ಬಾಲಕಿ ಡೆಂಗ್ಯೂ ಗೆ ಬಲಿ

ಮಂಗಳೂರು, ಎ.೧- ಮೀನಾದಿ ಶಾಲೆ ಯ ದೈಹಿಕ ಶಿಕ್ಷಕ ಟೈಟಸ್ ಎಂಬವರ ಮಗಳು ಸೆಬಾಸ್ಟಿಯನ್ ಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಸ್ಟೆನಿಟಾ(೧೫)
ಡೆಂಗೂ ಜ್ವರದಿಂದ ನಿಧನರಾಗಿದ್ದಾರೆ ಎನ್ನಲಾಗಿದೆ.
ಕಳೆದ ಕೆಲವು ದಿನಗಳಿಂದ ಜ್ವರಕ್ಕೆ ತುತ್ತಾಗಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲಸಮಯಗಳಿಂದ ಕಡಿಮೆಯಾಗಿದ್ದ ಡೆಂಗ್ಯೂ ಜ್ವರ ಭೀತಿ ಮತ್ತೆ ಆವರಿಸಿದ್ದು ಜನರ ಆತಂಕಕ್ಕೆ ಕಾರಣವಾಗಿದೆ.

Leave a Comment