ಬಿಕ್ಕಳಿಕೆ ನಿಲ್ಲಲು ಟಿಪ್ಸ್

ಬಿಕ್ಕಳಿಕೆ ಉಂಟಾಗುವ ಹಿಂದೆ ಹಲವು ಕಾರಣಗಳಿರುತ್ತದೆ. ಬೇಗ ಬೇಗ ತಿನ್ನುವುದು, ಹೆಚ್ಚು ಖಾರ ತಿನ್ನುವುದರಿಂದ , ಇನ್ನಾವುದೋ ಕಾರಣದಿಂದ ಉಸಿರಾಡಲು ತೊಂದರೆಯಾಗಿ ಬಿಕ್ಕಳಿಕೆ ಉಂಟಾಗುತ್ತದೆ.
ಎರಡೂ ಕಿವಿಯೊಳಗೆ ಬೆರಳಿಟ್ಟು ಒತ್ತಿ ಹೀಗೆ ಮಾಡುವುದರಿಂದ ಕಿವಿಯಿಂದ ಗಂಟಲಿನವರೆಗೆ ಹೋಗುವ ವೇಗಸ್ ನರದ ಮೇಲೆ ಒತ್ತಡ ಬೀಳುತ್ತದೆ. ಇದರಿಂದ ಬಿಕ್ಕಳಿಕೆ ನಿಲ್ಲುತ್ತದೆ.
ಗಂಟಲಿನ ಹಾಗು ಶ್ವಾಸಕೋಶದ ಬಳಿಯ ವೇಗಸ್ ನರ ತೆರದುಕೊಳ್ಳುತ್ತದೆ. ಕೈಯಿಂದ ನಾಲಗೆಯನ್ನು ಎಳೆದು ಇಡುವುದುರಿಂದಲೂ ಬಿಕ್ಕಳಿಕೆ ಕಡಿಮೆಯಾಗುತ್ತದೆ.
ಉಸಿರನ್ನು ತಡೆಹಿಡಿಯುವುದರಿಂದ ಕಾರ್ಬನ್ ಡೈ ಆಕ್ಸೈಡ್ ಶ್ವಾಸಕೋಶಲ್ಲಿ ತುಂಬುತ್ತದೆ. ಇದನ್ನು ಹೊರಹಾಕುವಾಗ ಶ್ವಾಸಕೋಶದ ಮೇಲೆ ಒತ್ತಡ ಬೀಳುತ್ತದೆ. ಇದರಿಂದ ಬಿಕ್ಕಳಿಗೆ ನಿಲ್ಲುತ್ತದೆ.
ಜೋರಾಗಿ ಕೆಮ್ಮಲು ಪ್ರಯತ್ನಿಸಿ ಇದರಿಂದ ಶ್ವಾಸಕೋಶದ ಮೇಲೆ ಒತ್ತಡ ಬೀಳುತ್ತದೆ. ಬಿಕ್ಕಳಿಕೆ ನಿಲ್ಲುತ್ತದೆ. ಬಿಕ್ಕಳಿಕೆ ಉಂಟಾದಾಗ ತಂಪು ನೀರು ಕುಡಿಯುವುದರಿಂದ ಬಿಕ್ಕಳಿಕೆ ನಿಲ್ಲುತ್ತದೆ.

Leave a Comment