ಬಿಎಸ್‍ಎನ್‍ಎಲ್‍ನ ತಿಪ್ಪೇಸ್ವಾಮಿ ಅವರಿಗೆ ಬೀಳ್ಕೊಡುಗೆ

ಬಳ್ಳಾರಿ, ಜು.01: ಭಾರತ್ ಸಂಚಾರ ನಿಗಮ ನಿಯಮಿತದಲ್ಲಿ ಕಚೇರಿ ಅಧೀಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದ ಹೆಚ್. ತಿಪ್ಪೇಸ್ವಾಮಿ ಅವರಿಗೆ ನಗರದ ಕೆಇಬಿ ಇಂಜಿನಿಯರಿಂಗ್ ಪಂಕ್ಷನ್ ಹಾಲ್‍ನಲ್ಲಿ ನಿನ್ನೆ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ನಿವೃತ್ತಿ ಪಡೆದ ತಿಪ್ಪೇಸ್ವಾಮಿ ಅವರು ತಮ್ಮ ಸೇವಾವಧಿಯಲ್ಲಿ ಬಿಎಸ್‍ಎನ್‍ಎಲ್ ಯೂನಿಯನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನೌಕರರ ಸಮಸ್ಯೆಗೆ ಸ್ಪಂದಿಸುವ ಮೂಲಕ ಉತ್ತಮ ಕಾರ್ಯನಿರ್ವಹಿಸಿದ್ದರು. ಅಲ್ಲದೆ, ಅಂಬೇಡ್ಕರ್ ಸಂಘದ ಅಧ್ಯಕ್ಷರಾಗಿಯೂ ಉತ್ತಮ ಆಡಳಿತ ನೀಡಿದ್ದರು. ಮುಂದಿನ ನಿವೃತ್ತಿ ಜೀವದಲ್ಲೂ ಸಹ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಎಂದು ಸಮಾರಂಭಕ್ಕೆ ಆಗಮಿಸಿದ್ದ ಹಿರಿಯರು ಹಾರೈಸಿದರು.

ಸಮಾರಂಭದಲ್ಲಿ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಕಮಲ್ ನಾಬನ್, ವೈಶಾಲಿ ಹೋಟೆಲ್ ಗ್ರೂಪ್‍ನ ಧೂರಿ ಕುಮಾರ್, ಸರಕಾರಿ ನೌಕರರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಕೆ. ಗಾಜಣ್ಣ, ದಲಿತ ಮುಖಂಡರುಗಳಾದ ಕೆ. ಗಿರಿಮಲ್ಲಪ್ಪ, ಬ್ಯಾಂಕ್ ಎರ್ರೆಣ್ಣ, ನಿವೃತ್ತ ಉಪ ನೋಂದಣಾಧಿಕಾರಿ ಕೆ. ವೀರಬಸಪ್ಪ, ಎಲ್. ಮಾರೆಣ್ಣ, ಈ. ರಾಮಪ್ಪ, ಅಂಬೇಡ್ಕರ್ ಸಂಘದ ಅಧ್ಯಕ್ಷ ಎಸ್. ಚಿದಾನಂದಪ್ಪ, ಕಲ್ಲಪ್ಪ, ಹೊನ್ನೂರಪ್ಪ ಸೇರಿದಂತೆ ದಲಿತ ಪರ ಸಂಘಟನೆಗಳ ಮುಖಂಡರುಗಳು ಉಪಸ್ಥಿತರಿದ್ದರು.

Leave a Comment