ಬಾಲಕಿಯರೇ ಮತ್ತೆ ಮೇಲುಗೈ :ದ್ವಿತೀಯ ಪಿ.ಯು. ಶೇ. 61.73 ರಷ್ಟು ತೇರ್ಗಡೆ, ಗ್ರಾಮೀಣರೇ ಮುಂದು

ಬೆಂಗಳೂರು, ಏ. ೧೫- ಈ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಎಂದಿನಂತೆ ಬಾಲಕಿಯರು ಮೇಲುಗೈ ಸಾಧಿಸಿದ್ದು, ಒಟ್ಟಾರೆ ಶೇ. 61.73 ರಷ್ಟು ಫಲಿತಾಂಶ ಬಂದಿದೆ. ಪದವಿ ಪೂರ್ವ ಶಿಕ್ಷಣ ಮಂಡಳಿಯಲ್ಲಿಂದು ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಶಿಖಾ ಇವರುಗಳು ಫಲಿತಾಂಶದ ಬಗ್ಗೆ ವಿವರ ನೀಡಿ, ಈ ವರ್ಷ ಒಟ್ಟಾರೆ ಶೇ. 61.73 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಉ‌ಡುಪಿ ಜಿಲ್ಲೆ ಫಲಿತಾಂಶದಲ್ಲಿ ಪ್ರಥಮ ಸ್ಥಾನ ಗಳಿಸಿದ್ದು, ದಕ್ಷಿಣ ಕನ್ನಡ ದ್ವಿತೀಯ ಸ್ಥಾನ, ಕೊಡಗು ತೃತೀಯ ಸ್ಥಾನಗಳಿಸಿದೆ. ಚಿತ್ರದುರ್ಗ ಫಲಿತಾಂಶದಲ್ಲಿ ಕೊನೆಯ ಸ್ಥಾನದಲ್ಲಿದೆ ಎಂದರು.

 15a2

ಈ ವರ್ಷ ಒಟ್ಟು 6,71,653 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ 4,14,587 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಈ ವರ್ಷದ ಫಲಿತಾಂಶದಲ್ಲಿ ಕಲಾ ವಿಭಾಗದಲ್ಲಿ ಶೇ. 50.53, ವಾಣಿಜ್ಯ ವಿಭಾಗದಲ್ಲಿ ಶೇ. 66.39 ರಷ್ಟು, ವಿಜ್ಞಾನ ವಿಭಾಗದಲ್ಲಿ ಶೇ. 66.58 ರಷ್ಟು ಫಲಿತಾಂಶ ಬಂದಿದೆ ಎಂದು ಹೇಳಿದರು.

ಈ ವರ್ಷವೂ ಸಹ ಎಂದಿನಂತೆ ಈ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಹೆಚ್ಚು ತೇರ್ಗಡೆಯಾಗಿದ್ದು, ನಗರ ಪ್ರದೇಶದಲ್ಲಿ ಶೇ. 61.38 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರೆ, ಗ್ರಾಮೀಣ ಭಾಗದಲ್ಲಿ ಶೇ. 62.88 ರಷ್ಟು ಫಲಿತಾಂಶ ಬಂದಿದೆ.

ಕಳೆದ ಸಾಲಿಗೆ ಹೋಲಿಸಿದೆರೆ ಈ ವರ್ಷ ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣ ಏರಿಕೆಯಾಗಿದ್ದು, ಕಳೆದ ವರ್ಷಕ್ಕಿಂತ ಶೇ. 2.17 ರಷ್ಟು ಫಲಿತಾಂಶ ಏರಿಕೆಯಾಗಿದೆ ಎಂದು ಇವರುಗಳು ಹೇಳಿದರು.

ಈ ವರ್ಷವೂ ಫಲಿತಾಂಶದಲ್ಲಿ ಬಾಲಕಿಯರೆ ಮೇಲುಗೈ ಸಾಧಿಸಿದ್ದು, ಬಾಲಕಿಯರ ಉತ್ತೀರ್ಣ ಪ್ರಮಾಣ ಶೇ. 68.24 ರಷ್ಟಿದ್ದರೆ, ಬಾಲಕರ ಉತ್ತೀರ್ಣ ಪ್ರಮಾಣ 55,29 ರಷ್ಟಿದೆ ಎಂದರು.

ಫಲಿತಾಂಶಗಳನ್ನು ಎಲ್ಲ ಕಾಲೇಜು ಹಾಗೂ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.

