ಬಾವಿಯಲ್ಲಿ ಉಸಿರುಗಟ್ಟಿ ಮೃತ್ಯು

ಬ್ರಹ್ಮಾವರ, ಜೂ.೨೦- ಕೊಡಪಾನ ತೆಗೆಯಲು ಬಾವಿಗೆ ಇಳಿದ ವ್ಯಕ್ತಿ ಯೊಬ್ಬರು ಉಸಿರುಗಟ್ಟಿ ಮೃತಪಟ್ಟ ಘಟನೆ ಜೂ.೧೮ರಂದು ಸಂಜೆ ೬ಗಂಟೆಗೆ ರಂಗನಕೆರೆ ಎಂಬಲ್ಲಿ ನಡೆದಿದೆ.

ಮೃತರನ್ನು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಗಂಗಪ್ಪ ಗುರಿಕಾರ ಎಂಬವರ ಮಗ ಮಂಜುನಾಥ ಗುರಿಕಾರ್(೨೬) ಎಂದು ಗುರುತಿಸಲಾ ಗಿದೆ. ಇವರು ರಂಗನಕೆರೆಯ ಅಬ್ದುಲ್

ಖಾದರ್ ಎಂಬವರ ಮನೆಯ ಬಾವಿಯಲ್ಲಿರುವ ಕೊಡಪಾನವನ್ನು ತೆಗೆಯಲು ಬಾವಿಗೆ ಇಳಿದಿದ್ದು, ಈ ವೇಳೆ ಆಳವಾದ ಬಾವಿಯೊಳಗೆ ಮಂಜುನಾಥ್ ಉಸಿರುಗಟ್ಟಿ ಮೇಲೆ ಬರಲು ಆಗದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment