ಬಿಎಸ್‍ಎನ್‍ಎಲ್ ಹೊಸ ಮೊಬೈಲ್ ಟವರ್‍ಗಳ ಸ್ಥಾಪನೆಗೆ ಹಸಿರು ನಿಶಾನೆ

ದಾವಣಗೆರೆ.ಜ.4; ಜಿಲ್ಲೆಗೆ ಸಂಬಂಧಿಸಿದಂತೆ ಶಿವಮೊಗ್ಗ ಟೆಲಿಕಾಂ ಜಿಲ್ಲೆಯ ವ್ಯಾಪ್ತಿಗೊಳಪಡುವ ಚನ್ನಗಿರಿ ಮತ್ತು ಹೊನ್ನಾಳಿ ತಾಲ್ಲೂಕುಗಳ ಅನೇಕ ಗ್ರಾಮಗಳಲ್ಲಿ ಬಿ.ಎಸ್.ಎನ್.ಎಲ್ ಮೊಬೈಲ್ ಸೇವೆ ಲಭ್ಯವಾಗದೇ ಸಾರ್ವಜನಿಕರು ಸಾಕಷ್ಟು ಅನುಭವಿಸುತ್ತಿದ್ದರು, ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಮನವಿಗಳ ಆಧಾರದ ಮೇಲೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಟೆಲಿಕಾಂ ಇಲಾಖೆಯ ಮೇಲೆ ಸಂಸದ ಜಿ.ಎಂ.ಸಿದ್ದೇಶ್ವರ ಒತ್ತಡ ಹೇರುತ್ತಲೇ ಬಂದಿದ್ದರು, ಈ ವಿಷಯವಾಗಿ ದೆಹಲಿಯಲ್ಲಿ ಕಮ್ಯೂನಿಕೇಷನ್ಸ್ (ಸಂವಹನ) ಖಾತೆ ಸಚಿವರಾದ ಮನೋಜ್ ಸಿನ್ಹಾರವರನ್ನು ಭೇಟಿ ಮಾಡಿ ದಾವಣಗೆರೆ ಜಿಲ್ಲೆಗೆ ಅಗತ್ಯವಾಗಿರುವ ಬಿ.ಎಸ್.ಎನ್.ಎಲ್. ಮೊಬೈಲ್ ಟವರ್‍ಗಳನ್ನು ಪೂರೈಸುವಂತೆ ಮನವಿ ಮಾಡಿದ ಪರಿಣಾಮವಾಗಿ ಅಗತ್ಯ ಮೊಬೈಲ್ ಟವರ್‍ಗಳ ಸ್ಥಾಪನೆಗೆ ಸಚಿವರಾದ ಮನೋಜ್ ಸಿನ್ಹಾ ಹಸಿರು ನಿಶಾನೆ ತೋರಿಸಿದ್ದಾರೆ. ಸಂಸದರ ಮನವಿಗೆ ಪೂರಕವಾಗಿ ಸ್ಪಂದಿಸಿದ ಸಚಿವರು ಹೊನ್ನಾಳಿ ತಾಲ್ಲೂಕಿನ ಎಂ.ಹನುಮನಹಳ್ಳಿ, ಕೆಂಗಲಹಳ್ಳಿ.ಫಲವನಹಳ್ಳಿ, ಕುಳಗಟ್ಟೆ, ಹೆಚ್.ಕಡದಕಟ್ಟೆ, ಅರಬಗಟ್ಟೆ, ಚನ್ನಗಿರಿ ತಾಲ್ಲೂಕಿನ ನಿಲೋಗಲ್, ಗುಡ್ಡದಕೊಮಾರನಹಳ್ಳಿ, ಆಲೂರು, ಅಗರಬನ್ನಿಹಟ್ಟಿ, ದೊಡ್ಡಘಟ್ಟ, ಕಗತೂರು ಗ್ರಾಮಗಳಿಗೆ ಬಿ.ಎಸ್.ಎನ್.ಎಲ್. ಮೊಬೈಲ್ ಟವರ್‍ಗಳ ಸ್ಥಾಪನೆಗೆ ಸಮ್ಮತಿ ನೀಡಿದ್ದಾರೆ. ಈ ಬಗ್ಗೆ ಶೀಘ್ರವೇ ಬೆಂಗಳೂರು ಟೆಲಿಕಾಂ ವೃತ್ತದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವುದಾಗಿ ಸಚಿವರು ಭರವಸೆ ನೀಡಿದರು.

Leave a Comment