ಬಾಲಿವುಡ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿರುವ ’ವಾರ್’ ಟೀಸರ್

 

ಅಭಿಮಾನಿಗಳು ಫುಲ್ ಖುಷ್
ಬಾಲಿವುಡ್ ಚಿತ್ರರಂಗದಲ್ಲಿ ’ವಾರ್’ ಚಲನಚಿತ್ರ ಸಖತ್ ಸೌಂಡ್ ಮಾಡುತ್ತಿದೆ. ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಬಾಲಿವುಡ್‌ನ ಇಬ್ಬರು ಸೂಪರ್ ಸ್ಟಾರ್ ನಟರಾದ ಹೃತಿಕ್ ರೋಷನ್ ಹಾಗೂ ಟೈಗರ್ ಶ್ರಾಫ್ ನಟಿಸಿದ್ದಾರೆ. ಇವರಿಬ್ಬರ ನಡುವೆ ನಡೆಯುವ ಕಾಳಗ ಥ್ರಿಲ್ ಆಗಿದೆ. ಈ ಅಭಿಮಾನಿಗಳಿಗೋಸ್ಕರ ವಾರ್ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ.
ಯಶ್ ರಾಜ್ ಫಿಲ್ಮ್ ಈ ವಾರ್ ಚಿತ್ರವನ್ನು ನಿರ್ಮಿಸುತ್ತಿದ್ದು ಈ ಚಿತ್ರದ ಟ್ರೈಲರ್ ರಿಲೀಸ್ ಮಾಡಿದೆ. ಎರಡು ನಿಮಿಷ ೨೫ ಸೆಕೆಂಡ್ ಗಳಿರುವ ಈ ಟ್ರೈಲರ್ ನಲ್ಲಿ ಅದ್ಭುತವಾದ ಬೈಕ್ ಮತ್ತು ಕಾರ್ ರೇಸಿಂಗ್, ಸ್ಟಂಟ್ ಹೆಲಿಕಾಪ್ಟರ್ ಮೂಲಕ ನಡೆಸುವ ಬಾಂಬ್ ದಾಳಿ ನಿಜಕ್ಕೂ ಮೈನವಿರೇಳಿಸುತ್ತದೆ. ಇದರ ಜತೆಗೆ ಚಿತ್ರೀಕರಣದ ಲೋಕೇಷನ್‌ಗಳು ಸೊಗಸಾಗಿವೆ. ಟ್ರೈಲರ್ ಇಷ್ಟೊಂದು ರೋಚಕವಾಗಿದೆ ಅಂದ್ರೆ ಫಿಲಂ ಹೇಗಿರಬಹುದು ಎಂಬ ಬಗ್ಗೆ ಅಪಾರ ಕುತೂಹಲ ಕೆರಳಿಸಿರುವುದಂತೂ ಸುಳ್ಳಲ್ಲ.
ಏಳು ದೇಶಗಳು ಮತ್ತು ವಿಶ್ವದ ೧೫ ನಗರಗಳಲ್ಲಿ ಶೂಟಿಂಗ್ ಮಾಡಲಾಗಿದೆ. ಹಿಂದಿ ಚಿತ್ರರಂಗದಲ್ಲಿ ಬಹು ಬೇಡಿಕೆಯ ಹೀರೊಗಳು ಪರಸ್ಪರ ಭೂಮಿ, ಸಮುದ್ರ ಮತ್ತು ವಾಯುವಿನಲ್ಲಿ ನಡೆಸುವ ಹೋರಾಟ ಸಾಕಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಿದೆ. ನಾಲ್ವರು ದೊಡ್ಡ ಸಾಹಸ ನಿರ್ದೇಶಕರು ಹಿಂದೆಂದೂ ಊಹಿಸದ ರೀತಿಯಲ್ಲಿ ಸಾಹಸ ದೃಶ್ಯಗಳನ್ನು ತರೆಯ ಮೇಲೆ ತರಲು ಸಾಕಷ್ಟು ಪ್ರಯಾಸಪಟ್ಟಿದ್ದಾರೆ. ಇದರ ಜತೆಗೆ ಸಿದ್ದಾರ್ಥ್ ಆನಂದ್ ’ವಾರ್’ ಚಿತ್ರವನ್ನು ಅತಿ ದೊಡ್ಡ ಆಕ್ಷ್ಯನ್ ಚಿತ್ರವನ್ನಾಗಿಸಲು ಅಪಾರ ಶ್ರಮಪಟ್ಟಿದ್ದಾರಂತೆ.
