ಈ ವಾರ : ಬಿಂದಾಸ್ ಗೂಗ್ಲಿ

‘ಬಿಂದಾಸ್ ಗೂಗ್ಲಿ ತೆರೆಗೆ ಬಂದಿದೆ.. ಇದೊಂದು ನೃತ್ಯ ಆಧಾರಿತ ಚಿತ್ರ. ಧರ್ಮ ಕೀರ್ತಿರಾಜ್ ಚಿತ್ರದಲ್ಲಿ ತರಬೇತುದಾರ ಪಾತ್ರದಲ್ಲಿ ಇದ್ದಾರೆ. ಸಂಸದ ಸುರೇಶ್ ಅಂಗಾಡಿ ಹಾಗೂ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ನಿರ್ಮಾಪಕ ವಿಜಯ್ ಅನ್ವೇಕರ್ ಮಾಹಿತಿ ನೀಡಿ, ಪುತ್ರನ ಸಿನಿಮಾ ಆಸೆಯಿಂದ ಚಿತ್ರವನ್ನು ನಿರ್ಮಾಣ ಮಾಡಿದ್ದೇನೆ. ಕಿರಿಯ ಪುತ್ರ ಆಕಾಶ ನಾಯಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ ಅವರಿಗೆ ಎಲ್ಲರ ಸಹಕಾರ ಮತ್ತು ಬೆಂಬಲ ಬೇಕು ಎಂದು ಕೇಳಿಕೊಂಡರು. ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ, ಚಿತ್ರದ ಬಗ್ಗೆ ಮೆಚ್ಚುಗೆಯ ಮಹಾಪೂರವನ್ನೇ ಹರಿಸಿ, ಯು ಪ್ರಮಾಣ ಪತ್ರ ನೀಡಿದೆ. ಇದು ಮತ್ತಷ್ಟು ಪ್ರೇರಣೆ ನೀಡಿದೆ. ಚಿತ್ರದಲ್ಲಿ ಸಂಸದ ಸುರೇಶ್ ಅಂಗಡಿ ಮತ್ತು ಪ್ರವೀಣ್ ಕುಮಾರ್ ಶೆಟ್ಟಿ ನಟಿಸಿದ್ದಾರೆ. ಉತ್ತರ ಕರ್ನಾಟಕ ಭಾಗದವರಾಗಿರುವ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಹಲವು ಮಂದಿಗೆ ಚಿತ್ರದಲ್ಲಿ ಅವಕಾಶ ನೀಡಲಾಗಿದೆ.

ಇಂದು ಜೀವನದಲ್ಲಿ ಏನಾದರೂ ಆಗಿದ್ದರೆ ತಂದೆ-ತಾಯಿಯೇ ಕಾರಣ. ಹೀಗಾಗಿ  ಚಿತ್ರವನ್ನು ತಂದೆ.ತಾಯಿಗೆ ಅರ್ಪಣೆ ಮಾಡುವುದಾಗಿ ತಿಳಿಸಿದ್ದಾರೆ. ನಮ್ಮದು ರಾವ್ ಬಹದ್ದೂರ್ ಫ್ಯಾಮಿಲಿ. ಹೀಗಾಗಿ ಚಿತ್ರದಲ್ಲಿ ಅದೇ ಅಭಿಮಾನಕ್ಕೆ ಸಂಭಾಷನೆಯಲ್ಲಿ ಬಳಸಿದ್ದೇವೆ. ಬಿಂದಾಸ್ ಗೂಗ್ಲಿ ಚಿತ್ರ ಕಾಲೇಜು ವಿದ್ಯಾರ್ಥಿಗಳಿಗೆ ತಿಳಿ ಹೇಳುವ ಪಾತ್ರ. ಜೊತೆಗೆ ಯಾರೂ ಕೂಡ ತಂದೆ ತಾಯಿಯನ್ನು ನೋಯಿಸದಿರಿ ಎಂದು ಚಿತ್ರದ ಮೂಲಕ ಹೇಳಿದ್ದೇವೆ. ಧರ್ಮ ಕೀರ್ತಿರಾಜ್ ಚಿತ್ರದಲ್ಲಿ ತರಬೇತುದಾರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಳ್ಳೆಯ ಚಿತ್ರ ಮಾಡಿದ ತೃಪ್ತಿ ಇದೆ. ಎಲ್ಲರ ಸಹಕಾರ ಮತ್ತು ಬೆಂಬಲವಿರಲಿ. ಪುತ್ರ ಮೊದಲ ಬಾರಿಗೆ ನಾಯಕನಾಗಿದ್ದಾನೆ ಎಲ್ಲರೂ ಬೆಂಬಲಿಸಿ ಎಂದು ಕೇಳಿಕೊಂಡರು.

