`ಬಾಳೇ` ಬಂಗಾರ ಆರೋಗ್ಯದ ಮಂದಾರ

ಬಾಳೆಹಣ್ಣು ಮತ್ತು ಅದರಿಂದಾಗುವ ಪ್ರಯೋಜನಗಳ ಬಗ್ಗೆ ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಕಚ್ಚಾ ಅಂದರೆ ಹಸಿ ಬಾಳೆಕಾಯಿಂದಾಗುವ ಪ್ರಯೋಜನಗಳ ಬಗ್ಗೆ ಬಹುತೇಕರಿಗೆ ತಿಳಿದಿರಲು ಸಾಧ್ಯವಿಲ್ಲ.
ಅದರ ಸೇವನೆಯಿಂದಾಗುವ ಪ್ರಯೋಜನ, ಕುರಿತು ತಿಳಿದಲ್ಲಿ, ಎಲ್ಲರೂ ಇಷ್ಟುಪಟ್ಟು ತಿನ್ನುವಂತಾಗಲಿದೆ. ಹಸಿ ಬಾಳೆಕಾಯಿಯನ್ನು ನೇರವಾಗಿ ತಿನ್ನಲಿಕ್ಕಾಗಲ್ಲ. ಆದರೆ ಅದರಿಂದ ತಯಾರಿಸುವ ಪದಾರ್ಥಗಳು ದೇಹದ ಆರೋಗ್ಯ ಸುಧಾರಣೆಯಲ್ಲಿ ಮಹತ್ವದ ಪಾತ್ರವಹಿಸಲಿವೆ.
ಬಾಳೆಕಾಯಿಯನ್ನು ಬೇಯಿಸಿ, ಪಲ್ಯ ತಯಾರಿಸುವರಿದ್ದಾರೆ. ಬಾಳೆಕಾಯಿ ಬಜ್ಜಿ ತಯಾರಿಕೆ ಬಗ್ಗೆ ಹೇಳಬೇಕಾಗಿಲ್ಲ. ಬಾಳೆಕಾಯಿ ಬಜ್ಜಿ ತಿನ್ನದಿರುವವರ ಸಂಖ್ಯೆ ಕಡಿಮೆಯೆಂದೇ ಹೇಳಬಹುದು.
ಬಾಳೆಕಾಯಿ ಚಿಪ್ಸ್, ಬಾಳೆಕಾಯಿ ಗೊಜ್ಜು, ಸಾಂಬಾರು ಮಾಡಿ ಸೇವಿಸುವವರೂ ಇದ್ದಾರೆ. ಇನ್ನು ಬಾಳೆಕಾಯಿ ತುಂಡು ಮಾಡಿ, ಉಪ್ಪು, ಖಾರ ಹಾಕಿ ಫ್ರೈ ಮಾಡಿ ತಿನ್ನುವವರ ಸಂಖ್ಯೆಯೂ ಹೆಚ್ಚಾಗಿದೆ.
ಮಧುಮೇಹಿಗಳು ಈ ರೀತಿಯ ಪದಾರ್ಥಗಳ ಸೇವನೆಯಿಂದ, ರೋಗ ನಿಯಂತ್ರಣ ಸಾಧ್ಯ ಎಂಬ ಮಾತು ಪ್ರಚಲಿತದಲ್ಲಿದೆ. ಜತೆಗೆ, ಜೀರ್ಣಕ್ರಿಯೆಗೆ ಸಹಕಾರಿ, ದೈಹಿಕ ತೂಕ ಇಳಿಸಲೂ ನೆರವಾಗುತ್ತದೆ.
ಬಾಳೆಕಾಯಿ ಪಲ್ಯ ಮಾಡಿ ತಿನ್ನಬಹುದಾಗಿದೆ. ಇದರಲ್ಲಿರುವ ಪಿಷ್ಠ ಮತ್ತು ಆಂಟಿ ಆಕ್ಸಿಡೆಂಟ್ ಗುಣಗಳು ದೈಹಿಕ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಪಿಷ್ಠ ಹೀರಿಕೊಳ್ಳುವಂತಹ ನೀರಿನಾಂಶಂದಂತೆ ಕೆಲಸ ಮಾಡುತ್ತದೆ ಮಾತ್ರವಲ್ಲ, ಜೀರ್ಣಾಂಗ ವ್ಯವಸ್ಥೆಯಲ್ಲಿ ಸೇರಿ, ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ.
