ಬಾಲಕಿ ಅತ್ಯಾಚಾರ: ಮಗು ಮಾರಿ ಪರಿಹಾರ ನೀಡಲು ಆದೇಶ

ಪಾಟ್ನಾ, ನ.೧೩- ೧೫ರ ಹರೆಯದ ಅಪ್ರಾಪ್ತ ಬಾಲಕಿ ಮೇಲೆ ಇಬ್ಬರು ಅತ್ಯಾಚಾರ ಎಸಗಿದ ಪರಿಣಾಮ ಬಾಲಕಿ ಗರ್ಭಿಣಿಯಾಗಿದ್ದಾಳೆ. ಇದಕ್ಕೆ ಪರಿಹಾರ ಕೇಳಿದರೆ ಮಗುವನ್ನು ಮಾರಿ ಸಂತ್ರಸ್ತೆಗೆ ಪರಿಹಾರ ನೀಡಿ ಎಂದು ಅಲ್ಲಿನ ಸ್ಥಳೀಯ ಪಂಚಾಯಿತಿ ಆರೋಪಿಗಳಿಗೆ ಆದೇಶಿಸಿರುವ ಅಮಾನವೀಯ ಪ್ರಕರಣ ಬೆಳಕಿಗೆ ಬಂದಿದೆ.

ಬಿಹಾರದ ಮುಝಪ್ಪರ್‌ಪುರದ ಕತ್ರಾದಲ್ಲಿ ಘಟನೆ ನಡೆದಿದ್ದು ೧೫ ವರ್ಷದ ಬಾಲಕಿ ಮೇಲೆ ಮೌಲಾನಾ ಮಕ್ಬೂಲ್ ಹಾಗೂ ಮಹಮ್ಮದ್ ಶೋಯೆಬ್ ಅತ್ಯಾಚಾರ ಎಸಗಿದ್ದಾರೆ. ಬಾಲಕಿ ಗರ್ಭಿಣಿಯಾಗಿದ್ದಾಳೆ. ಇದಕ್ಕೆ ಪರಿಹಾರ ಕೇಳಲು ಅಲ್ಲಿನ ಸಮುದಾಯ ಪಂಚಾಯಿತಿ ಮೊರೆಹೋದರೆ ಅದೇ ಮಗುವನ್ನು ಮಾರಾಟ ಮಾಡಿ ಬಂದ ಹಣವನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡುವಂತೆ ಆದೇಶಿಸಿದೆ. ಸಮುದಾಯ ಪಂಚಾಯಿತಿಯಲ್ಲಿ ನ್ಯಾಯ ಸಿಗದ ಕಾರಣ ಬಾಲಕಿ ಮುಜಾಫರ್ಪುರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು ಆರೋಪಿಗಳಾದ ಮೌಲಾನಾ ಮಕ್ಬೂಲ್ ಹಾಗೂ ಮಹಮ್ಮದ್ ಶೋಯೆಬ್ ಬಂಧಿಸಲು ಪೊಲೀಸರು ದಾಳಿ ನಡೆಸುತ್ತಿದ್ದಾರೆ.

Leave a Comment