ಬಾಹ್ಯಾಕಾಶ ನಿಲ್ದಾಣಕ್ಕೆ 20 ವರ್ಷ

ಬಾಹ್ಯಾಕಾಶದ ಶೂನ್ಯ ಗುರುತ್ವಾಕರ್ಷಣೆಯಲ್ಲಿ ಪ್ರಯೋಗಗಳನ್ನು ನಡೆಸುವ ಸ್ಥಳವೇ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ. ಇದು 20 ವರ್ಷಗಳನ್ನು ಈಗ ಮುಗಿಸಿದೆ. ನಿಲ್ದಾಣವೆಂದರೇ ಒಂದೇ ಜಾಗದಲ್ಲಿ ನೆಲೆಗೊಂಡಿರುವುದಿಲ್ಲ. ಸದಾ ಭೂಮಿಯ ಸುತ್ತ ಸುತ್ತುತ್ತಲೇ ಇರುತ್ತದೆ.

ಬಾಹ್ಯಾಕಾಶದಲ್ಲಿ ಅಂತರ ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ, ನೆಲೆಗೊಂಡು 20 ವರ್ಷಗಳು ಕಳೆದಿವೆ. ಬಾಹ್ಯಾಕಾಶದ ಶೂನ್ಯ ಗುರುತ್ವಾಕರ್ಷಣೆಯಲ್ಲಿ ಜೀವಶಾಸ್ತ್ರ, ಜೀವ ವಿಜ್ಞಾನ ಸೇರಿದಂತೆ ವಿವಿಧ ವಿಷಯಗಳ ಮೇಲೆ ಇಲ್ಲಿ ಪ್ರಯೋಗ ನಡೆಸಲಾಗುತ್ತದೆ.

ಈ ನಿಲ್ದಾಣದಲ್ಲಿ ಶೂನ್ಯ ಗುರುತ್ವಾಕರ್ಷಣೆ ಇರುವುದರಿಂದ ಇಲ್ಲಿನ ಸಿಬ್ಬಂದಿ ಗಾಳಿಯಲ್ಲಿ ತೇಲಾಡಿಕೊಂಡೇ ಇಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ.
ಭೂಮಿಯಿಂದ ಸುಮಾರು 400 ಕಿ.ಮೀ. ಎತ್ತರದಲ್ಲಿ ಗಂಟೆಗೆ 27.724 ಕಿ.ಮೀ ವೇಗದಲ್ಲಿ  ಸುತ್ತುವ ನಿಲ್ದಾಣ ದಿನಕ್ಕೆ 15.51 ಭಾರೀ ಭೂಮಿಯನ್ನು ಸುತ್ತು ಹಾಕುತ್ತದೆ.

30vichara1

ಭೂಮಿಯಿಂದ ಸುಮಾರು 400 ಕಿ.ಮೀ. ಎತ್ತರದಲ್ಲಿ ಗಂಟೆಗೆ 27,724 ಕಿ.ಮೀ. ವೇಗದಲ್ಲಿ ಸುತ್ತುವ ಈ ನಿಲ್ದಾಣ ದಿನಕ್ಕೆ 15.51 ಭಾರೀ ಭೂಮಿಯನ್ನು ಸುತ್ತುತ್ತದೆ. ಇಲ್ಲಿ ದೀರ್ಘಕಾಲ ಪ್ರಯೋಗಗಳನ್ನು ನಡೆಸುವ ಸಿಬ್ಬಂದಿ ವಾಸಿಸಲು ಯೋಗ್ಯ ವ್ಯವಸ್ಥೆ ಇರುತ್ತದೆ. ಹಾಗೂ ಇಲ್ಲಿಗೆ ಸಿಬ್ಬಂದಿ ಮತ್ತು ವೈಜ್ಞಾನಿಕ ಸಲಕರಣೆಗಳನ್ನು ಹೊತ್ತು ತರುವ ಬಾಹ್ಯಾಕಾಶ ನೌಕೆಯನ್ನು ಇದರೊಂದಿಗೆ ಜೋಡಿಸುವ ವ್ಯವಸ್ಥೆಯು ಇರುತ್ತದೆ.

