ಬಾಲ್ಯದಿಂದಲೇ ತೂಕದ ವಿರುದ್ಧ ಹೋರಾಡುತ್ತಿರುವೆ: ಅರ್ಜುನ್ ಕಪೂರ್

ಮುಂಬೈ, ಜೂನ್ 19 – ಬಾಲ್ಯದಿಂದಲೇ ತಾವೂ ಹೆಚ್ಚಿನ ತೂಕದ ಸಮಸ್ಯೆ ವಿರುದ್ಧ ಹೋರಾಡುತ್ತಿರುವುದಾಗಿ ಬಾಲಿವುಡ್ ನಟ ಅರ್ಜುನ್ ಕಪೂರ್ ಹೇಳಿಕೊಂಡಿದ್ದಾರೆ.
ಅರ್ಜುನ್ ಕಪೂರ್, ಇನ್ ಸ್ಟಾಗ್ರಾಮ್ ನಲ್ಲಿ ವರ್ಕ್ ಔಟ್ ಮಾಡುತ್ತಿರುವ ಫೋಟೋ ಒಂದನ್ನು ಶೇರ್ ಮಾಡಿ, ”ಚಿಕ್ಕಂದಿನಿಂದಲೇ ತೂಕ ಕಡಿಮೆ ಮಾಡಿಕೊಳ್ಳುವುದು ಕಠಿಣವಾಗಿತ್ತು. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಒಂದಿಲ್ಲೊಂದು ಸಂಘರ್ಷ ಮಾಡುತ್ತಲೇ ಇರುತ್ತಾರೆ. ಬೀಳು ಮತ್ತೆ ಎದ್ದೇಳು ಎಂಬುದು ಜೀವನದ ಒಂದು ತತ್ವ. ಕಠಿಣ ಪರಿಶ್ರಮದಿಂದ ಇಂದಲ್ಲ, ನಾಳೆ ಫಲ ಸಿಕ್ಕೆ ಸಿಗುತ್ತದೆ” ಎಂದು ಬರೆದುಕೊಂಡಿದ್ದಾರೆ.
ಸದ್ಯ ಅರ್ಜುನ್ ತಮ್ಮ ಮುಂಬರುವ ‘ಪಾಣಿಪತ್’ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಈ ಚಿತ್ರದಲ್ಲಿ ಅರ್ಜುನ್ ಹೊರತಾಗಿ ಸಂಜಯ್ ದತ್ ಹಾಗೂ ಕೃತಿ ಸನೂನ್ ಮುಖ್ಯ ಪಾತ್ರದಲ್ಲಿದ್ದಾರೆ. ಈ ಚಿತ್ರವು ಪಾಣಿಪತ್-3ನೇ ಯುದ್ಧದ ಕುರಿತಾಗಿದೆ. ಆಶುತೋಷ್ ಗೋವಾರಿಕರ್ ನಿರ್ದೇಶಿಸುತ್ತಿರುವ ಈ ಚಿತ್ರ ಡಿಸೆಂಬರ್ 6ರಂದು ಬಿಡುಗಡೆಗೊಳ್ಳಲಿದೆ.

Leave a Comment