ಬಾಹ್ಯಾಕಾಶ ಯಾನ ಮುಗಿಸಿ ಭೂಮಿಗೆ ಮರಳಿದ ಡ್ರ್ಯಾಗನ್

  • ಉತ್ತನೂರು ವೆಂಕಟೇಶ್

ಒಂದು ವಾರ ಕಾಲ ಅಂತರ ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ತಂಗಿದ್ದ ಸ್ಫೇಸ್‌ ಎಕ್ಸ್‌ನ ಡ್ರ್ಯಾಗನ್ ಹೆಸರಿನ ಬಾಹ್ಯಾಕಾಶ ನೌಕೆ, ಶುಕ್ರವಾರ (ಮಾ.೮) ಅಟ್ಲಾಂಟಿಕ್ ಸಾಗರದಲ್ಲಿ ಯಶಸ್ವಿಯಾಗಿ ಇಳಿದಿದೆ. ಪ್ಯಾರಾ‌ಚೂಟ್‌ಗಳ ಸಹಾಯದಿಂದ ನಿಧಾನವಾಗಿ ಇಳಿದ ಈ ನೌಕೆಯನ್ನು ನಂತರದಲ್ಲಿ ಕೇಪ್ ಕನೆವರಾಲ್ ನಿಲ್ದಾಣಕ್ಕೆ ಕೊಂಡ್ಯೊಯಲಾಯಿತು ಎಂದು ನಾಸಾ ಹೇಳಿದೆ.

  • 6 ದಿನಗಳ ಹಿಂದೆ ಅಂತರ ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದ ಡ್ರ್ಯಾಗನ್ ನೌಕೆ ಶುಕ್ರವಾರ ಸುರಕ್ಷಿತವಾಗಿ ಭೂಮಿಗೆ ಮರಳಿದೆ.

  • ಮಾನವ ಗಗನ ಯಾನಿಗಳನ್ನು ಬಾಹ್ಯಾಕಾಶ ಕಳುಹಿಸುವ ಯೋಜನೆಯನ್ನು ಹೊಂದಿರುವ ನಾಸಾ ಅದರ ಪೂರ್ವಭಾವಿಯಾಗಿ ಈ ನೌಕೆಯನ್ನು ಉಡಾವಣೆ ಮಾಡಿತು.

  • ಗಗನ ಯಾನಿಗಳು ಯಾನ ಮಾಡಲು ಎಲ್ಲ ವ್ಯವಸ್ಥೆಗಳು ಇರುವಂತೆ ಈ ನೌಕೆಯನ್ನು ಸ್ಪೇಸ್ ಎಕ್ಸ್ ಸಂಸ್ಥೆ ತಯಾರು ಮಾಡಿತು.

  • ಪ್ರಯೋಗಾರ್ಥ ಉಡಾವಣೆಯಲ್ಲಿ ಮಾನವ ಬದಲಿಗೆ ಡಮ್ಮಿ ಯಾನಿಯನ್ನು ಕೂರಿಸಿ ಕಳುಹಿಸಲಾಗಿತು.

ಈ ವರ್ಷಾಂತ್ಯದಲ್ಲಿ ಮಾನವ ಗಗನ ಯಾನಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಸಿದ್ಧತೆಯಲ್ಲಿರುವ ನಾಸಾ, ಅದರ ಪೂರ್ವಭಾವಿ ಪರೀಕ್ಷಾರ್ಥವಾಗಿ ಡ್ರ್ಯಾಗನ್ ನೌಕೆಯನ್ನು ಉಡಾವಣೆ  ಮಾಡಿತ್ತು. ಮಾನವ ಗಗನ ಯಾನಿಗಳನ್ನು ಹೊತ್ತೊಯ್ಯಲು ವ್ಯವಸ್ಥೆ ಇರುವಂತೆ ಸ್ಪೇಸ್ ಎಕ್ಸ್ ಈ ನೌಕೆಯನ್ನು ನಿರ್ಮಾಣ ಮಾಡಿತು.

10vichara2

ಈ ನೌಕೆಯನ್ನು ಮಾ.3 ರಂದು ಫ್ಲಾರಿಡಾದ ಕೇಪ್ ಕನೆವರೆಲ್ ವಾಯು ನೆಲೆಯಲ್ಲಿರುವ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿತ್ತು.

ಸ್ಫೇಸ್ ಎಕ್ಸ್‌ನ ಫಾಲ್ಕನ್ ರಾಕೇಟ್ ಬೆನ್ನೇರಿ ಹೊರಟಿದ್ದ ಈ ನೌಕೆ ಯಶಸ್ವಿಯಾಗಿ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿತ್ತು. ಯೋಜನೆಯಂತೆ  ಆರು ದಿನಗಳ ಕಾಲ ಬಾಹ್ಯಾಕಾಶ ನಿಲ್ದಾಣಕ್ಕೆ ಅಂಟಿಕೊಂಡಿದ್ದ ಡ್ರ್ಯಾಗನ್, ಅದರಿಂದ ಕಳಚಿಕೊಂಡು ಭೂಮಿಯತ್ತ ಪ್ರಯಾಣಿಸಿತ್ತು.

