ್ಯ ಅವರನ್ನು ನೇಮಕ ಮಾಡಲಾಗಿದೆ.

ಸಚಿವರಾದ ಬಿ.ಶ್ರೀರಾಮುಲು, ಆನಂದ್ ಸಿಂಗ್, ಪಕ್ಷದ ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ, ಮಾಜಿ ಸಂಸದ ಫಕ್ಕೀರಪ್ಪ, ಮುಖಂಡರುಗಳಾದ ಸತ್ಯನಾರಾಯಣರೆಡ್ಡಿ, ಎಸ್.ಗುರುಲಿಂಗನಗೌಡ, ಓಬಳೇಶ್, ಮುರಹರಗೌಡ, ಹೆಚ್.ಹನುಮಂತಪ್ಪ, ಬಿ.ನಾಗಭೂಷಣಗೌಡ, ಪ್ರಕಾಶ್, ಜಡೇಗೌಡ, ಗೋನಾಳ್ ರಾಜಶೇಖರಗೌಡ, ತಿಮ್ಮನಗೌಡ, ಶಿವಾರೆಡ್ಡಿ, ಶೇಖರ ಕಮ್ಮರಚೇಡು, ಅಮರೇಶ್ ಬೆಳಗಲ್ಲು, ಮಲ್ಲಿಕಾರ್ಜುನ, ಶೀನಾನಾಯ್ಕ್, ಮತ್ತಿತರೆ ಮುಖಂಡರ ಸಮ್ಮುಖದಲ್ಲಿ ನೇಮಕ ಮಾಡಲಾಗಿದೆ ಎಂದು ಮಲ್ಲಿಕಾರ್ಜುನಗೌಡ ತಿಳಿಸಿದ್ದಾರೆ.

Share

Leave a Comment