ಬಿಎಂಟಿಸಿ ಪ್ರಯಾಣಿಕರಿಗೆ ಸಿಹಿಸುದ್ದಿ: ಪಾಸ್ ದರ ಇಳಿಕೆ

ಬೆಂಗಳೂರು, ಮೇ 25 ಲಾಕ್ ಡೌನ್ ನಂತರ ಕಷ್ಟದಲ್ಲಿದ್ದಂತ ಪ್ರಯಾಣಿಕರ ಒತ್ತಡಕ್ಕೆ ಇದೀಗ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಮಣಿದು ಪಾಸ್ ದರವನ್ನು ಕಡಿಮೆ ಮಾಡಿದೆ.

ಪ್ರಯಾಣಿಕರ ಒತ್ತಡಕ್ಕೆ ಮಣಿದ ಬಿಎಂಟಿಸಿ, ಇದೀಗ ದಿನದ ಪಾಸ್ ದರವನನ್ನು ರೂ.70ರಿಂದ ರೂ.50ಕ್ಕೆ ಇಳಿಕೆ ಮಾಡಿದ್ದು ಮೂಲಕ ಬಿಎಂಟಿಸಿ ಬಸ್ ಪ್ರಯಾಣಿಕರಿಗೆ ಸಿಹಿಸುದ್ದಿ ನೀಡಿದೆ.

ಈ ಕುರಿತಂತೆ ಮಾಹಿತಿ ನೀಡಿರುವ ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ, ಬಿಎಂಟಿಸಿ ದಿನದ ಪಾಸ್ ದರವನ್ನು ಪ್ರಯಾಣಿಕರ ಹಿತದೃಷ್ಟಿಯಿಂದ ಏರಿಕೆ ಮಾಡಲಾಗಿತ್ತು. ಇದೀಗ ದಿನದ ಪಾಸ್ ದರವನ್ನು ರೂ.70ರಿಂದ 50 ರೂಪಾಯಿಗೆ ಇಳಿಕೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಹೀಗಾಗಿ ಬಿಎಂಟಿಸಿಯ ದಿನದ ಪಾಸ್ ದರ ರೂ.70ರಿಂದ ರೂ.50ಕ್ಕೆ ಇಳಿಕೆಯಾದಂತೆ ಆಗಿದೆ.

Share

Leave a Comment