ಬಾಳೆಹಣ್ಣಿನ ಮಸಾಜ್‌ನಿಂದ ಸೌಂದರ್ಯ

ಬಾಳೆಹಣ್ಣಿನ ಸಿಪ್ಪೆಯ ಮೇಲಿನ ಭಾಗವನ್ನು ಮುಖ ಮತ್ತು ಕುತ್ತಿಗೆಗೆ ಉಜ್ಜಿ ಮಸಾಜ್ ಮಾಡಿ. ಅರ್ಧ ಗಂಟೆಯ ನಂತರ ಉಗುರು ಬಿಸಿ ನೀರಿನಿಂದ ಮುಖ ತೊಳೆಯಿರಿ. ಇದನ್ನು ರೆಗ್ಯುಲರ್ ಆಗಿ ಮಾಡೋದರಿಂದ ಸುಕ್ಕು ನಿವಾರಣೆಯಾಗುತ್ತದೆ.

ಇದರಲ್ಲಿ ಆಂಟಿ ಆಕ್ಸಿಡೆಂಟ್ಸ್ಗಳಿರುತ್ತವೆ, ಇವು ಮುಖದಲ್ಲಿರುವ ಕಲೆ, ಕೊಳೆಯನ್ನು ನಿವಾರಣೆ ಮಾಡುತ್ತದೆ. ಅಲ್ಲದೆ ಮುಖ ಹೊಳೆಯುವಂತೆ ಮಾಡುತ್ತದೆ. ಇದು ಆಂಟಿ ಏಜಿಂಗ್ ಕ್ರೀಮ್‌ಗಿಂತಲೂ ತುಂಬಾನೆ ಸ್ಟ್ರಾಂಗ್ ಆಗಿದೆ.

ಬಾಳೆಹಣ್ಣಿನ ಸಿಪ್ಪೆಯಿಂದ ಬಿಳಿಯ ಅಂಶವನ್ನು ತೆಗೆದು ಅದಕ್ಕೆ ಅಲೋವೆರಾ ಜೆಲ್ ಸೇರಿಸಿ ಕಣ್ಣಿನ ಸುತ್ತಲು ಹಚ್ಚಿ. ಇದರಿಂದ ಡಾರ್ಕ್ ಸರ್ಕಲ್ ನಿವಾರಣೆಯಾಗುತ್ತದೆ.

ಬಾಳೆಹಣ್ಣಿನ ಸಿಪ್ಪೆಯ ಒಂದು ತುಂಡನ್ನು ತೆಗೆದುಕೊಂಡು ಡ್ರೈ ಸ್ಕಿನ್ ಮೇಲೆ ಚೆನ್ನಾಗಿ ಮಸಾಜ್ ಮಾಡಿ. ೧೦ ನಿಮಿಷಗಳವರೆಗೆ ಇದನ್ನು ಮಾಡಿ. ನಂತರ ಉಗುರುಬಿಸಿ ನೀರಿನಲ್ಲಿ ಮುಖವನ್ನು ತೊಳೆಯಿರಿ. ಬಾಳೆಹಣ್ಣಿನ ಸಿಪ್ಪೆಯನ್ನು ಸ್ಕಿನ್ ಟ್ಯಾಗ್ ಮೇಲೆ ಹಚ್ಚಿದರೆ ಅದು ನಿವಾರಣೆಯಾಗುತ್ತದೆ.

 

Leave a Comment