ಬಾಲ್‍ಬ್ಯಾಡಮಿಂಟನ್ ಹೊಸದುರ್ಗ ಪ್ರಥಮ ದರ್ಜೆ ಕಾಲೇಜ್ ಪ್ರಥಮ

ಹಿರಿಯೂರು.ಅ.12-ಹಿರಿಯೂರಿನ ವೇದಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಇಲಾಖೆ ದಾವಣಗೆರೆ ವಿವಿ, ಹಿರಿಯೂರು ವೇದಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ದಾವಣಗೆರೆ ವಿಶ್ವ ವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ದಾವಣಗೆರೆ ವಿಶ್ವ ವಿದ್ಯಾನಿಲಯ ಅಂತರ್ ಕಾಲೇಜುಗಳ ಪುರುಷರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಹೊಸದುರ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡ ಪ್ರಥಮ ಸ್ಥಾನ ಪಡೆಯಿತು, ದಾವಣಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ತಂಡ ದ್ವಿತೀಯ ಸ್ಥಾನ ಪಡೆಯಿತು, ವಿಜೇತ ತಂಡಗಳಿಗೆ ನಗರಸಭೆ ಸದಸ್ಯರಾದ ರವಿಚಂದ್ರನಾಯ್ಕ್, ಹಾಗೂ ಪುರಷೋತ್ತಮ ಬಹುಮಾನ ವಿತರಿಸಿದರು, ಜಿಲ್ಲಾ ಸ್ಕೌಟ್ಸ್ ಗೈಡ್ಸ್ ಆಯುಕ್ತೆ ಶಶಿಕಲಾ ರವಿಶಂಕರ್, ದಾವಣಗೆರೆ ವಿಶ್ವ ವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕರಾದ ಎಂ.ಎಸ್.ರಾಜ್‍ಕುಮಾರ್, ಪ್ರಾಂಶುಪಾಲರಾದ ಪ್ರೊ.ಡಿ.ಚಂದ್ರಶೇಖರಪ್ಪ ದೈಹಿಕ ಶಿಕ್ಷಣ ನಿರ್ದೇಶಕರಾದ ಡಿ.ಆರ್.ಪ್ರಸನ್ನ ಕುಮಾರ್ ಹೆಚ್. ತಿಪ್ಪೇಸ್ವಾಮಿ, ಶಿವಶಂಕರ ಮಠದ್, ಕೆ.ಎಂ.ವೀರೇಂದ್ರ, ಹಾಗೂ ಮಹೇಶ್‍ನಾಯ್ಕ್, ಡಾ.ರವಿಚಂದ್ರನ್, ನಟರಾಜ್, ಹರೀಶ್, ಗಿರೀಶ್ ಮುಕ್ತಾಯ ಸಮಾರಂಭದಲ್ಲಿ ಉಪಸ್ಥಿರಿದ್ದರು, ಎರಡು ದಿನಗಳ ಕಾಲ ನಡೆದ ಈ ಪಂದ್ಯಾವಳಿಯಲ್ಲಿ ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯಿಂದ ಸುಮಾರು 300 ಕ್ಕು ಹೆಚ್ಚು ಕ್ರೀಡಾಪಟುಗಳು ಬಾಗವಹಿಸಿದ್ದರು. ಪ್ರಥಮ ಹಾಗೂ ತೃತೀಯ ಬಹುಮಾನವನ್ನು ನಗರಸಭೆ ಸದಸ್ಯರಾದ ಜಬೀವುಲ್ಲಾ ಹಾಗೂ ದ್ವಿತೀಯ ಬಹುಮಾನವನ್ನು ನಗರಸಭೆ ಸದ್ಯರಾದ ರವಿಚಂದ್ರನಾಯ್ಕ್ ಪ್ರಾಯೋಜಿಸಿದರು,

Leave a Comment