ಬಾಲಕಿ ಮೇಲೆ ಹಲ್ಲೆ

ಪಾವಗಡ, ಜ. ೩- ಬಾಲಕಿ ಮೇಲೆ ವ್ಯಕ್ತಿಯೊಬ್ಬರು ಹಲ್ಲೆ ನಡೆಸಿರುವ ಘಟನೆ ತಾಲ್ಲೂಕಿನ ಟಿ.ಎನ್.ಪೇಟೆ ಬಳಿ ನಡೆದಿದೆ.

ಶೇಖರ್ ಎಂಬಾತನೇ ಹಲ್ಲೆ ನಡೆಸಿರುವ ವ್ಯಕ್ತಿ. ಟಿ.ಎನ್.ಪೇಟೆಯ ಬಾಲಕಿ ಮೇಕೆಗಳಿಗಾಗಿ ಹುಣಸೆ ಸೊಪ್ಪು ಸಂಗ್ರಹಿಸುವಾಗ ಶೇಖರ್ ಎಂಬುವರು ಏಕಾಏಕಿ ಕಟ್ಟಿಗೆಯಿಂದ ಹಲ್ಲೆ ನಡೆಸಿದ್ದಾರೆ ಹಾಗೂ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಅಂಜಿನಪ್ಪ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಬಾಲಕಿಯನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದಲಿತ ಸಮುದಾಯಕ್ಕೆ ಸೇರಿದ ಬಾಲಕಿ ಮೇಲೆ ಹಲ್ಲೆ ನಡೆಸಿರುವುದನ್ನು ದಲಿತ ಮುಖಂಡರು ಖಂಡಿಸಿದ್ದಾರೆ.

ಈ ಸಂಬಂಧ ಪಾವಗಡ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Comment