ಬಿಜೆಪಿಗೆ ಜನರಿಂದಲೇ ಪಠ ; ಬಿಜೆಪಿ ವಿರುದ್ಧ ಸಿಎಂ ವಾಗ್ದಾಳಿ

ಮೈಸೂರು, ಜ.12- ಜನರ ಮನಸ್ಸಿನಲ್ಲಿ ಕೋಮು ಭಾವನೆ ಬಿತ್ತುವವರನ್ನು ಹಾಗೂ ಸಮಾಜದಲ್ಲಿ ಬೆಂಕಿ ಹಚ್ಚುವವರನ್ನು ಜನರೇ ಬಂಧಿಸುತ್ತಾರೆ. ಇವರಿಗೆ ಪೊಲೀಸ್ ರವರ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ಇಂದು ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಬಿಜೆಪಿ ಅವರನ್ನು ಪೊಲೀಸರು ಬಂಧಿಸುವ ಅಗತ್ಯವಿಲ್ಲ. ಮುಂದಿನ ದಿನಗಳಲ್ಲಿ ಆ ಕೆಲಸವನ್ನು ಜನರೇ ಮಾಡುತ್ತಾರೆ. ಸಮಾಜದಲ್ಲಿ ಕೋಮು ದಳ್ಳುರಿಗೆ ತುಪ್ಪ ಸುರಿದು ಮತ್ತೊಬ್ಬರ ಮೇಲೆ ಗೂಬೆ ಕೂರಿಸುವ ಬಿಜೆಪಿ ಅವರ ತಂತ್ರ ಫಲಿಸದು. ಪ್ರಧಾನಿ ಮೋದಿ ಅವರು ಕಾಂಗ್ರೆಸ್ ವೈಫಲ್ಯವನ್ನು ಜನರ ಮುಂದಿಡುವುದಾಗಿ ಹೇಳುತ್ತಿದ್ದಾರೆ. ಆದರೆ ನಾವು ಬಿಜೆಪಿ ಅವರ ವೈಫಲ್ಯವನ್ನು ಬಿಚ್ಚಿಡುತ್ತೇನೆ ಎಂದು ದೂರಿದರು.
ಒಂದು ತಿಂಗಳ ರಾಜ್ಯದ ಪ್ರವಾಸ ತುಂಬಾ ಚೆನ್ನಾಗಿತ್ತು. ರಾಜ್ಯದ ಜನರು ಕಾಂಗ್ರೆಸ್ ಒಲವು ಹೊಂದಿದ್ದಾರೆ. ನಾವು ಜಾರಿಗೆ ತಂದಿರುವ ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ ಮುಂತಾದ ಎಲ್ಲಾ ಯೋಜನೆಗಳು ಜನರಿಗೆ ತಲುಪುವ ಯೋಜನೆಗಳೇ ಆಗಿವೆ. ಈಗಾಗಿ ಜನರು ಕಾಂಗ್ರೆಸ್ ಪಕ್ಷದ ಸಾಧನೆಯನ್ನ ಮನಃಪೂರ್ವಕವಾಗಿ ಒಪ್ಪಿದ್ದಾರೆ. ಪ್ರವಾಸದ ವೇಳೆ ನಮ್ಮ ಮೇಲೆ ಜನರ ಒಲವಿರುವುದನ್ನು ಕಂಡು ಸಂತಸವಾಗಿದೆ. ಕಟ್ಟಕಡೆಯ ವ್ಯಕ್ತಿಗಳಿಗೂ ನಮ್ಮ ಯೋಜನೆಗಳ ಫಲ ಸಿಗುತ್ತಿರುವುದು ನಮ್ಮ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಪ್ರತಿಪಾದಿಸಿದರು.

Leave a Comment