ಬಾಹುಬಲಿ ಮಹಾಮಸ್ತಕಾಭಿಷೇಕ: ಪಂಚಮಹಾವೈಭವ ಶುಭಾರಂಭ

ಉಜಿರೆ, ಫೆ.೧೨- ಧರ್ಮಸ್ಥಳದಲ್ಲಿ ನಡೆಯುತ್ತಿರುವ ಭಗವಾನ್ ಬಾಹುಬಲಿಯಚತುರ್ಥ ಮಹಾಮಸ್ತಕಾಭಿಷೇಕದ ಅಂಗವಾಗಿ ಸೋಮವಾರ ಪಂಚಮಹಾವೈಭವ ಮಂಟಪದಲ್ಲಿ ಮೊದಲ ತೀರ್ಥಂಕರ ವೃಷಭನಾಥರ ಆಡಳಿತದಲ್ಲಿ ನವಯುಗಾರಂಭದ ಘಟನೆಗಳನ್ನು ರೂಪಕದ ಮೂಲಕ ಸಾದರ ಪಡಿಸಲಾಯಿತು.

ಕಥಾನಕ: ಅಯೋಧ್ಯೆಯಲ್ಲಿ ವೃಷಭನಾಥನಆಸ್ಥಾನದಲ್ಲಿ ವೀಣಾವಾದನ ನಡೆಯುತ್ತಿರುತ್ತದೆ. ಪ್ರಜೆಗಳು ಭಯ-ಆತಂಕದಿಂದ ಬಂದುತಮ್ಮ ಸಮಸ್ಯೆಗಳನ್ನು ರಾಜನಲ್ಲಿ ತಿಳಿಸಿ ಪರಿಹಾರಕೋರುತ್ತಾರೆ.ಪ್ರಕೃತಿ ವಿಕೃತಿಯಾಗಿದೆ.ಆಹಾರದಕೊರತೆಇದೆ.ಕ್ರೂರ ಪ್ರಾಣಿಗಳ ಉಪಟಳ.ಬದುಕುವದಾರಿಕಾಣದೆಕಂಗಾಲಾಗಿದ್ದೇವೆ. ಮಾರ್ಗದರ್ಶನ ನೀಡಿ, ಸಮಸ್ಯೆ ಪರಿಹರಿಸಿ ಎಂದು ಪ್ರಜೆಗಳು ರಾಜನಲ್ಲಿ ಬೇಡಿಕೊಳ್ಳುತ್ತಾರೆ.

ವೃಷಭನಾಥ ಅಭಯ ನೀಡಿ ನವಯುಗ ಪರಿವರ್ತನೆಗೆ ನಾಂದಿ ಹಾಡುತ್ತಾನೆ. ಸಕಾಲಿಕ ಮಾರ್ಗದರ್ಶನ ನೀಡಿ ಸಮಸ್ಯೆಗಳನ್ನು ಸುಲಲಿತವಾಗಿ ಪರಿಹರಿಸುತ್ತಾನೆ.

ತನ್ನ ಪ್ರಜೆಗಳಿಗೆ ಅಸಿ(ಖಡ್ಗದ ಬಳಕೆ) ಮಸಿ (ಬರವಣಿಗೆ) ಕೃಷಿ, ವಾಣಿಜ್ಯ, ವಿದ್ಯೆ ಮತ್ತುಕಲೆಯನ್ನು ಬೋಧಿಸುತ್ತಾನೆ. ಎಲ್ಲವನ್ನೂನ್ಯಾಯಯುತವಾಗಿ, ಸಮರ್ಪಕವಾಗಿ ಬಳಸಬೇಕು. “ಬದುಕು, ಬದುಕಲು ಬಿಡು” ಎಂಬ ಅಹಿಂಸಾ ತತ್ವನ್ನು ಪಾಲಿಸಬೇಕು ಎಂದು ಮಾರ್ಗದರ್ಶನ ನೀಡುತ್ತಾನೆ.

ವೃಷಭನಾಥನಆದೇಶದಂತೆಎಲ್ಲರೂಅವರಕಾಯಕದಲ್ಲಿತಲ್ಲೀನರಾಗುತ್ತಾರೆ.ಎಲ್ಲೆಲ್ಲೂ ಸುಖ-ಸಂತೋಷ, ಶಾಂತಿ ನೆಮ್ಮದಿಯೊಂದಿಗೆ ಸಮೃದ್ಧಿ ನೆಲೆಸುತ್ತದೆ.ಸಂತೆಯದೃಶ್ಯ, ಸುಗ್ಗಿ ಕುಣಿತ, ಪ್ರಜೆಗಳ ಸುಖ-ಸಮೃದ್ಧಿ ಕಂಡು ಪ್ರೇಕ್ಷಕರುಆಶ್ಚರ್ಯಚಕಿತರಾದರು.

ವೃಷಭನಾಥರ ಪತ್ನಿಯರಾದ ಸುನಂದೆ ಮತ್ತುಯಶಸ್ವತಿರಾಜನ ಆಸ್ಥಾನಕ್ಕೆ ಬಂದು ಬೆಳಗ್ಗಿನ ಜಾವತಾವುಕಂಡ ಶೋಢಶ (ಹದಿನಾರು) ಸ್ವಪ್ನಗಳನ್ನು ವಿವರಿಸುತ್ತಾರೆ.

