ಬಾಹ್ಯಾಕಾಶ ನಿಲ್ದಾಣದ ಬ್ಯಾಟರಿಗಳ ಬದಲಾವಣೆ

  • ಉತ್ತನೂರು ವೆಂಕಟೇಶ್

ಮನೆಯಲ್ಲಿಯ ರೀಚಾರ್ಬಲ್ ಬ್ಯಾಟರಿಗಳನ್ನು ಕಾಲಕಾಲಕ್ಕೆ ಬದಲಾಯಿಸುವ ಹಾಗೆ ಅಂತರ ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿಯೂ ಶಕ್ತಿ ತುಂಬಿದ ಬ್ಯಾಟರಿಗಳನ್ನು ಹೊಸ ಬ್ಯಾಟರಿಗಳಿಗೆ ಬದಲಾಯಿಸಲಾಗುತ್ತದೆ.

  • ಅಂತರ ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಕಾರ್ಯ ನಿರ್ವಹಿಸಲು ವಿದ್ಯುತ್ ಒದಗಿಸುವ ಬ್ಯಾಟರಿಗಳು ಆಗಾಗ ಶಕ್ತಿ ಕುಂದುತ್ತವೆ. ಆ ಸಂದರ್ಭದಲ್ಲಿ ಅವನ್ನು ಬದಲಾಯಿಸುವ ಕಾರ್ಯ ನಡೆಯುತ್ತದೆ.

  • ಮಾರ್ಚ್ 22 ಶುಕ್ರವಾರ ನಾಸಾದ ಇಬ್ಬರು ಗಗನಯಾನಿಗಳು ಬಾಹ್ಯಾಕಾಶ ನಿಲ್ದಾಣದವರೆಗೆ ತೇಲಾಡುತ್ತಾ ಅದರಲ್ಲಿದ್ದ ನಿಕ್ಕಲ್ ಹೈಡ್ರೋಜನ್ ಬ್ಯಾಟರಿಗಳನ್ನು ಹೊರ ತೆಗೆದು ಆ ಜಾಗದಲ್ಲಿ ಲೀಥಿಯಂ ಅಯ್ಯಾನ್ ಬ್ಯಾಟರಿಗಳನ್ನು ಅಳವಡಿಸಿದರು.

  • ನಿಲ್ದಾಣದಲ್ಲಿ ಸೋಲಾರ್ ಫ್ಯಾನೆಲ್‌ಗಳು ಇವೆಯಾದರೂ ರಾತ್ರಿ ಮತ್ತು ಸೂರ್ಯನ ಬೆಳಕು ಇಲ್ಲದ ಸಂದರ್ಭದಲ್ಲಿ ನಿಲ್ದಾಣ ಕಾರ್ಯ ನಿರ್ವಹಣೆಗೆ ಬ್ಯಾಟರಿಗಳು ಅನಿರ್ವಾಯ, ಈ ಬ್ಯಾಟರಿಗಳನ್ನು ಕಾಲ ಕಾಲಕ್ಕೆ ಬದಲಾಯಿಸಬೇಕಾಗುತ್ತದೆ.