10vichara3ಉಡಾವಣೆ ಮಾಡಿದ ಬಾಹ್ಯಾಕಾಶ ನೌಕೆ ಮತ್ತೆ ಸುರಕ್ಷಿತವಾಗಿ ಭೂಮಿಗೆ ಮರಳುವ ಹಂತ ಅತಿ ಮಹತ್ವದ್ದು. ನೌಕೆ ಭೂ ವಲಯವನ್ನು ಪ್ರವೇಶಿಸುವಾಗ ಸ್ಫೋಟಗೊಳ್ಳುವಷ್ಟು ಒತ್ತಡಕ್ಕೆ ಒಳಗಾಗುತ್ತದೆ. ಅದನ್ನು ತಡೆದುಕೊಳ್ಳುವಂತೆ ನೌಕೆಯನ್ನು ನಿರ್ಮಾಣ ಮಾಡಲಾಗಿರುತ್ತದೆ.

ಮುಂದೆ ಮಾನವ ಗಗನಯಾನಿಗಳನ್ನು ಹೊತ್ತು ಹೋಗಲಿರುವ ಡ್ರ್ಯಾಗನ್ ನೌಕೆಯಲ್ಲಿ ಈ ಬಾರಿ ಮಾನವ ಗಗನಯಾನಿ ಬದಲಿಗೆ ಡಮ್ಮಿ ಯಾನಿಯನ್ನು ಕೂರಿಸಿ ಕಳುಹಿಸಲಾಗಿತ್ತು. ಈ ನೌಕೆಯಲ್ಲಿ ಹಲವು ವೈಜ್ಞಾನಿಕ ಸಾಧನಗಳು, ಮಾನಿಟರ್‌ಗಳನ್ನು ಅಳವಡಿಸಲಾಗಿತ್ತು. ನೌಕೆ ಉಡಾವಣೆಗೊಳ್ಳುವಾಗ ಮತ್ತೆ ಭೂ ಪ್ರವೇಶ ಮಾಡುವಾಗ ಅದರಲ್ಲಿಯ ಯಾನಿಗಳ ಮೇಲೆ ಬೀಳುವ ಒತ್ತಡ ಇತ್ಯಾದಿಗಳನ್ನು ಈ ವೈಜ್ಞಾನಿಕ ಸಾಧನಗಳು ದಾಖಲಿಸಿ ಕೊಳ್ಳುತ್ತವೆ. ಇದರ ಅಧ್ಯಯನ ಮುಂದಿನ ಸುರಕ್ಷತೆಯ ಯಾನಕ್ಕೆ ಸಹಕಾರಿಯಾಗುತ್ತದೆ ಎಂದು ನಾಸಾ ಹೇಳಿದೆ.

ತನ್ನ ಗಗನ ಯಾನಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು  ನಾಸಾ ರಷ್ಯಾದ ಸುಯೆಜ್ ನೌಕೆಯನ್ನು ಅವಲಂಭಿಸಿತ್ತು .ಇದಕ್ಕಾಗಿ ರಷ್ಯಾಗೆ ೨.೬ ಶತಕೋಟಿ ದಾಲರ್‍ಸ್ ನಷ್ಟು ಭಾರಿ ಮೊತ್ತವನ್ನು ಪಾವತಿಸುತ್ತಿತ್ತು. ಈ ಅವಲಂಬನೆಯಿಂದ ಹೊರ ಬಂದು ಅಮೇರಿಕಾ ಬಾಹ್ಯಾಕಾಶ ಸಂಬಂಧಿತ ಸಂಸ್ಥೆಗಳ ಸಹಯೋಗದಲ್ಲಿ  ಗಗನ ನೌಕೆ, ರಾಕೇಟ್ ಸೇರಿದಂತೆ ಬಾಹ್ಯಾಕಾಶ ಯಾನದ ಇತರೆ ಸಾಧನಗಳನ್ನು ತಯಾರಿಸುವ ಗುತ್ತಿಗೆಯನ್ನು ಅಂತಹ ಖಾಸಗಿ ಸಂಸ್ಥೆಗಳಿಗೆ ನೀಡುವ ಯೋಜನೆಯಂತೆ ಅಮೆರಿಕಾದ ಸ್ಫೇಸ್ ಎಕ್ಸ್ ಮತ್ತು ಬೋಯಿಂಗ್ ಸಂಸ್ಥೆಗಳೊಂದಿಗೆ ನಾಸಾ ಒಪ್ಪಂದ ಮಾಡಿಕೊಂಡಿದೆ.

Leave a Comment