ಈ ನಿಲ್ದಾಣಕ್ಕೆ ಭೂಮಿಯಿಂದ ಸಿಬ್ಬಂದಿ, ವೈಜ್ಞಾನಿಕ ಸಲಕರಣೆಗಳನ್ನು ಹೊತ್ತು ಹೋಗುವ ನೌಕೆಯನ್ನು ಇದಕ್ಕೆ ಜೋಡಿಸುವ ಮೂಲಕ ಭೂಮಿಯಿಂದ ಅಲ್ಲಿಯೇ ಅಲ್ಲಿಂದ ಭೂಮಿಗೆ ಸಿಬ್ಬಂದಿ ಮತ್ತು ಸಾಮಗ್ರಿಗಳನ್ನು ಸಾಗಿಸಲಾಗುತ್ತದೆ. ಇದರಲ್ಲಿ ಶೂನ್ಯ ಗುರುತ್ವಾಕರ್ಷಣೆ ಇದ್ದು, ಇಲ್ಲಿ ಸಂಶೋಧನೆ ಮಾಡುವವರು ನಾಲ್ಕಾರು ತಿಂಗಳ ಕಾಲ ಅಲ್ಲಿ ತೇಲಾಡಿಕೊಂಡೇ ಕಾರ್ಯ ನಿರ್ವಹಿಸಬೇಕು.

ಸೆಲ್ಯೂಟ್-1 ಮೊದಲ ಬಾಹ್ಯಾಕಾಶ ನಿಲ್ದಾಣ. 1971 ರ ಏಪ್ರಿಲ್ 19 ರಂದು ಸೋವಿಯತ್ ಒಕ್ಕೂಟ ಇದನ್ನು ಉಡಾವಣೆ ಮಾಡಿತ್ತು. ಬಹು ರಾಷ್ಟ್ರಗಳು ಒಟ್ಟಿಗೆ ಸೇರಿ ಜಂಟಿಯಾಗಿ ಉಡಾವಣೆಗೊಂಡಿದ್ದು, 1998. ಅದು ಈಗಲೂ ಕಾರ್ಯ ನಿರ್ವಹಿಸುತ್ತಿದೆ. ಇದಕ್ಕೆ ಹೆಚ್ಚಿನ ಸ್ಥಳಾವಕಾಶ ಜೋಡಿಸಬಹುದು. ಹಾಗೂ ಅನಗತ್ಯವಾದುದನ್ನು ಕಳಚಿ ಭೂಮಿಗೆ ರವಾನಿಸಬಹುದು. ಇದು 72.80 ಮೀಟರ್ ಉದ್ದ, 108.50 ಮೀಟರ್ ಅಗಲ 20 ಮೀಟರ್ ಎತ್ತರ ಮತ್ತು 453 ಟನ್ ತೂಕ ಹೊಂದಿದೆ.

ವಿವಿಧ ರಾಷ್ಟ್ರಗಳ ಗಗನಯಾತ್ರಿಗಳು ಇದನ್ನು ಪ್ರಯೋಗಾಲಯವನ್ನಾಗಿ ಬಳಸಿಕೊಂಡು ಶೂನ್ಯ ಗುರುತ್ವಾಕರ್ಷಣೆ ಮತ್ತು ಬಾಹ್ಯಾಕಾಶ ವಾತಾವರಣದಲ್ಲಿ ಜೀವಶಾಸ್ತ್ರ, ಜೀವ ವಿಜ್ಞಾನ, ಭೌತ ಶಾಸ್ತ್ರ, ಖಗೋಳ ವಿಜ್ಞಾನ, ವೈದ್ಯಕೀಯ ವಿಜ್ಞಾನ ಇತ್ಯಾದಿ ವಿಷಯಗಳ ಮೇಲೆ ಸಂಶೋಧನೆ ಕೈಗೊಳ್ಳುತ್ತಾರೆ.

ಇದರಲ್ಲಿ ನಿದ್ರಿಸಲು ಸಿಬ್ಬಂದಿಗೆ ವಸತಿ ಗೃಹಗಳಂತ ಕಂಪಾರ್ಟ್‌ಮೆಂಟ್ಸ್ ಗಳಿವೆ. ಅದರ ಗೋಡೆಗಳಿಗೆ ಕಟ್ಟಿರುವ ನಿದ್ರಾ ಚೀಲಗಳು (ಸ್ಲೀಪಿಂಗ್ ಬ್ಯಾಗ್) ಗಳಲ್ಲಿ ಸಿಬ್ಬಂದಿ ನಿದ್ರಿಸುತ್ತಾರೆ. ಸಾಮಾನು ಇಟ್ಟುಕೊಳ್ಳಲು ಗೋಡೆಗಳಿಗೆ ಕಟ್ಟಿರುವ ಬಲೆಗಳು ಇರುತ್ತವೆ.

ಓದುವ, ಸಂಗೀತ ಆಲಿಸುವ ಲ್ಯಾಪ್‌ಟಾಪ್ ಬಳಸುವುದು ಸೇರಿದಂತೆ ದಿನನಿತ್ಯದ ಎಲ್ಲಾ ಕಾರ್ಯಗಳಿಗೂ ಇಲ್ಲಿ ವ್ಯವಸ್ಥೆ ಇರುತ್ತದೆ.

Leave a Comment