24vichara2

ಶುಕ್ರವಾರ ಬ್ಯಾಟರಿ ಬದಲಾವಣೆ ಕಾರ್ಯಕ್ಕಾಗಿ ನಾಸಾದ ಇಬ್ಬರು ಖಗೋಳ ಯಾನಿಗಳು ಸರಿಸುಮಾರು ಆರೂವರೆ ಗಂಟೆಗಳ ಕಾಲ ಬಾಹ್ಯಾಕಾಶದಲ್ಲಿ ತೇಲಾಡುತ್ತಾ ಮೂರು ಹಳೆಯ ನಿಕ್ಕಲ್ -ಹೈಡ್ರೋಜನ್ ಬ್ಯಾಟರಿಗಳನ್ನು ಬದಲಾಯಿಸಿದ್ದಾರೆ. ಬಾಹ್ಯಾಕಾಶ ನಿಲ್ದಾಣ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಆಗಾಗ ಬ್ಯಾಟರಿಗಳ ಹಾಗೂ ಅದರಲ್ಲಿಯ ವಿದ್ಯುತ್ ಚ್ಯಾನೆಲ್‌ಗಳನ್ನು ನವೀಕರಿಸುತ್ತಿರಬೇಕಾಗುತ್ತದೆ. ನಿಲ್ದಾಣದ ವಿದ್ಯುತ್ ಸರಬರಾಜಿಗೆ ಅದರಲ್ಲಿ ಸೋಲಾರ್ ಫ್ಯಾನೆಲ್‌ಗಳಿವೆ. ಆದರೆ ರಾತ್ರಿ ವೇಳೆ ಹಾಗೂ ಸೂರ್ಯನ ಬೆಳಕು ಬೀಳದ ಸಂದರ್ಭದಲ್ಲಿ ಬಾಹ್ಯಾಕಾಶ ನಿರ್ವಹಣೆಯ ಕಾರ್ಯ ನಿರ್ವಹಣೆಗಾಗಿ ಬ್ಯಾಟರಿಗಳನ್ನು ಅಳವಡಿಸಲಾಗಿದೆ.

ಶುಕ್ರವಾರ ನಾಸಾದ ಖಗೋಳ ಯಾನಿಗಳಾದ ಅನ್ನೆ ಮೆಕ್ ಕ್ಲೈನ್ ಮತ್ತು ನಿಕ್ ಹೇಗ್ ಅವರು ಶಕ್ತಿ ಕುಂದಿದ ನಿಕ್ಕಲ್ ಹೈಡ್ರೋಜನ್ ಬ್ಯಾಟರಿಗಳನ್ನು ಬದಲಾಯಿಸಿ ಅವುಗಳ ಜಾಗದಲ್ಲಿ ಲೀಥಿಯಂ ಅಯ್ಯಾನ್ ಬ್ಯಾಟರಿಗಳನ್ನು ಅಳವಡಿಸಿದ್ದಾರೆ. ಆಗಾಗ ನಿಲ್ದಾಣದ ಆಧುನೀಕರಣ ಜೊತೆಗೆ ಅದರಲ್ಲಿಯ ೮ ವಿದ್ಯುತ್ ಚ್ಯಾನೆಲ್‌ಗಳ ಆಧುನೀಕರಣವು ನಡೆಯುತ್ತಿರುತ್ತದೆ.

ನಾಸಾ ಮೊದಲಿಗೆ ೨೦೧೭ ರಲ್ಲಿ ಬ್ಯಾಟರಿಗಳ ಬದಲಾವಣೆಯ ಕಾರ್ಯ ನಡೆಸಿತ್ತು. ದೀರ್ಘಕಾಲದವರೆಗೂ ಕಾರ್ಯನಿರ್ವಹಿಸುವಲ್ಲಿ ನಿಕ್ಕಲ್ ಹೈಡ್ರೋಜನ್ ಬ್ಯಾಟರಿಗಳ ಸಾಮರ್ಥ್ಯ ಕುಂದುತ್ತದೆ. ಆ ಸಂದರ್ಭದಲ್ಲಿ ಇವನ್ನು ಬದಲಿಸಿ ಲೀಥಿಯಂ ಅಯ್ಯಾನ್ ಬ್ಯಾಟರಿಗಳನ್ನು ಅಳವಡಿಸಲಾಗುತ್ತದೆ ಎಂದು ಬಾಹ್ಯಾಕಾಶ ನಿಲ್ದಾಣದ ಕಾರ್ಯ ನಿರ್ವಹಣಾ ವ್ಯವಸ್ಥಾಪಕ ಕೆನ್ನಿ ಟೋಡ್ ಹೇಳಿದ್ದಾರೆ.

ಮುಂದಿನ ವಾರದಲ್ಲಿ ಈ ಬದಲಾವಣೆ ಕಾರ್ಯ ನಡೆಯಲಿದೆ ಎಂದು ನಾಸಾ ಹೇಳಿದೆ.

Leave a Comment