ಬಾಲಿವುಡ್ ಗೆ  ರಷ್ಮಿಕಾ ಮಂದಣ್ಣ…!

ಚೆನ್ನೈ, ಸೆ 4- ಚಂದನ ವನದ  ಮೂಲಕ  ಸಿನಿಮಾ ರಂಗ ಪ್ರವೇಶಿಸಿದ್ದ   ನಟಿ   ರಶ್ಮಿಕಾ ಮಂದಣ್ಣ,  ಈಗ ದಕ್ಷಿಣ ಭಾರತ ಸಿನಿಮಾ ರಂಗದಲ್ಲಿ  ಅಗ್ರ ನಾಯಕಿ ಸ್ಥಾನಕ್ಕೇರಿದ್ದಾರೆ.

ಸದ್ಯ  ತೆಲುಗಿನ ಸೂಪರ್‌ಸ್ಟಾರ್‌ ಮಹೇಶ್‌ಬಾಬು ಅವರ  “ ಸರಿಲೇರು ನಿಕೇವರು”  ಚಿತ್ರದಲ್ಲಿ  ನಟಿಸುತ್ತಿರುವ  ಈ  ಸುಂದರಿ   ತಮಿಳಿನಲ್ಲೂ ವಿಜಯ್  ಜೊತೆ ನಟಿಸಲಿದ್ದಾರೆ ಎಂಬ  ಸುದ್ದಿಗಳು ಹಬ್ಬಿವೆ.

ರಷ್ಮಿಕಾ  ಮಂದಣ್ಣ  ಕುರಿತು ಮತ್ತೊಂದು ಕುತೂಹಲಕಾರಿ  ಸುದ್ದಿ  ಮಾಧ್ಯಮಗಳಲ್ಲಿ ಕೇಳಿಬರುತ್ತಿದೆ. ಬಾಲಿವುಡ್ ನಿಂದಲೂ    ರಷ್ಮಿಕಾಗೆ  ಅವಕಾಶ  ಬಂದಿದೆ   ಎಂಬ ಬಗ್ಗೆ  ಭಾರಿ  ಚರ್ಚೆ  ನಡೆಯುತ್ತಿದೆ.

ತೆಲುಗಿನ  ಯಶಸ್ವಿ “ಜರ್ಸಿ”  ಚಿತ್ರ  ಬಾಲಿವುಡ್‌ನಲ್ಲಿ ರಿಮೇಕ್  ಆಗುತ್ತಿದೆ  ಎಂದು ವರದಿಯಾಗಿದ್ದು, ನಿರ್ದೇಶಕ ಕರಣ್ ಜೋಹರ್  ಬಾಲಿವುಡ್ ನಲ್ಲಿ  ಈ ಚಿತ್ರವನ್ನು ತೆರೆಯಮೇಲೆ ತರುವ   ಸಿದ್ದತೆಯಲ್ಲಿದ್ದಾರೆ. ರಶ್ಮಿಕಾ ಅವರನ್ನು ಚಿತ್ರದ ನಾಯಕಿಯನ್ನಾಗಿಸಲು ಯೋಜಿಸುತ್ತಿದ್ದಾರಂತೆ.  ತೆಲುಗಿನಲ್ಲಿ ಶ್ರದ್ಧಾ ಶ್ರೀನಾಥ್   ನಟಿಸಿದ್ದ ಪಾತ್ರದಲ್ಲಿ,  ರಶ್ಮಿಕಾ  ಹಿಂದಿ ಚಿತ್ರದಲ್ಲಿ  ಕಾಣಿಸಿಕೊಳ್ಳಲಿದ್ದಾರಂತೆ,  ಯೋಜನೆಯ ಪೂರ್ಣ ವಿವರಗಳು ಇನ್ನೂ ಲಭ್ಯವಾಗಬೇಕಿದೆ.

Leave a Comment