ಬಾರ್‌ನಲ್ಲಿ ಅಶ್ಲೀಲ ನೃತ್ಯ 66 ಮಂದಿ ಯುವತಿಯರ ರಕ್ಷಣೆ

ಬೆಂಗಳೂರು, ಆ. ೧೬- ಯುವತಿಯರಿಂದ ಅಶ್ಲೀಲ ನೃತ್ಯ ಮಾಡಿಸುತ್ತಿದ್ದ ಉಪ್ಪಾರಪೇಟೆಯ ಬ್ಲೂ ಹೆವೆನ್ ಬಾರ್ ಅಂಡ್ ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು, 64 ಮಂದಿಯನ್ನು ಬಂಧಿಸಿದ್ದಾರೆ.
ಅಶ್ಲೀಲ ನೃತ್ಯ ಮಾಡುತ್ತಿದ್ದ 66 ಮಂದಿ ಯುವತಿಯರನ್ನು ರಕ್ಷಿಸಿ, 65,770 ರೂ. ನಗದು, ಮ್ಯೂಸಿಕ್ ಸೆಟ್, ಸ್ವೈಪಿಂಗ್ ಮಿಷನ್ ವಶಪಡಿಸಿಕೊಳ್ಳಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಸೊರಬಾದ ಧರ್ಮ (41), ಶಿವಮೊಗ್ಗದ ಕಲ್ಲೇಶ್ (34), ನಾಗಮಂಗಲದ ನಂಜೇಶ್ (40) ಚೆನ್ನರಾಯಪಟ್ಟಣದ ಮಂಜೇಗೌಡ (40), ನಾಗಮಂಗಲದ ರಂಗಸ್ವಾಮಿ (44), ಶಿವಮೊಗ್ಗದ ಶ್ರೀಕಾಂತ್ (28), ನಾಗರಾಜ್ (46), ಉಡುಪಿಯ ಪ್ರಭಾಕರ್ ಶೆಟ್ಟಿ (42), ಗುಬ್ಬಿಯ ಹರೀಶ್ (27) ಬಂಧಿತ ಆರೋಪಿಗಳಾಗಿದ್ದಾರೆ.
ಇವರಲ್ಲದೆ ಮಂಡ್ಯದ ಬಸವರಾಜ (26), ಚೆಲುವರಾಜ (32), ಕೊಪ್ಪಳದ ಬಸವರಾಜು (39), ನಾಗಮಂಗಲದ ಸುರೇಶ್ (36), ಆಡುಗೋಡಿಯ ಶ್ರೀಧರ್ (32), ಮಂಡ್ಯದ ಉಮೇಶ್ (45), ಅಭಿಷೇಕ್ (25), ಗಂಗಾಧರ್ (25), ಒಡಿಶ್ಸಾದ ಸುಧಾಮ್ (23)ನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಾರ್‌ನಲ್ಲಿದ್ದ 46 ಮಂದಿ ಗಿರಾಕಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ. ದಾಳಿ ವೇಳೆ ತಪ್ಪಿಸಿಕೊಂಡು ಪರಾರಿಯಾಗಿರುವವರ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅವರು ಹೇಳಿದರು.

Leave a Comment