ಬಾಹುಬಲಿ ಚಿತ್ರ ಬಿಡುಗಡೆಗೆ ವಿರೋಧಿಸಿ ಪ್ರತಿಭಟನೆ

ಮೈಸೂರು:ಮಾ.20- ಕನ್ನಡ ಕ್ರಾಂತಿ ದಳದ ವತಿಯಿಂದ ಮೈಸೂರು ಜಿಲ್ಲಾ ನ್ಯಾಯಾಲಯದ ಎದುರು ಕರ್ನಾಟಕದಲ್ಲಿ ಬಾಹುಬಲಿ ಚಿತ್ರ ಬಿಡುಗಡೆಗೆ ವಿರೋಧಿಸಿ ಪ್ರತಿಭಟನೆ ನಡೆಯಿತು.
ನ್ಯಾಯಾಲಯದ ಎದುರಿನ ಗಾಂಧಿ ಪ್ರತಿಮೆ ಬಳಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಕಟ್ಟಪ್ಪ ಪಾತ್ರವನ್ನು ನಿರ್ವಹಿಸಿದ ಸತ್ಯರಾಜು ಕನ್ನಡದ ಕುರಿತು, ಕನ್ನಡ ಹೋರಾಟಗಾರರ ಕುರಿತು ಕಾವೇರಿ ವಿಚಾರದಲ್ಲಿ ಕೇವಲವಾಗಿ ಮಾತನಾಡಿದ್ದಾರೆ. ಅದರಿಂದ ಕರ್ನಾಟಕದ ಯಾವುದೇ ಭಾಗದ ಚಿತ್ರ ಮಂದಿರದಲ್ಲೂ ಚಿತ್ರ ಬಿಡುಗಡೆಯಾಗಬಾರದು ಎಂದರು.
ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ತೇಜಸ್ವಿ ಸೇರಿದಂತೆ ನೂರಾರು ಸದಸ್ಯರು ಪಾಲ್ಗೊಂಡಿದ್ದರು.

Leave a Comment