ಸಂತೋಷ್ ಕುಮಾರ್  ಚಿತ್ರದ ನಿರ್ದೇಶಕರು ಕೌಟಂಬಿಕ ಚಿತ್ರದ ಬಗ್ಗೆ ಆಸಕ್ತಿ ವಹಿಸಿದ್ದಾರೆ. ಮ್ಯಾಥ್ಯೂ ರಾಜನ್ ಛಾಯಾಗ್ರಹಣ, ವಿನು ಮನಸ್ಸು ಏಳು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ.

ನಿಮಿಕ ರತ್ನಕರ್, ಶಿಲ್ಪಾ ಲದ್ದಿಮತ್, ಮಮತ ರಾವತ್, ರವಿ ಶೇಟ್, ಅಶೋಕ್, ಕಾರ್ತಿಕ್, ಶ್ರುತಿ, ಕೀರ್ತಿ ರಾಜ್, ರಾಮಕೃಷ್ಣ, ವಾಣಿಶ್ರೀ, ಮುತುರಾಜ್, ಜೆನೀಫರ್, ವಿಜಯಕುಮಾರ್ ಅನ್ವೇಕರ್, ರೀಣ ಅರ್ಕಸಲಿ, ಅಭಿಲಾಷ್, ಶಷಾಂಕ್, ರಣವೀರ್, ಭೋಜರಾಜ್ ತಾರಾಗಣದಲ್ಲಿ ಇದ್ದಾರೆ.

untitled_1-108-2

ಪತಿ ಬೇಕು.ಕಾಂ

ಇಂದಿನ ಆಧುನಿಕ ಜಗತ್ತಿನಲ್ಲಿ ವಿವಾಹ ಅಂತರ್ಜಾಲ ಮಾಧ್ಯಮದ ಸಹಾಯದಿಂದ ಆಗುತ್ತಿದೆ ಎಂಬುದು ತಿಳಿದಿರುವ ವಿಚಾರ. ಅಂತಹುದೇ ಕೆಲವು ಪ್ರಸಂಗಗಳು ಪತಿಬೇಕು.ಕಾಂ ಕನ್ನಡ ಸಿನಿಮಾದಲ್ಲಿ ಮನಸ್ಸಿಗೆ ತಟ್ಟುವ ಹಾಗೆ ಹೃದಯಕ್ಕೆ ಹತ್ತಿರವಾಗುವ ಹಾಗೆ ನಿರ್ದೇಶನ ಮಾಡಿದ್ದಾರೆ ಯುವ ನಿರ್ದೇಶಕ ರಾಕೇಶ್.

ಈ ಚಿತ್ರದ ನಿರ್ದೇಶನದ ಜೊತೆಗೆ ಜೈ ಮಾರುತಿ ಪಿಕ್ಚರ್ಸ್ ಅಡಿಯಲ್ಲಿ ಶ್ರೀನಿವಾಸ್ ಹಾಗೂ ಮಂಜುನಾಥ್ ಜೊತೆ ಹಣ ಸಹ ಹೂಡಿದ್ದಾರೆ ರಾಕೇಶ್. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಜನಪ್ರಿಯ ನಿರೂಪಕಿ ಶೀತಲ್ ಶೆಟ್ಟಿ ಹಾಗೂ ಅವರ ಹೆತ್ತವರ ಪಾತ್ರಗಳಲ್ಲಿ ಹರಿಣಿ ಹಾಗೂ ಕೃಷ್ಣ ಅಡಿಗ ಅಭಿನಯಿಸಿದ್ದಾರೆ. ಮದುವೆಗಾಗಿ ಗಂಡು ಹುಡುಕುವ ಹಲವಾರು ಪ್ರಸಂಗಗಳು ಇಂದಿನ ಯುವ ಜನಾಂಗಕ್ಕೆ ಹತ್ತಿರವಾಗಲಿದೆ ಎಂದು ನಿರ್ದೇಶಕ ರಾಕೇಶ್ ಹೇಳುತ್ತಾರೆ. ಯಾಕಪ್ಪಾ ದ್ಯಾವರೆ ಅಡಿಸ್ತಿಯ ಕ್ಯಾಬರೆ….ಎಂಬ ಹಾಡು ಈ ಚಿತ್ರದಲ್ಲಿ ಆನೇಕ ವಿಚಾರಗಳನ್ನು ಹೇಳುತ್ತದೆ.

ಯು ಅರ್ಹತಾ ಪತ್ರ ಪಡೆದಿರುವ ಪತಿ ಬೇಕು.ಕಾಂ ಚಿತ್ರಕ್ಕೆ ಯೋಗಿ ಛಾಯಾಗ್ರಹಣ, ಕೌಶಿಕ್ ಶರ್ಮ ಸಂಗೀತ, ವಿಜಯಕುಮಾರ್ ಸಂಕಲನ, ಹರ್ಷವರ್ಧನ ರಾಜ್ ಹಿನ್ನಲೆ ಸಂಗೀತ ನೀಡಿದ್ದಾರೆ.

Leave a Comment