ಜೀರ್ಣಕ್ರಿಯೆ ವ್ಯವಸ್ಥೆ ಸುಧಾರಿಸುವಲ್ಲಿ ಬಾಳೆಕಾಯಿ ಸಹಕಾರಿಯಾಗಿದೆ. ಫೈಬರ್ ಒಳಗೊಂಡಿರುವ ಇದು, ಜೀರ್ಣಕ್ರಿಯೆ ಸುಧಾರಿಸಿ ಕರುಳಿನ ಚಲನೆಯನ್ನು ಸುಲಭಗೊಳಿಸುತ್ತದೆ.
ರಕ್ತ ಶುದ್ಧೀಕರಣ ಕ್ರಿಯೆಯಲ್ಲಿ ಸಹಕಾರಿಯಾಗಲಿದೆ. ಬಾಳೆಕಾಯಿಯಲ್ಲಿ ಪೊಟಾಶಿಯಂ ಅಧಿಕವಾಗಿದ್ದು, ನರಗಳ ಕಾರ್ಯಕ್ರಮತೆ ವೃದ್ಧಿಸಲಿದೆ. ಬೇಯಿಸಿದ ಬಾಳೆಕಾಯಿಯಲ್ಲಿ 531 ಎಂಜಿ ಯಷ್ಟು ಪೊಟಾಶಿಯಂ ಒಳಗೊಂಡಿರುತ್ತದೆ.
ಬಾಳೆಕಾಯಿಯಲ್ಲಿರುವ ಫೈಬರ್ ಅಂಶದಿಂದ ಹೊಟ್ಟೆ ಬೇಗನೆ ತುಂಬಿದಂತಾಗುತ್ತದೆ. ಇದರಿಂದ ಹಸಿವಾಗುವುದನ್ನು ತಡೆಯುತ್ತದೆ. ಇದರಿಂದ ದೇಹದ ತೂಕ ಇಳಿಸಲು ಸಹಕಾರಿಯಾಗುತ್ತದೆ.
ಮಧಮೇಹಿಗಳಿಗೂ ಒಂದು ರೀತಿಯಲ್ಲಿ ಇದು ಉಪಯುಕ್ತವಾಗಿದೆ. ಎರಡನೇ ಪ್ರಕಾರದ ಮಧುಮೇಹವನ್ನು ನಿಯಂತ್ರಿಸುವಲ್ಲಿ ಹಸಿರು ಬಾಳೆಕಾಯಿ ಅತ್ಯುತ್ತಮವಾಗಿ ಕೆಲಸ ಮಾಡಲಿದೆ.
ಇದರಲ್ಲಿ ಕಡಿಮೆ ಪ್ರಮಾಣದಲ್ಲಿ ಸಕ್ಕರೆ ಅಂಶವಿದ್ದು, ಮಧುಮೇಹಿಗಳು ಸೇರಿಸಬಹುದು.
ಅಧಿಕ ಪ್ರಮಾಣದಲ್ಲಿ ನ್ಯೂಟ್ರೀನ್ ಅಂಶಗಳು ಬಾಳೆಕಾಯಿಯಲ್ಲಿದ್ದು, ಡಯೇರಿಯಾವನ್ನು ನಿಯಂತ್ರಣದಲ್ಲಿಡುತ್ತದೆ. ಡಯೇರಿಯಾದ ರೋಗ ಲಕ್ಷಣಗಳಾದ ತಲೆನೋವು, ವಾಕರಿಕೆ ಮತ್ತು ಸುಸ್ತನ್ನು ದೂರ ಮಾಡುತ್ತದೆ.
ಹಸಿರು ಬಾಳೆಕಾಯಿಯಲ್ಲಿ ವಿಟಮಿನ್ `ಬಿ 6` ಮತ್ತು `ಸಿ` ಅಂಶಗಳು ಹೇರಳವಾಗಿವೆ. ವಿಟಮಿನ್ `ಬಿ 6` ಹಿಮೋಗ್ಲೋಬಿನ್ ಉತ್ಪಾದನೆ ಮಾಡುತ್ತದೆ ಅಲ್ಲದೆ ರಕ್ತದಲ್ಲಿರುವ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ.
ಕರುಳಿನ ಆರೋಗ್ಯ ಸುಧಾರಣೆಯಲ್ಲಿ ಹಸಿ ಬಾಳೆಕಾಯಿ ಎತ್ತಿದ ಕೈ ಕರುಳಿನಲ್ಲಿರುವ ಬ್ಯಾಕ್ಟೀರಿಯಾಗಳ ನಾಶಕ್ಕೆ ಇದು ಸಹಕಾರಿ.

Leave a Comment