ಬಾಲಿವುಡ್ ಹಿರಿಯ ನಟಿ ‘ನಿಮ್ಮಿ’ ನಿಧನ

ನವದೆಹಲಿ, ಮಾ 26 – ಬಾಲಿವುಡ್ ನ ಹಿರಿಯ ನಟಿ, 50 ರ ದಶಕದ ತಾರೆ ನಿಮ್ಮಿ ವಿ‍ಧಿವಶರಾಗಿದ್ದಾರೆ.
ದೀರ್ಘಕಾಲೀನ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಉಸಿರಾಟ ಸಮಸ್ಯೆಯಿಂದಾಗಿ ಜುಹು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಬುಧವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಮೂಲತಃ ನವಾಬ್ ಬನೂ ಹೆಸರಿನ ನಟಿಯನ್ನು ಖ್ಯಾತ ನಿರ್ಮಾಪಕ, ನಟ ರಾಜ್ ಕಪೂರ್ ‘ನಿಮ್ಮಿ’ ಹೆಸರಿನಲ್ಲಿ ‘ಬರ್ಸಾತ್’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪರಿಚಯಿಸಿದ್ದರು.
‘ಆನ್’, ‘ದೀದಾರ್’ ಸೇರಿದಂತೆ 1950 ರಿಂದ 1960ರ ನಡುವೆ ಅನೇಕ ಚಿತ್ರಗಳಲ್ಲಿ ನಿಮ್ಮಿ ನಟಿಸಿದ್ದರು. ಅಂದಿನ ಜನಪ್ರಿಯ ನಟರಾದ ರಾಜ್ ಕಪೂರ್, ದಿಲೀಪ್ ಕುಮಾರ್, ದೇವಾನಂದ್, ಅಶೋಕ್ ಕುಮಾರ್ ಅವರೊಡನೆ ‘ಉರಾನ್ ಖಟೋಲ’, ‘ಮೇರೆ ಮೆಹಬೂಬ್’, ‘ಲವ್ ಅಂಡ್ ಗಾಡ್’ ಮೊದಲಾದ ಚಿತ್ರಗಳಲ್ಲಿ ತೆರೆ ಹಂಚಿಕೊಂಡಿದ್ದರು.
ನಟಿ ನಿಮ್ಮಿ ನಿಧನಕ್ಕೆ ಹಿರಿಯ ನಟ ರಿಷಿ ಕಪೂರ್ ಮಹೇಶ್ ಭಟ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

Leave a Comment