ಬಾಲಕಿಯ ಪ್ರಾಣಕ್ಕೆರವಾದ ಆಟ!

ಕಾಸರಗೋಡು, ಮಾ.೨೦- ಉಯ್ಯಾಲೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಹಗ್ಗ ಕುತ್ತಿಗೆಗೆ ಬಿಗಿದು ಬಾಲಕಿ ಮೃತಪಟ್ಟ ಘಟನೆ ಮಂಜೇಶ್ವರ ಸಮೀಪದ ಪಾವೂರಿನಲ್ಲಿ ನಡೆದಿದೆ. ಪಾವೂರು ಅಂಚೆ ಕಚೇರಿ ಸಮೀಪದ ಹರೀಶ್ ಎಂಬವರ ಪುತ್ರಿ ಅಶ್ವಿತಾ(೧೦) ಎಂದು ಗುರುತಿಸಲಾಗಿದೆ. ಈಕೆ ಉದ್ಯಾವರ ಗುಡ್ಡೆ ಸರಕಾರಿ ಶಾಲೆಯ ಐದನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು.

ಮನೆ ಬಳಿ ಮರಕ್ಕೆ ಸೀರೆ ಕಟ್ಟಿ ಉಯ್ಯಾಲೆಯಾಡುತ್ತಿದ್ದ ಸಂದರ್ಭದಲ್ಲಿ ಕುತ್ತಿಗೆಗೆ ಹಗ್ಗ ಬಿಗಿದಿದ್ದು, ಮನೆಯವರು ಗಮನಿಸಿ ಗಂಭೀರ ಸ್ಥಿತಿಯಲ್ಲಿದ್ದ ಈಕೆಯನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು.

Leave a Comment