ಬಾಲಿವುಡ್‌ಗೆ ಸೃಷ್ಠಿ ಅಜಯ ದೇವಗನ್ ಜೊತೆ ನಟನೆ

ಅವಕಾಶ ಹೇಗೆ ಯಾರಿಗೆ ಸಿಗುತ್ತದೆ ಎನ್ನುವುದು ಕುತೂಹಲಕಾರಿ ಸಂಗತಿ.ಬೆಂಗಳೂರಿನ ಪುಟ್ಟ ಬಾಲಕು ಸೃಷ್ಠಿ, ಬಾಲಿವುಡ್ ನಟ ಅಜಯ್ ದೇವಗನ್ ಅವರ ಮುಂಬರುವ ಚಿತ್ರದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನದ ಅಂಗವಾಗಿ ನಡೆದ ಅಗರ್ ಬತ್ತಿ ಕಂಪನಿ ನಡೆಸಿದ ಅಭಿಯಾನದ ಜಾಹೀರಾತಿನಲ್ಲಿ ನಟಿಸಿದ್ದ ವಿಬ್‌ಗಯಾರ್ ಶಾಲೆಗ ಐದನೇ ತರಗತಿಯ ಬಾಲಕಿ ಸೃಷ್ಠಿಯ ಅಭಿನಯ ಕಂಡು ನಿರ್ದೇಶಕ ವಿಕೆಸಿ ಡಾನ ತಮ್ಮ ಮುಂದಿನ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ.

inakunota-3-12-photo-ajay-devaganಅತೀ ಚಿಕ್ಕ ವಯಸ್ಸಿನಲ್ಲೇ ಸೃಷ್ಠಿ, ನಟನೆಯ ಆಸಕ್ತಿಯನ್ನು ಹೊಂದಿದ್ದಳು. ನಿರಂತರ ಪರಿಶ್ರ ಮದಿಂದ ಬಾಲಿವುಡ್‌ಗೆ ಎಂಟ್ರಿ ಪಡೆದಿದ್ದಾಳೆ.ಬಾಲಿವುಡ್ ನಟ ಅಜಯ್ ದೇವಗನ್ ಜೊತೆಗೆ ನಟಿಸಲು ಅವಕಾಶ ಸಿಕ್ಕಿರುವುದು ಹೆಮ್ಮೆಯ ಸಂಗತಿಯಾಗಿದೆ.

ಸೃಷ್ಠಿ ಪ್ರತಿಭಾವಂತ ಹುಡುಗಿಯಾ ಗಿದ್ದು, ಈಗಾಗಲೇ ಚಲನಚಿತ್ರ ಮತ್ತು ದೂರದರ್ಶನ ಜಗತ್ತಿನಲ್ಲಿ ತನ್ನದೇ ಛಾಪನ್ನು ಮೂಡಿಸಿದ್ದಾಳೆ. ಅವಳ ಸಾಧನೆ ಕಂಡು ಬೇರಾಗಿದ್ದೇನೆ ಎಂದು ವಿಬ್ ಗಯಾರ್‌ನ ಪ್ರಿನ್ಸಿಪಾಲ್ ಸೀಮಾ ನಾಯರ್ ಸಂತಸ ವ್ಯಕ್ತಪಡಿಸಿದ್ದಾರೆ.

ಅಜಯ್ ದೇವಗನ್ ಅವರೊಂದಿಗೆ ನಟಿಸುವ ಅವಕಾಶ ಸಿಗುತ್ತದೆ ಎಂದು ಕನಸಿನಲ್ಲಿಯೂ ಭಾವಿಸಿರಲಿಲ್ಲ. ಆದ್ದರಿಂದ ಚಿತ್ರ ತಂಡನನ್ನನ್ನು ಕರೆದಾಗ, ಸಂಪೂರ್ಣವಾಗಿ ಕಳೆದು ಹೋಗಿದ್ದೆ. ಬಾಲ್ಯದಿಂದಲೂ ನನ್ನನ್ನು ನಿರಂತರವಾಗಿ ಪ್ರೇರೆಪಿಸಿದ ತಂದೆತಾಯಿಗಳಿಗೆ ನಾನು ನನ್ನ ಈ ಯಶಸ್ಸನ್ನು ಸಲ್ಲಿಸುತ್ತೇನೆ ಎನ್ನುವುದು ಸೃಷ್ಠಿಯ ಮಾತು.

Leave a Comment