ಈ ಸಾಲಿನ ಪರೀಕ್ಷೆಯಲ್ಲಿ 54,823 ವಿದ್ಯಾರ್ಥಿಗಳು ಉನ್ನತ ಶ್ರೇಣಿ ಅಂದರೆ ಶೇ. 85 ಕ್ಕಿಂತಲೂ ಹೆಚ್ಚು ಅಂಕ ಪಡೆದಿದ್ದು, 2, 27,301 ವಿದ್ಯಾರ್ಥಿಗಳು ಪ್ರಥಮ ದರ್ಜೆ ಅಂದರೆ ಶೇ. 60 ಕ್ಕಿಂತ ಹೆಚ್ಚು ಶೇ. 85 ಕ್ಕಿಂತ ಕಡಿಮೆ ಅಂಕ ಪಡೆದ್ದಾರೆ.

80357 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ, 52106 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ ಎಂದು ಇವರುಗಳು ವಿವರ ನೀಡಿದರು.

ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ ಶೇ. 55.08 ರಷ್ಟು ಉತ್ತೀರ್ಣರಾಗಿದ್ದರೆ, ಇಂಗ್ಲಿಷ್ ಮಾಧ್ಯಮದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ 66.90 ಫಲಿತಾಂಶ ಬಂದಿದೆ ಎಂದರು.

ಈ ಸಾಲಿನ ಫಲಿತಾಂಶದಲ್ಲಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಲ್ಲಿ ಶೇ. 55.97 ರಷ್ಟು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಶೇ. 53.34 ರಷ್ಟು ಉತ್ತೀರ್ಣರಾಗಿದ್ದಾರೆ. ಸಾಮಾನ್ಯ ವರ್ಗದಲ್ಲಿ ಶೇ. 68.01 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದರು.

ಈ ಸಾಲಿನ ಪರೀಕ್ಷೆಯಲ್ಲಿ ಗಣಿತ ವಿಷಯದಲ್ಲಿ 2447 ವಿದ್ಯಾರ್ಥಿಗಳು 100 ಕ್ಕೆ 100 ರಷ್ಟು ಅಂಕ ಪಡೆದಿದ್ದು, ಉಳಿದಂತೆ ಲೆಕ್ಕ ಶಾಸ್ತ್ರದಲ್ಲಿ 1939, ಸಂಖ್ಯಾ ಶಾಸ್ತ್ರದಲ್ಲಿ 977, ಭೌತಶಾಸ್ತ್ರದಲ್ಲಿ 7, ಮನಶಾಸ್ತ್ರದಲ್ಲಿ 19, ರಸಾಯನ ಶಾಸ್ತ್ರದಲ್ಲಿ 754, ಗಣಕ ವಿಜ್ಞಾನದಲ್ಲಿ 1546, ಜೀವಶಾಸ್ತ್ರ 128, ಬೆಸಿಕ್ ಮ್ಯಾರ್ಥ್ಸ್ 357, ಕನ್ನಡದಲ್ಲಿ 161, ಸಂಸ್ಕೃತದಲ್ಲಿ 852, ಇತಿಹಾಸದಲ್ಲಿ 155, ಅರ್ಥಶಾಸ್ತ್ರದಲ್ಲಿ 303, ಭೂಗೋಳ ಶಾಸ್ತ್ರದಲ್ಲಿ 757, ವ್ಯವಹಾರ ಅಧ್ಯನದಲ್ಲಿ 955, ಸಮಾಜಶಾಸ್ತ್ರದಲ್ಲಿ 58 ಹಾಗೂ ರಾಜ್ಯಶಾಸ್ತ್ರದಲ್ಲಿ 117, ಉರ್ದು 2 ,ಮಲೆಯಾಳಂನಲ್ಲಿ 1, ವಿದ್ಯಾರ್ಥಿಗಳು 100 ಕ್ಕೆ 100 ಅಂಕ ಪಡೆದಿದ್ದಾರೆ ಎಂದು ಅವರು ವಿವರಿಸಿದರು.

