ಬಾಲಿವುಡ್ ನಟಿ ಅಮೀಶಾಗೆ ಸಂಕಷ್ಟ

 

ಮುಂಬೈ, ಅ ೧೬-ಕಹೋನ ಪ್ಯಾರ್ ಹೇ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟು, ಸದ್ಯ ಬಿಗ್‌ಬಾಸ್‌ನಲ್ಲಿ ಸಕತ್ ಹಾಟ್ ಆಗಿ ಕಾಣಿಸಿಕೊಂಡಿರುವ ನಟಿ ಅಮೀಶಾ ಪಟೇಲ್‌ಗೆ ಚೆಕ್ ಬೌನ್ಸ್ ಆರೋಪದ ಮೇಲೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಪ್ರಕರಣದ ಸಂಬಂಧ ಬಾಲಿವುಡ್ ಬೆಡಗಿ ನಟಿ ಅಮೀಶಾ ಪಟೇಲ್ ವಿರುದ್ಧ ರಾಂಚಿ ಕೋರ್ಟ್ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ. ಚಿತ್ರ ನಿರ್ಮಾಣ ಮಾಡುವುದಾಗಿ ವರ್ಷದ ಹಿಂದೆ ನಿರ್ಮಾಪಕ ಅಜಯ್ ಕುಮಾರ್ ಸಿಂಗ್ ಎಂಬುವವರಿಂದ ಅಮೀಶಾ ಪಟೇಲ್ ಮತ್ತು ಕುನಾಲ್ ೨.೫೦ ಕೋಟಿ ರೂಪಾಯಿ ಪಡೆದಿದ್ದರು. ಚಿತ್ರ ಬಿಡುಗಡೆಗೊಳಿಸಿದ ನಂತರ ಹಣ ಹಿಂತಿರುಗಿಸುವುದಾಗಿ ಇಬ್ಬರು ಭರವಸೆ ನೀಡಿದ್ದರು.

ಆದರೀಗ ಚಿತ್ರ ಬಿಡುಗಡೆಯನ್ನು ಸಹ ಮಾಡಿಲ್ಲ. ಅಜಯ್ ಕುಮಾರ್ ಸಿಂಗ್‌ಗೆ ಅಮೀಶಾ ಪಟೇಲ್ ನೀಡಿದ್ದ ಮೂರು ಕೋಟಿ ರೂಪಾಯಿಯ ಚೆಕ್ ಬೌನ್ಸ್ ಆಗಿದ್ದು, ಕಾರಣ ಕೇಳಲು ಫೋನ್ ಮಾಡಿದರೆ, ಅಮೀಶಾ ಪಟೇಲ್ ಕರೆಯನ್ನು ಸ್ವೀಕರಿಸದೇ ವಂಚನೆ ಮಾಡಿದ್ದಾರೆ.

ಹೀಗಾಗಿ ಆಕೆ ವಿರುದ್ಧ ಅಜಯ್ ಕುಮಾರ್ ಸಿಂಗ್ ರಾಂಚಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಸದ್ಯ ಅಮೀಶಾ ಪಟೇಲ್ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ ಆಗಿದ್ದು, ಅಮೀಶಾರನ್ನು ಬಂಧಿಸಲು ರಾಂಚಿ ಪೊಲೀಸರು ಮುಂಬೈಗೆ ಹೊರಡಲಿದ್ದಾರೆ. ಸದ್ಯ ಬಿಗ್‌ಬಾಸ್ ನಲ್ಲಿ ಅಮೀಶಾ ಪಟೇಲ್ ಬುಸ್ಯಿಯಾಗಿದ್ದು, ಅಲ್ಲಿಯೂ ಅತಿಹೆಚ್ಚು ಗ್ಲಾಮಾರ್ ಆಗಿ ಕಾಣಿಸಿಕೊಂಡಿದ್ದಕ್ಕೆ ನೆಟ್ಟಿಗರು ಗರಂ ಆಗಿದ್ದರು.

Leave a Comment