ಯಶಸ್ವತಿಯ ಮಗ ಮುಂದೆ ಪರಾಕ್ರಮಶಾಲಿಯಾಗಿಚಕ್ರವರ್ತಿಯಾಗುತ್ತಾನೆ (ಭರತ) ಹಾಗೂ ಸುನಂದೆಯ ಮಗ (ಬಾಹುಬಲಿ) ಸಕಲ ಸುಖ-ಭೋಗಗಳನ್ನು ತ್ಯಜಿಸಿ ಮೋಕ್ಷ ಪ್ರಾಪ್ತಿ ಮಾಡಿಕೊಳ್ಳುತ್ತಾನೆ. ತ್ಯಾಗ ಮೂರ್ತಿಯಾಗಿ ಲೋಕ ಪೂಜ್ಯನಾಗುತ್ತಾನೆಎಂದು ವೃಷಭನಾಥನಿಗೆ ತಿಳಿಯುತ್ತದೆ.

ಆಚಾರ್ಯ ಶ್ರೀ ೧೦೮ ವರ್ಧಮಾನ ಸಾಗರ್‌ಜಿ ಮುನಿಮಹಾರಾಜರು, ಆಚಾರ್ಯ ಶ್ರೀ ೧೦೮ ಪುಷ್ಪದಂತ ಸಾಗರ್‌ಜಿ ಮುನಿಮಹಾರಾಜರು, ಮುನಿಸಂಘದವರು, ಕ್ಷುಲ್ಲಕರು ಹಾಗೂ ಮಾತಾಜಿಯವರು ನವಯುಗಾರಂಭದ ದೃಶ್ಯಗಳನ್ನು ನೋಡಿತಾವುಇಂತಹರೂಪಕ ಈ ವರೆಗೆ ನೋಡಿಲ್ಲ. ಬಹಳ ಸುಂದರವಾಗಿ, ಅಚ್ಚುಕಟ್ಟಾಗಿ ಮೂಡಿ ಬಂದಿದೆಎಂದು ಮೆಚ್ಚುಗೆ ವ್ಯಕ್ತಪಡಿಸಿ ಆಶೀರ್ವದಿಸಿದರು.

ಜ್ಞಾನ, ವಿಜ್ಞಾನವು ಸುಜ್ಞಾನಕ್ಕೆ ಪ್ರೇರಕವಾಗಬೇಕು: ಡಿ. ವೀರೇಂದ್ರ ಹೆಗ್ಗಡೆಯವರು.

“ಆಜ್ ಕೀ ಆನಂದ್ ಕೀ ಜೈ” ಎಂಬ ಉದ್ಘಾರದೊಂದಿಗೆರೂಪಕ ಪ್ರದರ್ಶನದ ಬಗ್ಯೆ ಸಂತೋಷ ವ್ಯಕ್ತ ಪಡಿಸಿ, ಜ್ಞಾನ, ವಿಜ್ಞಾನವು ಸುಜ್ಞಾನಕ್ಕೆ ಪ್ರೇರಕವಾಗಬೇಕು. ವಿಜ್ಞಾನದ ಕೊಡುಗೆಗಳನ್ನು ಹಿತ-ಮಿತವಾಗಿ, ಇತಿ-ಮಿತಿಯೊಳಗೆ ಬಳಸಬೇಕು.ಲೋಕ ಕಲ್ಯಾಣಕ್ಕಾಗಿಉಪಯೋಗಿಸಬೇಕುಎಂದು ಸಲಹೆ ನೀಡಿದರು.

ನಾವು ವಿಜ್ಞಾನದ ಹಾಗೂ ಸುಖ-ಭೋಗಗಳ ದಾಸರಾಗಬಾರದು.ಒಡೆಯರಾಗಬೇಕು.ಪ್ರಗತಿಗಾಗಿ ಹಾಗೂ ಲೋಕಕಲ್ಯಾಣಕ್ಕಾಗಿ ವಿಜ್ಞಾನವನ್ನು ಬಳಸಬೇಕು ಎಂದುಹೆಗ್ಗಡೆಯವರುಹೇಳಿದರು.

ಹೇಮಾವತಿ ಹೆಗ್ಗಡೆಯವರು, ಅನಿತಾ ಸುರೇಂದ್ರಕುಮಾರ್, ಸುಪ್ರಿಯಾ ಹರ್ಷೇಂದ್ರಕುಮಾರ್ ಹಾಗೂ ಶ್ರದ್ಧಾಅಮಿತ್‌ರವರ  ಮಾರ್ಗದರ್ಶನದಲ್ಲಿಇನ್ನೂರಐವತ್ತುಕಲಾವಿದರು ಭಾಗವಹಿಸಿ ಅತ್ಯುತ್ತಮರೂಪಕ ಪ್ರದರ್ಶನ ನೀಡಿದ್ದಾರೆಎಂದು ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿದರು.

ರೂಪಕದದಾಖಲೀಕರಣ (ರೆಕಾರ್ಡಿಂಗ್) ಮಾಡಿರುವುದರಿಂದಇನ್ನು ನೂರು ವರ್ಷಗಳವರೆಗೂ ದೃಶ್ಯಾವಳಿ ನೋಡಿಅದರ ಸೊಗಡನ್ನು ಸವಿಯಬಹುದುಎಂದು ಹೆಗ್ಗಡೆಯವರು ತಿಳಿಸಿ ಎಲ್ಲಾಕಲಾವಿದರನ್ನು ಅಭಿನಂದಿಸಿದರು.

Leave a Comment