ಬಿಜೆಡಿ ನಾಯಕಿ ಮೀನಾಕ್ಷಿ ಮಿಶ್ರಾ ನಿಧನ

 ಭುವನೇಶ್ವರ, ಫೆ 20 -ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಬಿಜೆಡಿ ನಾಯಕಿ ಮೀನಾಕ್ಷಿ ಮಿಶ್ರಾ, ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

  ಇದೇ 12ರಂದು ಅವರು ಪೊಲೀಸ್ ಅಧೀಕ್ಷಕರ ಕಚೇರಿ ಮುಂಭಾಗದಲ್ಲಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ತೀವ್ರ ಸುಟ್ಟಗಾಯಗಳಿಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

  ಕಳೆದ ತಿಂಗಳು ಜನವರಿ 28 ರಂದು ಪಾರ್ಕಿಂಗ್ ಸಮಸ್ಯೆಗೆ ಸಂಬಂಧಿಸಿ ಮೀನಾಕ್ಷಿಯವರ ಮನೆಯ ಮುಂದೆ  ನಡೆದ ಗುಂಪು ಘರ್ಷಣೆಗಯ ನಂತರ ಆಕೆಯ ಪುತ್ರ ರಾಜಾ ಮಿಶ್ರಾ ಅವರನ್ನು ಬಂಧಿಸಲಾಗಿತ್ತು.

 ಪ್ರಕರಣದಲ್ಲಿ ತಮ್ಮ ಮಗ ಅಪರಾಧಿಯಲ್ಲ ಎಂದು ಮನವಿ ಮಾಡಿದ್ದ ಆಕೆ, ಆತನನ್ನು ಬಂಧನದಿಂದ ಬಿಡಿಸಲು ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಅಲೆದಾಡಿದ್ದರು. ಇದೇ 12ರಂದು ಪೊಲೀಸ್ ಅಧೀಕ್ಷಕರ ಕಚೇರಿಗೆ ಆಕೆ ತೆರಳಿದ್ದರು.  ಅಧೀಕ್ಷಕರ ಅನುಪಸ್ಥಿತಿಯಲ್ಲಿ ಹೆಚ್ಚುವರಿ ಅಧೀಕ್ಷಕರು, ಆಕೆಯ ಪುತ್ರನಿಗೆ ಏನೂ ಆಗುವುದಿಲ್ಲ ಎಂದು ಭರವಸೆ ನೀಡಿದ್ದರು.

  ಆದಾಗ್ಯೂ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದರಿಂದ ಶೇ 90ರಷ್ಟು ಸುಟ್ಟ ಗಾಯಗಳಾಗಿ ಇಂದು ಮೀನಾಕ್ಷಿ ಮಿಶ್ರಾ ಕೊನೆಯುಸಿರೆಳೆದಿದ್ದಾರೆ ಎಂದು ಹೇಳಲಾಗಿದೆ.

Leave a Comment