ಬಾಲಕನ ಪ್ರಾಣ ತೆಗೆದ ಲಿಫ್ಟ್

ಮಂಗಳೂರು, ಆ.೨೪- ಬಾಲಕನೊಬ್ಬ ಲಿಫ್ಟ್‌ನಲ್ಲಿ ಸಿಲುಕಿ ಮೃತಪಟ್ಟ ಘಟನೆ ವಾಸ್‌ಲೇನ್‌ನ ಅಪಾರ್ಟ್‌ಮೆಂಟ್‌ನಲ್ಲಿ ನಿನ್ನೆ ನಡೆದಿದೆ. ಬಂಟ್ವಾಳ ಮೂಲದ ಅಡ್ಡೂರಿನ ದಂಪತಿಯ ಪುತ್ರ ಮುಹಮ್ಮದ್ ಸಿನಾನ್(೭) ಮೃತಪಟ್ಟ ಬಾಲಕ. ಅಪಾರ್ಟ್‌ಮೆಂಟ್‌ನ ಲಿಫ್ಟ್ ಹಳೆಯದಾಗಿದ್ದು, ಸಿನಾನ್ ಲಿಫ್ಟ್ ಬಾಗಿಲಿನಲ್ಲಿ ಸಿಲುಕಿ ಅಸ್ವಸ್ಥಗೊಂಡಿದ್ದ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಿನಾನ್ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಕದ್ರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Comment