ಬಾಲಿವುಡ್ ಪ್ರಮುಖ ಕೊರಿಯೋಗ್ರಾಫರ್ ಸರೋಜ್ ಖಾನ್ ಆಸ್ಪತ್ರೆಗೆ ದಾಖಲು

ಮುಂಬೈ, ಜೂನ್ 24-ಬಾಲಿವುಡ್ ಪ್ರಮುಖ ಕೊರಿಯಾಗ್ರಾಫರ್ ಸರೋಜ್ ಖಾನ್ ತೀವ್ರ ಅನಾರೋಗ್ಯದಿಂದ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದಾರೆ.
೭೧ ವರ್ಷದ ಸರೋಜ್ ಖಾನ್ ಶ್ವಾಸಕೋಶ ಸಮಸ್ಯೆಯಿಂದಾಗಿ ಬಾಂದ್ರಾದಲ್ಲಿರುವ ಗುರುನಾನಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶ್ವಾಸಕೋಶ ಸಂಬಂಧ ಸಮಸ್ಯೆಯಿಂದ ಬಳಲುತ್ತಿರುವ ಸರೋಜ್ ಖಾನ್ ಅವರಿಗೆ ವೈದ್ಯರು ಕೊರೊನಾ ಪರೀಕ್ಷೆ ನಡೆಸಿದ್ದು ನೆಗೆಟಿವ್ ವರದಿ ಬಂದಿದೆ. ವೈದ್ಯರ ಚಿಕಿತ್ಸೆಯ ನಂತರ ಸರೋಜ್ ಖಾನ್ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ಹೇಳಿದ್ದಾರೆ.
ಎರಡು, ಮೂರು ದಿನಗಳಲ್ಲಿ ಸರೋಜ್ ಖಾನ್ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ. ಸರೋಜ್ ಖಾನ್ ಕಳೆದ ನಾಲ್ಕು ದಶಕಗಳಿಂದ ೨೦೦೦ಕ್ಕೂ ಸಿನಿಮಾ ಹಾಡುಗಳಿಗೆ ಕೊರೊಯೋಗ್ರಫಿ ಮಾಡಿದ್ದಾರೆ. ದೇವದಾಸ್ ಸಿನಿಮಾದಲ್ಲಿನ “ದೋಲಾ ರೆ ದೋಲಾ” ತೇಜಾಬ್ ನಲ್ಲಿ ಮಾಧುರಿ ದೀಕ್ಷಿತ್ ನರ್ತಿಸಿದ’ ಏಕ್ ದೊ ತೀನ್’ ಜಬ್ ವಿ ಮೆಟ್ ಚಿತ್ರದಲ್ಲಿನ ‘ಯೆ ಇಷ್ಕ್ ಹೈ’ ಹಾಡಿಗೆ ಸರೋಜ್ ಖಾನ್ ಅವರ ನೀಡಿದ್ದ ಕೊರಿಯೋಗ್ರಫಿಗೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ

Share

Leave a Comment