ಮೊದಲ ಸ್ಥಾನ ಪಡೆದ ಉಡುಪಿ ಶೇ. 92.20 ಫಲಿತಾಂಶ ಪಡೆದಿದ್ದು, ಎರಡನೇ ಸ್ಥಾನ ಪಡೆದ ದಕ್ಷಿಣ ಕನ್ನಡ ಶೇ. 90.91 ತೃತೀಯ ಸ್ಥಾನ ಪಡೆದ ಕೊಡಗು ಶೇ. 83.31 ರಷ್ಟು ಫಲಿತಾಂಶ ಪಡೆದಿದ್ದು, ಕೊನೆಯ ಸ್ಥಾನದಲ್ಲಿರುವ ಚಿತ್ರದುರ್ಗ ಶೇ. 51.42 ರಷ್ಟು ಸ್ಥಾನಗಳಿಸಿದೆ.

ಬೆಂಗಳೂರು ದಕ್ಷಿಣಜಿಲ್ಲೆ ಫಲಿತಾಂಶದಲ್ಲಿ 8ನೇ ಸ್ಥಾನಗಳಿದ್ದು ಶೇ. 74.25 ಫಲಿತಾಂಶ ಬಂದಿದೆ.

ಬೆಂಗಳೂರು ಉತ್ತರ ಜಿಲ್ಲೆ 11 ಸ್ಥಾನ ಪಡೆದಿದ್ದು, ಶೇ. 72.68 ಫಲಿತಾಂಶ ಬಂದಿದೆ. ಬೆಂಗಳೂರು ಗ್ರಾಮಾಂತರ 10ನೇ ಸ್ಥಾನ ಪಡೆದಿದ್ದು ಶೇ. 72.91 ರಷ್ಟು ಫಲಿತಾಂಶ ಬಂದಿದ್ದು, ಮೈಸೂರು ಜಿಲ್ಲೆ 15 ಸ್ಥಾನದಲ್ಲಿ, ತುಮಕೂರು 17, ಕೋಲಾರ 18ನೇ ಸ್ಥಾನದಲ್ಲಿವೆ ಎಂದರು.

ಈ ಬಾರಿ ವಿಕಲ ಚೇತನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದು, ದೃಷ್ಟಿ ವಿಕಲಚೇತನರು ಶೇ. 76.14, ಶ್ರವಣ ಮತ್ತು ವಾಕ್ ದೋಷವುಳ್ಳವರು ಶೇ. 53.53 ಆರ್ಥೋ ವಿಕಲಚೇತನರು ಶೇ. 69.83, ಬಿಸ್‌ಲೆಕ್ಸಿಯಾ ವಿದ್ಯಾರ್ಥಿಗಳು ಶೇ. 60.35 ರಷ್ಟು ಉತ್ತೀರ್ಣರಾಗಿದ್ದಾರೆ ಎಂದು ಹೇಳಿದರು.

ಈ ಬಾರಿಯ ಪರೀಕ್ಷೆಯಲ್ಲಿ ಸರ್ಕಾರದ ಮೂರು ಪದವಿಪೂರ್ವ ಕಾಲೇಜುಗಳು ಶೂನ್ಯ ಫಲಿತಾಂಶ ಪಡೆದಿದ್ದು, 94 ಅನುದಾನ ರಹಿತ ಪದವಿಪೂರ್ವ ಕಾಲೇಜುಗಳು ಶೂನ್ಯ ಫಲಿತಾಂಶ ಪಡೆದಿವೆ. ಎಂದರು.

ಈ ಬಾರಿ 15 ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಶೇ. 100 ರಷ್ಟು ಫಲಿತಾಂಶ ಬಂದಿದೆ. 63 ಅನುದಾನಿತ ಪದವಿ ಪೂರ್ವ ಕಾಲೇಜುಗಳು ಒಂದು ಅನುದಾನಿತ ಕಾಲೇಜಿನಲ್ಲಿ ಶೇ. 100 ರಷ್ಟು ಫಲಿತಾಂಶ ಬಂದಿದೆ ಎಂದು ಅವರು ಹೇಳಿದರು.

