ಬಾಳೆಹಣ್ಣು ಸೇವನೆ ಆರೋಗ್ಯಕಾರಿ

ರಾತ್ರಿ ವೇಳೆ ಊಟವಾದ ಬಳಿಕ ಹಣ್ಣು ಅದರಲ್ಲೂ ಬಾಳೆಹಣ್ಣನ್ನು ಸೇವಿಸಬೇಕೇ, ಬೇಡವೇ ಎಂಬ ಜಿಜ್ಞಾಸೆ ಬಹಳ ಕಾಲದಿಂದ ಇದೆ.

ಕೆಲವರು ರಾತ್ರಿ ಊಟವಾದ ಬಳಿಕ ಬಾಳೆಹಣ್ಣು ಸೇವಿಸಬಾರದು ಎಂದರೆ ಕೆಲವರು ಬಾಳೆಹಣ್ಣು ತಿನ್ನುವುದು ಒಳ್ಳೆಯದು ಎಂದು ಹೇಳುತ್ತಾರೆ. ಈ ಗೊಂದಲಗಳಿಗೆ ಈಗ ಪರಿಹಾರ ಸಿಕ್ಕಿದ್ದು, ರಾತ್ರಿ ವೇಳೆ ಬಾಳೆಹಣ್ಣು ಸೇವನೆ ಒಳ್ಳೆಯದು ಎಂದೇ ಹೇಳಲಾಗಿದೆ.

ಆದರೆ ಸೀತ, ನೆಗಡಿ, ಕೆಮ್ಮು ಇರುವವರು ರಾತ್ರಿ ವೇಳೆ ಬಾಳೆಹಣ್ಣು ತಿನ್ನಬಾರದು ಎಂಬುದು ಆಹಾರ ತಜ್ಞರ ಎಚ್ಚರಿಕೆಯ ನುಡಿ.

ರಾತ್ರಿ ವೇಳೆ ಬಾಳೆಹಣ್ಣು ತಿಂದರೆ ಕೆಟ್ಟದ್ದು ಎಂದು ಯೋಚನೆ ಮಾಡದೆ ಮೊದಲಿನಿಂದಲೂ ಬಾಳೆಹಣ್ಣನ್ನು ಊಟವಾದ ಮೇಲೆ ಸೇವಿಸುತ್ತಾ ಬಂದಿದ್ದೇವೆ. ಆಯುರ್ವೇದದ ಪ್ರಕಾರ ರಾತ್ರಿ ವೇಳೆ ಬಾಳೆಹಣ್ಣು ತಿಂದರೆ ಕೆಮ್ಮು, ಶೀತ ಬರುವುದು ಎಂದು ಹೇಳಲಾಗುತ್ತದೆ. ಆದರೆ ಆಹಾರ ತಜ್ಞರು ಹೇಳುವ ಪ್ರಕಾರ ಬಾಳೆಹಣ್ಣು ತುಂಬಾ ಆರೋಗ್ಯಕಾರಿ. ಇದು ದೇಹಕ್ಕೆ ಹೆಚ್ಚಿನ ಹೆಚ್ಚಿನ ಶಕ್ತಿ ನೀಡುತ್ತದೆ. ಹಾಗಾಗಿ ಕೆಮ್ಮು, ಶೀತ, ಅಸ್ತಮಾ ಅಥವಾ ಸೈನೈಸ್‌ನಿಂದ ಬಳಲುತ್ತಿರುವವರು ಬಾಳೆಹಣ್ಣು ಸೇವನೆ ಮಾಡಬಾರದು. ಉಳಿದಂತೆ ಯಾರು ಬೇಕಾದರೂ ರಾತ್ರಿ ಊಟವಾದ ಮೇಲೆ ಬಾಳೆಹಣ್ಣು ತಿನ್ನಬಹುದು ಎಂದು ಹೇಳುತ್ತಾರೆ.

ರಾತ್ರಿ ವೇಳೆ ಬಾಳೆಹಣ್ಣು ಸೇವನೆಯಿಂದ ಖಾರವಾದ ಆಹಾರ ತಿಂದಿರುವವರಿಗೆ ಎದೆ ಉರಿ ಕಡಿಮೆಯಾಗುವ ಜತೆಗೆ ಹೊಟ್ಟೆಯ ಅಲ್ಸರನ್ನು ಬಾಳೆಹಣ್ಣು ನಿಯಂತ್ರಿಸುತ್ತದೆ. ದಿನವಿಡೀ ಬಳಲಿರುವವರು ರಾತ್ರಿ ವೇಳೆ ನಿದ್ರೆಗೆ ಮೊದಲು ಒಂದು ಬಾಳೆಹಣ್ಣು ತಿಂದರೆ ಒಳ್ಳೆ ನಿದ್ದೆ ಬರುವುದಲ್ಲದೆ, ಬಾಳೆಹಣ್ಣಿನಲ್ಲಿರುವ ಪೊಟಾಷಿಯಂ ಅಂಶ ಸ್ನಾಯುಗಳಿಗೆ ಆರಾಮ ನೀಡುತ್ತದೆ.

ಬಾಳೆಹಣ್ಣಿನಲ್ಲಿ ಹೆಚ್ಚಿನ ಕ್ಯಾಲರಿ ಮತ್ತು ವಿಟಮಿನ್‌ಗಳು, ನಾರಿನ ಅಂಶ ಹೆಚ್ಚಿದೆ. ಇದು ರೋಗಗಳಿಗೂ ಮನೆ ಮದ್ದು. ಕೀಟಗಳು ಕಚ್ಚಿ ದದ್ದು, ಉರಿ ಉಂಟಾದಾಗ ಬಾಳೆಹಣ್ಣನ್ನು ಸವರುವುದರಿಂದ ಕೆಲವು ನಿಮಿಷಗಳಲ್ಲೇ ನೋವು ಶಮನವಾಗುತ್ತದೆ.

ಬಾಳೆಹಣ್ಣು ಟೈಪ್ ೨ ವಿಧದ  ಮಧುಮೇಹವನ್ನು ಕಡಿಮೆ ಮಾಡುತ್ತದೆ. ತೂಕ ಇಳಿಸಲು ಬಾಳೆಹಣ್ಣು ಒಳ್ಳೆಯ ಆಹಾರ.

ಬಾಳೆಹಣ್ಣಿನಲ್ಲಿರುವ ನಾರಿನ ಅಂಶಗಳು ಜೀರ್ಣಕ್ರಿಯೆಗೆ ನೆರವಾಗುತ್ತದೆ. ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಬಾಳೆಹಣ್ಣಿನಲ್ಲಿ ಬೇಕಾದಷ್ಟು ಪ್ರಮಾಣದ ಪೌಷ್ಠಿಕಾಂಶಗಳು ಇವೆ. ಹಾಗಾಗಿ ಯಾರು ಏನೇ ಹೇಳಲಿ, ರಾತ್ರಿ ವೇಳೆ ಬಾಳೆಹಣ್ಣನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು.

Leave a Comment