ಬಾಲಿವುಡ್‌ನ ಮಿಷನ್ ಮಂಗಳ್ ಟ್ರೈಲರ್‌ನಲ್ಲಿ ದತ್ತಣ್ಣ ಮಿಂಚು ರಹಸ್ಯ ಬಿಚ್ಚಿಟ್ಟ ನಟ

ಮುಂಬೈ, ಜು ೧೯- ಕನ್ನಡದ ಹಿರಿಯ ರಂಗಭೂಮಿ ಕಲಾವಿದ ದತ್ತಣ್ಣ ಅವರು ‘ಮಿಷನ್ ಮಂಗಳ್’ ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ಛಾಪು ಮೂಡಿಸಲು ಸಿದ್ದರಾಗಿದ್ದಾರೆ. ಇದರ ಮಧ್ಯೆ ದತ್ತಣ್ಣ ಅವರ ನಟನೆ ಬಗ್ಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಹೊಗಳಿ ಕೊಂಡಾಡಿದ್ದಾರೆ.  ಆದರೆ ಇದುವರೆಗೂ ರಹಸ್ಯವಾಗಿದ್ದ ದತ್ತಣ್ಣ ಅವರ ಜೀವನ ರಹಸ್ಯವೊಂದು ಈ ಚಿತ್ರದ ಮೂಲಕ ಬಹಿರಂಗವಾಗಿದೆ.

ಚಿತ್ರರಂಗಕ್ಕೆ ಕಾಲಿಟ್ಟು ೪೫ ವರ್ಷ ಕಳೆದಿರುವ  ಹಿರಿಯ ಕಲಾವಿದ ದತ್ತಣ್ಣ ಅವರು ಇದುವರೆಗೂ ಕನ್ನಡದ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಇದೀಗ ಮಿಷನ್ ಮಂಗಳ್‌ನಲ್ಲಿ ಅಭಿನಯಿಸಿ ಅವರು ಬಾಲಿವುಡ್‌ಗೂ ಕಾಲಿಟ್ಟಿದ್ದಾರೆ. ಈ ಚಿತ್ರದ ಟ್ರೈಲರ್ ಬಿಡುಗಡೆ ಆಗಿದ್ದು, ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ದತ್ತಣ್ಣ ಮೊದಲು ಏನು ಕೆಲಸ ಮಾಡುತ್ತಿದ್ದೆ ಎಂಬ ಬಗ್ಗೆ ಹೇಳಿಕೊಂಡು ನೆರೆದವರು ಗಮನ ಸೆಳೆದರು.

ದತ್ತಣ್ಣ ಈ ಮೊದಲು ವಾಯುಪಡೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರಂತೆ. ನಾನು ರಂಗಭೂಮಿ ಹಿನ್ನೆಲೆಯಿಂದ ಬಂದವನು. ವಾಯುಪಡೆಯಲ್ಲಿ ೨೩ ವರ್ಷ ಹಾಗೂ ಎಚ್‌ಎಎಲ್‌ನಲ್ಲಿ ೯  ವರ್ಷ ಕಾರ್ಯನಿರ್ವಹಿಸಿದ್ದೆ. ಹಾಗಾಗಿ ಚಿತ್ರರಂಗಕ್ಕೆ ಬರುವುದು ತಡವಾಯಿತು.  ಏರ್‌ಫೋರ್ಸ್‌ನಲ್ಲಿರುವಾಗ ಉಪಗ್ರಹವನ್ನು ನಾನು ಮುಟ್ಟಿದ್ದೆ. ನನ್ನ ಅನೇಕ ಗೆಳೆಯರು ಇಸ್ರೋದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ದತ್ತಣ್ಣ ರಹಸ್ಯ ಬಿಚ್ಚಿಟ್ಟಿದ್ದಾರೆ.

 ಇನ್ನು ನನ್ನ ಮಗಳು ಹಾಗೂ ಅವಳ ವಯಸ್ಸಿನ ಮಕ್ಕಳಿಗಾಗಿ ನಾನು ಈ ಸಿನಿಮಾ ಮಾಡಿದ್ದೇನೆ. ಎಂದು ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.  ಜಗನ್ ಶಕ್ತಿ ನಿರ್ದೇಶನದ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್, ದತ್ತಣ್ಣ ವಿದ್ಯಾ ಬಾಲನ್, ಸೋನಾಕ್ಷಿ ಸಿನ್ಹಾ, ತಾಪ್ಸೀ ಪನ್ನು, ನಿತ್ಯಾ ಮೆನನ್ ಮೊದಲಾದವರು ಬಣ್ಣ ಹಚ್ಚಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆ.೧೫ರಂದು ಸಿನಿಮಾ ತೆರೆಗೆ ಬರುತ್ತಿದೆ

Leave a Comment