ಬಾಲಾಜಿ ಯುವಕ ಸಂಘದಿಂದ ಪಾಲಿಕೆ ಸಿಬ್ಬಂದಿಗೆ ಆಹಾರ ಧಾನ್ಯ ಕಿಟ್ ವಿತರಣೆ

ಬಳ್ಳಾರಿ, ಮೇ.23: ಇಲ್ಲಿನ ಪಟೇಲನಗರದ 19ನೇ ವಾರ್ಡಿನಲ್ಲಿನ ಬಾಲಾಜಿ ಯುವಕ ಸಂಘದಿಂದ ಕೊರೊನಾ ಸೋಂಕನ್ನು ಎದುರಿಸುವಲ್ಲಿ ಆಹಾರ ಧಾನ್ಯಗಳ ಕಿಟ್ ನ್ನು ವಿತರಿಸಿದರು.

ಸಂಘದ ಅಧ್ಯಕ್ಷ ಜಿ.ಎನ್.ರಾಜೇಶ್ ಅವರು ಅಕ್ಕಿ, ಬೇಳೆ, ಎಣ್ಣೆ, ಜೋಳ, ಗೋಧಿ, ಸಕ್ಕರೆ, ಉಪ್ಪಿಟ್ಟು ರವೆ, ತರಕಾರಿಗಳನ್ನು ಒಳಗೊಂಡ 2200 ಕಿಟ್ ಗಳನ್ನು ವಾರ್ಡಿನ ಬಡ ಜನತೆಗೆ, ಮತ್ತು ನಿನ್ನೆ ವಾರ್ಡಿನಲ್ಲಿ ಕಸ ವಿಲೇವಾರಿ, ತೆರೆದ ಚರಂಡಿ ಸ್ವಚ್ಛತೆ ಸೇರಿದಂತೆ ನೀರು ಸರಬರಾಜು, ಬೀದಿ ದೀಪ ದುರಸ್ತಿ ಮಾಡಿದವರಿಗೆ ಸನ್ಮಾನ ಮಾಡಿ ಆಹಾರ ಧಾನ್ಯದ ಕಿಟ್ ಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಜಿ.ಎನ್.ರಾಜೇಶ್ ಲಾಕ್ ಡೌನ್ ಸಮಯದಲ್ಲಿ ನಾವೆಲ್ಲಾ ಕೊರೊನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಮನೆಯಲ್ಲೇ ಇದ್ದರೆ ಸಾರ್ವಜನಿಕ ಸೌಲಭ್ಯಗಳನ್ನು ಒದಗಿಸಿದ ಪಾಲಿಕೆ ಸಿಬ್ಬಂದಿ ಹೊರಗಡೆ ಇದ್ದು ನಾಗರೀಕರ ಸೇವೆ ಮಾಡಿದೆ. ಅದಕ್ಕಾಗಿ ನಾವು ನಿಮಗೆಲ್ಲಾ ಋಣಿಯಾಗಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಜಿ.ಆನಂದ್, ಬಿಸಿಎಂ ಇಲಾಖೆಯ ಬಿ.ಬ್ರಹ್ಮಯ್ಯ, ವಿದ್ಯುತ್ ಇಲಾಖೆಯ ಕೃಷ್ಣಪ್ರಸಾದ್, ನೀಲಕಂಠರಾಜ್, ವೇಣು, ನರಸಪ್ಪ, ಚಂದ್ರ ರಮೇಶ್ ಮೊದಲಾದವರು ಭಾಗವಹಿಸಿದ್ದರು.

Leave a Comment