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತರ ಪತ್ರಿಕೆಗಳ ಸ್ಕ್ಯಾನಿಂಗ್ ಪ್ರತಿ ಮತ್ತು ಮರು ಮೌಲ್ಯಮಾಪನಕ್ಕೂ ಆನ್‌ಲೈನ್‌ ಪೇಮೇಂಟ್ ಅವಕಾಶ ಕಲ್ಪಿಸಿದ್ದು, ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಪ್ರತಿಗೆ ಈ ತಿಂಗಳ 17 ರಿಂದ 29 ರವರೆಗೂ ಅರ್ಜಿ ಸಲ್ಲಿಸಬಹುದು. ಮರು ಮೌಲ್ಯಮಾಪನಕ್ಕೆ ಈ ತಿಂಗಳ 29 ರಿಂದ ಮೇ 8 ರವರೆಗೂ ಅರ್ಜಿ ಸಲ್ಲಿಸಬಹುದಾಗಿದೆ. ಉತ್ತರ ಪತ್ರಿಕೆಗಳ ಸ್ಕ್ಯಾನಿಂಗ್ ಪ್ರತಿ ಪಡೆಯಲು ಪ್ರತಿ ವಿಷಯಕ್ಕೆ 530 ರೂ., ಮರು ಮೌಲ್ಯಮಾಪನಕ್ಕೆ ಪ್ರತಿ ವಿಷಯಕ್ಕೆ 1670 ರೂ. ಶುಲ್ಕ ನಿಗದಿ ಮಾಡಲಾಗಿದೆ ಎಂದು ಅವರು ಹೇಳಿದರು.

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಬರುವ ಜೂನ್‌ನಲ್ಲಿ ಪೂರಕ ಪರೀಕ್ಷೆ ನಡೆಸಲಾಗುತ್ತಿದ್ದು, ಈ ಪೂರಕ ಪರೀಕ್ಷೆಗೆ ಶುಲ್ಕ ಪಾವತಿಸಲು ಏ. 30 ಕಡೆಯ ದಿನವಾಗಿದೆ ಎಂದು ಅವರು ಹೇಳಿದರು.

ಫಲಿತಾಂಶ ವಿಚಾರದಲ್ಲಿ ಯಾವುದೇ ಸಮಸ್ಯೆಗಳಿದ್ದರೆ ಇಲಾಖೆಯ ಸಹಾಯವಾಣಿ ಸಂಖ್ಯೆ 080-23083900 ಸಂಪರ್ಕಿಸಬಹುದಾಗಿದೆ.

ದ್ವಿತೀಯ ಪಿಯು ಪರೀಕ್ಷೆಯ ಜಿಲ್ಲಾವಾರು ಸ್ಥಾನದ ವಿವರ

1. ಉಡುಪಿ, ಶೇ. 92.20
2. ದಕ್ಷಿಣ ಕನ್ನಡ ಶೇ. 90.91
3. ಕೊಡಗು ಶೇ. 83.31
4. ಉತ್ತರ ಕನ್ನಡ ಶೇ. 79.59
5. ಚಿಕ್ಕಮಗಳೂರು ಶೇ. 76.42
6. ಹಾಸನ ಶೇ. 75.19
7. ಬಾಗಲಕೋಟೆ ಶೇ. 74.26
8. ಬೆಂಗಳೂರು ದಕ್ಷಿಣ ಶೇ. 74.25
9. ಶಿವಮೊಗ್ಗ ಶೇ. 73.54
10. ಬೆಂಗಳೂರು ಗ್ರಾಮಾಂತರ ಶೇ.  72.91
11. ಬೆಂಗಳೂರು ಉತ್ತರ ಶೇ. 72.68
12. ಚಾಮರಾಜನಗರ ಶೇ. 72.67
13 ಚಿಕ್ಕಬಳ್ಳಾಪುರ ಶೇ. 70.11
14 ವಿಜಯಪುರ ಶೇ. 68.55
15 ಮೈಸೂರು ಶೇ. 68.55
16 ಹಾವೇರಿ ಶೇ. 68.40
17 ತುಮಕೂರುಶೇ. 65.81
18 ಕೋಲಾರ ಶೇ. 65.19
19 ಬಳ್ಳಾರಿ ಶೇ. 64.87
20 ಕೊಪ್ಪಳ 63.15
21 ಮಂಡ್ಯ ಶೇ. 63.08
22. ದಾವಣಗೆರೆ ಶೇ. 62.53
23 ಧಾರವಾಡ ಶೇ. 62.49
24 ರಾಮನಗರ ಶೇ. 62.08
25 ಚಿಕ್ಕೋಡಿ ಶೇ. 60.86
26 ಗದನ ಶೇ. 57.76
27 ರಾಯಚೂರು ಶೇ. 56.73
28ಬೆಳಗಾವಿ ಶೇ. 56.18
29 ಕಲುಬುರ್ಗಿ ಶೇ. 56.09
ಬೀದರ್ ಶೇ. 55.78
31 ಯಾದಗಿರಿ ಶೇ. 53.02
32 ಚಿತ್ರದುರ್ಗ ಶೇ. 51.42

Leave a Comment