ಬಿಎಸ್‍ವೈಗೆ ಶಿಕ್ಷೆಯಾಗಲಿ;ಡಿ ಬಸವರಾಜ್

ಹರಪನಹಳ್ಳಿ.ಫೆ.11; ಮುಖ್ಯಮಂತ್ರಿಗಳು ಸಿನಿಮಾ ರಂಗದವರು ಹಾಗಾಗಿ ಆಡಿಯೋ ನಕಲಿ ಎಂದಿದ್ದ ಯಡಿಯೂರಪ್ಪ ಅವರು, ಈ ಹಿಂದೆ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿ ಅಧಿಕಾರ ಕಳೆದುಕೊಂಡಿದ್ದರು. ಹಾಗಾಗಿ ಪಾಪ ಪ್ರಜ್ಞೆಯಿಂದ ತಪ್ಪುನ್ನು ಒಪ್ಪಿಕೊಂಡಿದ್ದಾರೆ ಎಂದು ರೇಷ್ಮೆ ನಿಗಮದ ಮಾಜಿ ಅಧ್ಯಕ್ಷ, ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ್ ಹೇಳಿದರು.
ತಾಲೂಕಿನ ಕಂಚಿಕೇರಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಪರೇಷನ್ ಕಮಲ ಆಡಿಯೋಗೆ ಸಂಬಂಧಿಸಿದಂತೆ ತಮ್ಮ ತಪ್ಪನ್ನು ಒಪ್ಪಿಕೊಂಡಿರುವ ಬಿ.ಎಸ್.ಯಡಿಯೂರಪ್ಪ ಅವರಿಗೆ ತಕ್ಕ ಶಿಕ್ಷೆ ವಿಧಿಸಬೇಕು ಒತ್ತಾಯಿಸಿದರು.
ಆಪರೇಷನ್ ಕಮಲದ ಹಿಂದೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಧ್ಯಕ್ಷ ಆಮೀತ್ ಷಾ ಕೈವಾಡವಿದೆ. ರಫಲ್ ಯುದ್ದ ವಿಮಾನ ಖರೀದಿ ಹಗರಣದ ಹಣವನ್ನು ಅಪರೇಷನ್ ಕಮಲಕ್ಕೆ ಬಳಕೆ ಮಾಡುತ್ತಿದ್ದಾರೆ. ಸ್ಪೀಕರ್ ರಮೇಶಕುಮಾರ್ ಅವರು ಅತ್ಯಂತ ಪ್ರಾಮಾಣಿಕ ವ್ಯಕ್ತಿಯಾಗಿದ್ದು, ಅವರಿಗೆ ಹಣದ ಆಮಿಷ ಕುರಿತು ಮಾತನಾಡಿರುವುದರಿಂದ ಸ್ಪೀಕರ್ ಅವರು ಸ್ವಯಂ ತನಿಖೆಗೆ ಆದೇಶ ನೀಡಬೇಕು. ಶಾಸಕರನ್ನು ಪ್ರಾಣಿ, ಪಕ್ಷಿಗಳಂತೆ ಖರೀದಿಸುವ ಕೊಳಕು ಸಂಪ್ರದಾಯಕ್ಕೆ ಅಂತ್ಯ ಹಾಡಬೇಕು ಎಂದು ಒತ್ತಾಯಿಸಿದರು.
ಆಡಿಯೋದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಕುರಿತು ಯಡಿಯೂರಪ್ಪ ಅವಾಚ್ಯ ಶಬ್ದ ಬಳಕೆ ಮಾಡಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಮತ್ತು ರಾಜ್ಯದ ಜನರಲ್ಲಿ ಕ್ಷಮೆಯಾಚಿಸಬೇಕು. ಯಡಿಯೂರಪ್ಪ ರಾಜಕೀಯ ನಿವೃತ್ತಿ ಪಡೆಯುವ ಮೂಲಕ ಪಾಪ ಪ್ರಜ್ಞೆಯಿಂದ ಮುಕ್ತರಾಗಬೇಕು ಎಂದು ಹೇಳಿದರು.

Leave a Comment