ಬಾಸ್ಟನ್ ಕ್ರೀಡಾಂಗಣ ಈಗ ಕೋವಿಡ್ -19 ಪರೀಕ್ಷಾ ಕೇಂದ್ರ

ಲಂಡನ್, ಏ 3- ಕೋವಿಡ್ -19 ವಿರುದ್ಧದ ಹೋರಾಟಕ್ಕೆ ಎಜ್ ಬಾಸ್ಟನ್ ಕ್ರೀಡಾಂಗಣವನ್ನು ಎನ್ಎಚ್ ಎಸ್ ಪರೀಕ್ಷಾ ಕೇಂದ್ರವಾಗಿ ಬಳಸಿಕೊಳ್ಳಲಾಗುತ್ತಿದೆ. ಈ ಕಾರಣಕ್ಕಾಗಿ ವಾರ್ವಿಕ್ ಶೈರ್ ಇದನ್ನು ದೇಣಿಗೆ ನೀಡಿದೆ.
ಇಎಸ್ ಪಿಎನ್ ಕ್ರಿಕ್ ಇನ್ಫೋ ವರದಿ ಪ್ರಕಾರ, ಮೈದಾನ, ವಿಶೇಷವಾಗಿ ಕಾರು ನಿಲ್ದಾಣವನ್ನು ಎನ್ಎಚ್ ಎಸ್ ಸಿಬ್ಬಂದಿಯ ಪರೀಕ್ಷಾ ಕೇಂದ್ರವಾಗಿ ಬಳಸಿಕೊಳ್ಳಲಾಗುತ್ತದೆ.

ಪರೀಕ್ಷೆ ಅಗತ್ಯವಿರುವವರು ಎಜ್ ಬಾಸ್ಟನ್ ರಸ್ತೆಯ ಪ್ರವೇಶದ್ವಾರದ ಮೂಲಕ ಸಂಚರಿಸಲಿದ್ದು, ತಮ್ಮ ವಾಹನದಲ್ಲಿ ಉಳಿದಿರುವಾಗ ಕಾರ್ಯವಿಧಾನಕ್ಕೆ ಒಳಪಡುತ್ತಾರೆ. ನಂತರ ಅವರು ಪರ್ಷೋರ್ ರಸ್ತೆ ಮೂಲಕ ನಿರ್ಗಮಿಸುತ್ತಾರೆ.
ಇನ್ನೂ ಹಲವು ದಿನಗಳ ಕಾಲ ಇಲ್ಲಿನ ಕ್ರಿಕೆಟ್ ಚಟುವಟಿಕೆಗಳು ಅಮಾನತುಗೊಂಡಿರುವ ಹಿನ್ನೆಲೆಯಲ್ಲಿ ಕ್ರೀಡಾಂಗಣದ ಒಂದು ಭಾಗವನ್ನು ಕೊರೊನಾ ವೈರಸ್ ಸೋಂಕಿನ ವಿರುದ್ಧದ ಹೋರಾಟಕ್ಕೆ ನೀಡಲಾಗಿದೆ.

Leave a Comment