ಅಂದಹಾಗೆ ಹೃತಿಕ್ ಮತ್ತು ಟೈಗರ್ ಅಪಾಯಕಾರಿ ಬೈಕ್ ಕ್ರಾಶ್ ಅತ್ಯಂತ ರೋಚಕವಾಗಿದೆ.ಸಾವನ್ನೇ ಧಿಕ್ಕರಿಸುವ ಸ್ಟಂಟ್ ಗಳನ್ನು ಮಾಡಿದ್ದಾರೆ. ಜೀವದ ಹಂಗು ತೊರೆದು ಬೈಕ್ ಚೇಸ್ ದೃಶ್ಯದಲ್ಲಿ ಪರಸ್ಪರ ಗಾಜಿನ ಕಿಟಕಿಯನ್ನು ಒಡೆದು ನುಗ್ಗುವ ದೃಶ್ಯವಿದೆ.
ಇದೊಂದು ಹೈ ಸ್ಪೀಡ್ ಬೈಕ್ ದೃಶ್ಯವಾಗಿದ್ದ್ದು ಹೃತಿಕ್ ಸೂಪರ್ ಬೈಕ್ ಚಲಾಯಿಸುತ್ತಿದ್ದರೆ ಟೈಗರ್ ಬರಿಗಾಲಿನಲ್ಲಿ ಬೆನ್ನುಹತ್ತುವ ದೃಶ್ಯವಿದೆ. ಒಂದು ವೇಳೆ ಎಚ್ಚರ ತಪ್ಪಿದ್ದರೂ ಗಂಭೀರವಾಗಿ ಗಾಯಗೊಳ್ಳುವ ಪ್ರಸಂಗ ಎದುರಾಗಿತ್ತು ಎನ್ನುತ್ತಾರೆ ನಿರ್ದೇಶಕ ಸಿದ್ದಾರ್ಥ್ ಆನಂದ್.
ಈ ಚಿತ್ರದಲ್ಲಿ ಸಾಹಸಮಯ ದೃಶ್ಯಗಳಲ್ಲಿ ಅಭಿನಯಿಸಲು ಇಬ್ನರು ಸೂಪರ್ ಸ್ಟಾರ್ ಗಳು ಸಾಕಷ್ಟು ರಿಸ್ಕ್ ತೆಗೆದುಕೊಂಡಿದ್ದಾರೆ. ಆದ್ದರಿಂದ ಈ ಇಬ್ಬರು ನಟರನ್ನು ಪ್ರೇಕ್ಷಕರು ಅತ್ಯಂತ ಹೆಚ್ಚಾಗಿ ಪ್ರೀತಿಸುತ್ತಾರಂತೆ. ಇದಕ್ಕಾಗಿ ನಿರ್ದೇಶಕರು ಈ ಇಬ್ಬರು ಸೂಪರ್ ಸ್ಟಾರ್ ನಟರಿಗೆ ಅಭಾರಿಯಾಗಿದ್ದಾರಂತೆ.
ಬಾಲಿವುಡ್ ನಲ್ಲಿ ವಾರ್ ಚಿತ್ರ ಅಪಾರ ನಿರೀಕ್ಷೆ, ಕುತೂಹಲ ಹುಟ್ಟುಹಾಕಿದೆ. ಈ ಮಹೋನ್ನತ ಆಕ್ಷನ್ ಚಿತ್ರದಲ್ಲಿ ಹೃತಿಕ್ ರೋಷನ್ ಜೋಡಿಯಾಗಿ ವಾಣಿ ಕಪೂರ್ ಅಭಿನಯಿಸಿದ್ದಾರೆ. ಹಿಂದು, ತಮಿಳು ಹಾಗೂ ತೆಲುಗು ಭಾಷೆಗಳಲಿ ಬಿಡುಗಡೆಯಾಗಲಿದೆ. ಈ ಬಹು ನಿರೀಕ್ಷಿತ ಚಿತ್ರ ಅಕ್ಟೋಬರ್ ೨ರಂದು ಬೆಳ್ಳಿತೆರೆಗೆ ಅಪ್ಪಳಿಸಲು ಅಣಿಯಾಗುತ್ತಿದೆ. ಅಭಿಮಾನಿಗಳು ಅಲ್ಲಿಯವರೆಗೂ ಕಾಯಲೇಬೇಕು.

Leave a Comment