ಬಿಎಸ್‌ಪಿ ವತಿಯಿಂದ ಮಾ.೧೭ ರಂದು ಬಹುಜನ ದಿವಸ ಆಚರಣೆ

ರಾಯಚೂರು.ಮಾ೧೫- ಬಹುಜನ ಸಮಾಜ ಪಾರ್ಟಿ(ಬಿಎಸ್‌ಪಿ)ಯ ರಾಷ್ಟ್ರೀಯಾಧ್ಯಕ್ಷರಾಗಿದ್ದ ಕಾನ್ಸಿರಾಮ್ ಜೀ ರವರ ೮೫ ನೇ ಜನ್ಮ ದಿನದ ಅಂಗವಾಗಿ ಮಾ.೧೭ ರಂದು ಬಹುಜನ ದಿವಸ ಆಚರಿಸಲಾಗುತ್ತದೆ ಎಂದು ಬಿಎಸ್‌ಪಿ ಜಿಲ್ಲಾಧ್ಯಕ್ಷ ಎಮ್.ಆರ್.ಭೇರಿ ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ ನಗರದಲ್ಲಿರುವ ಕೊಠಾರಿ ಪಂಕ್ಷನ್ ಹಾಲ್‌ನಲ್ಲಿ ಪಕ್ಷದ ಕಾರ್ಯಕರ್ತರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮ್ಕಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಬಿ.ವಾಸು, ಸೂರ್ಯಕಾಯ್ ನಿಂಬಾಳ್ಕರ್, ವಿಭಾಗೀಯ ಉಸ್ತುವಾರಿಗಳಾದ ಮಹಾದೇವ ದಿನ್ನಿ, ವೈ.ನರಸಪ್ಪ, ಎಂಡಿ ತಾಜ್ ಹಾಗೂ ಸೋಮಶೇಖರ ರಾಮದುರ್ಗ ಭಾಗವಹಿಸುವರೆಂದು ತಿಳಿಸಿದರು.
ರಾಜ್ಯದ ೨೮ ಲೋಕಸಭಾ ಕ್ಷೇತ್ರಗಳಿಗೆ ಬಿಎಸ್‌ಪಿ ಪಕ್ಷದ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ದಿಸುವರು. ಕಾರ್ಯಕ್ರಮಕ್ಕೆ ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಯಾದಗಿರಿ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳ ಬಿಎಸ್‌ಪಿ ಕಾರ್ಯಕರ್ತರು ಆಗಮಿಸುವರು. ಜಿಲ್ಲೆಯ ಭೂತ್ ಮಟ್ಟದ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.ಈ ಸಂದರ್ಭದಲ್ಲಿ ಹನುಮಂತ ಭಂಡಾರಿ, ನರಸಿಂಹಲು, ಅಬ್ದುಲ್ ಖರೀತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Comment