ಬಾಹ್ಯಾಕಾಶ ಸಂಶೋಧನೆ: ಮುಂಚೂಣಿಯಲ್ಲಿದೆ ಭಾರತ

ಬೆಂಗಳೂರು, ಸೆ ೨- ಜನರ ಜೀವನದ ಗುಣಮಟ್ಟವನ್ನು ಸುಧಾರಿಸುವಲ್ಲಿ ವೈಜ್ಞಾನಿಕ ಕ್ಷೇತ್ರದ ಕೊಡುಗೆ ಅಮೂಲ್ಯವಾಗಿದೆ. ಜಾಗತಿಕ ಮಟ್ಟದಲ್ಲಿ ಇಂದು ಭಾರತವು ಬಾಹ್ಯಾಕಾಶ ಸಂಶೋಧನ ಕ್ಷೇತ್ರದಲ್ಲಿ ಇತರ ದೇಶಗಳಿಗೆ ನೆರವು ನೀಡುವ ಮಟ್ಟಿಗೆ ಬೆಳೆದು ನಿಂತಿದೆ. ವಿದ್ಯಾರ್ಥಿಗಳಲ್ಲಿ ವಿಜ್ಞಾನ ಹಾಗೂ ವೈಜ್ಞಾನಿಕ ಸಂಶೋಧನೆಗಳ ಕುರಿತು ಆಸಕ್ತಿ ಮೂಡಬೇಕಾದರೆ ಸಾಂಪ್ರದಾಯಿಕ ಶೈಲಿಯಲ್ಲಿ ಶಿಕ್ಷಣ ನೀಡಿದರೆ ಪ್ರಯೋಜನವಾಗದು. ಬದಲಾಗಿ ಇಂತಹ ವಿಜ್ಞಾನ ಉದ್ಯಾನಗಳನ್ನು ಶಾಲೆಗಳಲ್ಲಿ ನಿರ್ಮಿಸುವುದರ ಮೂಲಕ ಕಲಿಕೆಯನ್ನು ತರಬೇತಿ ಜೊತೆ ಅರ್ಥಪೂರ್ಣಗೊಳಿಸಬಹುದು ಎಂದು ಇಸ್ರೋ ಮಾಜಿ ಅಧ್ಯಕ್ಷ ಡಾ. ಎ.ಎಸ್.ಕಿರಣ್‌ಕುಮಾರ್ ಹೇಳಿದರು.

ನಗರದ ವೈಟ್‌ಫೀಲ್ಡ್‌ನಲ್ಲಿರುವ ವಾಗ್ದೇವಿ ವಿಲಾಸ ಶಾಲೆ ಇಂದು ವಿದ್ಯಾರ್ಥಿಗಳಿಗಾಗಿ ವಿಜ್ಞಾನ ಉತ್ಸವದಲ್ಲಿ ಪಾಲ್ಗೊಂಡು ಮಾತಾನಾಡಿದ ಅವರು ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದು ಹೇಳಿದರು.
ಭಾರತೀಯ ಬಾಹ್ಯಕಾಶ ಸಂಶೋಧನಾ ಕ್ಷೇತ್ರಕ್ಕೆ ಡಾ.ಕಿರಣ್ ಕುಮಾರ್ ಅವರು ಸಲ್ಲಿಸಿರುವ ಕೊಡುಗೆಯನ್ನು ಸ್ಮರಿಸುತ್ತ ವಾಗ್ದೇವಿ ವಿಜ್ಞಾನ ಉದ್ಯಾನವನ್ನು ಅವರ ಹೆಸರಿನಲ್ಲಿಯೇ ನಿರ್ಮಿಸಲಾಗಿದೆ”, ಎಂದು ವಾಗ್ದೇವಿ ವಿಲಾಸ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಕೆ.ಹರೀಶ್ ಅವರು ತಿಳಿಸಿದರು.

ಶಾಲೆಯ ಆವರಣದಲ್ಲಿ ಪದ್ಮಶ್ರೀ ಸುದರ್ಶನ್ ಪಟ್ನಾಯಕ್ ಅವರು ಬಾಹ್ಯಾಕಾಶ ಪರಿಕಲ್ಪನೆಯ ಹಿನ್ನೆಲೆಯಲ್ಲಿ ರಚಿಸಿದ್ದ ಮರಳು ಶಿಲ್ಪವು ಉತ್ಸವದ ಪ್ರಮುಖ ಆಕರ್ಷಣೆಯಾಗಿತ್ತು. ಉತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಹಲವಾರು ಸ್ಪರ್ಧೆಗಳನ್ನು ಅಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಇಸ್ರೋದ ಹಿರಿಯ ವಿಜ್ಞಾನಿಗಳಾದ ಗುರುಪ್ರಸಾದ್ ಸುಂದರಮ್ಮ ಕೃಷ್ಣಮೂರ್ತಿ, ಸಂಸ್ಥೆಯ ವಿಶ್ವಸ್ಥರಾದ ಗಣೇಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಾಲೆಟ್ ಸಬ್ರೀನಾ, ಆಡಳಿತಾಧಿಕಾರಿ ಪ್ರಮೋದ್ ಭಟ್ ಹಾಗೂ ಶಾಲೆಯ ಪ್ರಾಂಶುಪಾಲರಾದ ಆರ್.ಸಿಂಧು ಅವರು ಭಾಗವಹಿಸಿದ್ದರು.

ಚಿತ್ರ ಶೀರ್ಷಿಕೆ: ವೈಟ್‌ಫೀಲ್ಡ್‌ನ ವಾಗ್ದೇವಿ ವಿಲಾಸ ಶಾಲೆಯಲ್ಲಿ ಪ್ರಾರಂಭಿಸಲಾದ ಸೈನ್ಸ್‌ಟೆಕ್ ಪಾರ್ಕ್‌ನ್ನು ಇಸ್ರೋದ ಮಾಜಿ ಅಧ್ಯಕ್ಷ ಡಾ. ಎ. ಎಸ್. ಕಿರಣ್ ಕುಮಾರ್ ಉದ್ಘಾಟಿಸಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು. ವಾಗ್ದೇವಿ ಸಂಸ್ಥೆ ಅಧ್ಯಕ್ಷ ಕೆ. ಹರೀಶ್, ಟ್ರಸ್ಟಿ ಸುಂದರಮ್ಮ ಕೃಷ್ಣಮೂರ್ತಿ, ಆಡಳಿತಾಧಿಕಾರಿ ಶಾಲೆಟ್ ಸಬ್ರೀನಾ, ಆಡಳಿತಾಧಿಕಾರಿ ಪ್ರಮೋದ್ ಭಟ್ ಮುಂತಾದವರಿದ್ದರು.

Leave a Comment